ಬಳ್ಳಾರಿ, ಸೆ.15: ಬಿಜೆಪಿಯವರ ಕುತಂತ್ರದಿಂದ ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ವಿವಾದಕ್ಕೆ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡರು ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನೆಹರೂ ಕಾಲೋನಿಯ ಮಾಜಿ ಸಚಿವ, ಶಾಸಕ ಬಿ.ನಾಗೇಂದ್ರ ಅವರ ನಿವಾಸದಲ್ಲಿ ನಾಗೇಂದ್ರರ ಜನ್ಮ ದಿನ ನಿಮಿತ್ಯ ಏರ್ಪಡಿಸಿದ್ದ ಗಣಪತಿ-ನವಗ್ರಹ ಹಾಗೂ ಸುದರ್ಶನ ಹೋಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.
ಕೇಂದ್ರದ ಬಿಜೆಪಿಯ ನಾಯಕರು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಪಕ್ಷದ ಮುಖಂಡರು ಹಾಗೂ ಶಾಸಕರು ಸಚಿವರನ್ನು ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿದೆ, ಅದರ ಮುಂದುವರಿದ ಭಾಗವೇ ಈಗ ಸಿಬಿಐ ದಾಳಿ ನಡೆದಿದೆ, ನಾವು ಈ ತನಿಖೆಗಳಿಗೆ ಅಂಜುವವರಲ್ಲ ಎಂದರು.
ಮಾಜಿ ಸಚಿವ ನಾಗೇಂದ್ರ ಅವರ ಜನ್ಮ ದಿನದ ನಿಮಿತ್ಯ ಅವರ ಆಪ್ತರು ಬೆಂಬಲಿಗರು ಹೋಮ-ಪೂಜೆ ಏರ್ಪಡಿಸಿದ್ದು, ಇದರಲ್ಲಿ ಭಾಗಿಯಾದೆ ಎಂದು ತಿಳಿಸಿದರು.
ಈ ಸಂದರ್ಭ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಚಿದಾನಂದಪ್ಪ ಯಾದವ, ಮಾಜಿ ಜಿಪಂ ಸದಸ್ಯ ಎ.ಮಾನಯ್ಯ, ಎಲ್.ಮಾರೆಣ್ಣ, ಮಾಜಿ ಮೇಯರ್ ರಾಜೇಶ್ವರಿ, ತಿಮ್ಮನಗೌಡ, ಪಾಲಿಕೆಯ ಸದಸ್ಯರಾದ ಪೇರಂ ವಿವೇಕ, ವಿ.ಕುಬೇರ, ಕಾಂಗ್ರೆಸ್ ಮುಖಂಡರಾದ ಪಿ.ಜಗನ್, ಸುಬ್ಬರಾಯುಡು, ಹಗರಿ ಗೋವಿಂದ, ಹೊನ್ನಪ್ಪ, ಚಾನಾಳ್ ಶೇಖರ್, ಮಂಜುಳಾ, ಪರಶುರಾಮ್, ಅಣ್ಣಾ ನಾಗರಾಜ, ಗೋವರ್ಧನ ರೆಡ್ಡಿ, ಕುರುಬ ನಾಗರಾಜ ಸೇರಿದಂತೆ ಹಲವರು ಹಾಜರಿದ್ದರು.