ವಧು-ವರರ ಸಮಾವೇಶ ಸಮಾಜಕ್ಕೆ ಅತೀ ಅವಶ್ಯವಾಗಿಎೆ :ಪ್ರೊ, ಕೆ  ಡಿ ವಾಲಿಕಾರ

Ravi Talawar
 ವಧು-ವರರ ಸಮಾವೇಶ ಸಮಾಜಕ್ಕೆ ಅತೀ ಅವಶ್ಯವಾಗಿಎೆ :ಪ್ರೊ, ಕೆ  ಡಿ ವಾಲಿಕಾರ
WhatsApp Group Join Now
Telegram Group Join Now
ಘಟಪ್ರಭಾ :  ವಧು -ವರರ ಸಮಾವೇಶ ನಡೆಯುತ್ತಿರುವದು  ಇಂದಿನ ಕಾಲದಲ್ಲಿ ಸಮಾಜದಲ್ಲಿರುವ ಸರ್ವ ಸಮಾಜದ ನಾಗರೀಕರಿಗೆ ಅತೀ ಅವಶ್ಯವಾಗಿಎೆ, ಮತ್ತು ವರದಕ್ಷಿಣೆ, ಹಾಗೂ ಮೂಢ ನಂಬಿಕೆಗಳಿಗೆ ಜೋತು ಬೀಳದೆ ತಮ್ಮ ಮಕ್ಕಳಿಗೆ ಸರಳ ವಿವಾಹ ಮಾಡಲು ಎಲ್ಲರೂ ಮುಂದಾಗಬೇಕು ಎಂದು ಘಟಪ್ರಭಾದ ಡಿ ಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪ್ರೊ, ಕೆ ಡಿ ವಾಲಿಕಾರ ಹೇಳಿದರು.
   ಅವರು ಪಟ್ಟಣದ  ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸಂದೀಪ್  ಪೇಟಕರ್‌ ಅವರ ಜನ್ಮದಿನದ ಪ್ರಯುಕ್ತ  ಶ್ರೀ ಯಲ್ಲಮ್ಮ ದೇವಿ ವಧು-ವರರ ಸೂಚಕ ಕೇಂದ್ರ (ಕರ್ನಾಟಕ- ಮಹಾರಾಷ್ಟ್ರದ ವ್ಯಾಪ್ತಿಯ) ದವರು ಏರ್ಪಡಿಸಿದ್ದ ಸರ್ವ ಧರ್ಮ ವಧು-ವರರ ಸಮಾವೇಶದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಡಾ.ಕೆಂಪಣ್ಣ ಚೌಕಶಿ ಮಾತನಾಡಿ ಈಗಿನ ಕಾಲದಲ್ಲಿ ತಮ್ಮ ಮಕ್ಕಳ ವಿವಾಹ ಮಾಡಲು ಸೂಕ್ತ ಸಂಗಾತಿಗಳನ್ನು ಸಂಶೋಧನೆ ಮಾಡಲು ಇಂತಹ ಸಮಾವೇಶಗಳು ಸಹಾಯಕವಾಗುತ್ತದೆ ಅದನ್ನು ಘಟಪ್ರಭಾದಲ್ಲಿ ಏರ್ಪಡಿಸಿದ್ದಕ್ಕೆ ಸಂಘಟಕರಿಗೆ ಧನ್ಯವಾದ ಹೇಳಿದರು.
       ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ ಮಾತನಾಡಿ ಘಟಪ್ರಭಾದಲ್ಲಿ ಯಾವುದೇ ಸಾಮಾಜಿಕ ಕಾರ್ಯಗಳಿಗೆ ರಾಘವೇಂದ್ರ ಸ್ವಾಮಿಗಳ ಮಠ ಮತ್ತು ಬ್ರಾಹ್ಮಣ ಸಮುದಾಯ ಸಂಪೂರ್ಣ ಸಹಕಾರ ನೀಡುತ್ತದೆ ಎಂದರು.ಸಂದರ್ಭದಲ್ಲಿ ಹಿರಿಯರಾದ ಡಿ. ಎಂ ದಳವಾಯಿ, ಸುರೇಶ್ ಪಾಟೀಲ, ಭೂಪಾಲ ಖೆಮಲಾಪುರೆ, ಜಗದೀಶ್ ಕಟ್ಟೀಮನಿ, ಎಂ ಜಿ ಬಡೋದೆ, ಸುಭಾಷ್ ದಡ್ಡೀಕರ, ಮಲ್ಲಪ್ಪ ಹುಕ್ಕೇರಿ, ಚಿರಾಕಲಿಶಾ ಮಕಾಂದಾರ್, ಹರೀಶ್ ಕಾಳೆ, ಉಮೇಶ್ ನಾಯಿಕ, ಕೃಷ್ಣಾ ಗಂಡವ್ವಗೋಳ, ಲವಕುಶ್ ಕುಡ್ಡೆಮ್ಮಿ, ಅರವಿಂದ ದೇಶಪಾಂಡೆ ,ರಾಘವೇಂದ್ರ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ,
 ಕನ್ನಡ ಸೇನೆ ಗೋಕಾಕ ತಾಲೂಕಿನ ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಸಂಘಟಕರಾದ ರಾಜುಗೌಡ ಪಾಟೀಲ, ಶ್ರೀಮತಿ ಸಾರಿಕಾ ಪೇಟಕರ, ಶ್ರೀಮತಿ ಪೂಜಾ ಪ್ರಭು ಅಂತರಗಂಗಿ, ಸಂದೀಪ್ ಪೇಟಕರ. ಕೃಷ್ಣಾ ಗಂಡವ್ವಗೋಳ ,ಲವಕುಶ ಕುಡ್ಜೆಮ್ಮಿ, ಮುಂತಾದವರು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ ಪ್ರಾರಂಭದಲ್ಲಿ ಪ್ರಾರ್ಥನೆ, ನಡೆಸಿ ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು  ಸುಮಾರು ಎರಡು ನೂರಕ್ಕೂ ಹೆಚ್ಚು ವಧು-ವರರು ಕಾರ್ಯಕ್ರಮದ ಲಾಭವನ್ನು ಪಡೆದರು.
WhatsApp Group Join Now
Telegram Group Join Now
Share This Article