ನವದೆಹಲಿ, ಸೆಪ್ಟೆಂಬರ್ 15: ಭಾರತದ ಅತ್ಯಂತ ಜನಪ್ರಿಯ ಪಾವತಿ ಸಿಸ್ಟಂ ಆದ ಯುಪಿಐನ ನಿಯಮಗಳಲ್ಲಿ ಮತ್ತೆ ಬದಲಾವಣೆ ಆಗಿದೆ. ಕೆಲ ವಿಭಾಗಗಳ ಪಾವತಿಗೆ ಟ್ರಾನ್ಸಾಕ್ಷನ್ ಮಿತಿಯನ್ನು ಹೆಚ್ಚಿಸಲಾಗಿದೆ. ಐದು ಲಕ್ಷ ರೂನಿಂದ ಹಿಡಿದು 10 ಲಕ್ಷ ರೂವರೆಗೆ ಒಂದು ದಿನದ ವಹಿವಾಟು ಮಿತಿಯನ್ನು ಏರಿಸಲಾಗಿದೆ. 2025ರ ಸೆಪ್ಟೆಂಬರ್ 15ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತದೆ. ಇನ್ಷೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸರ್ವಿಸ್ಗಳಿಗೆ ಹಣ ಪಾವತಿಸಲು ಇದ್ದ ಮಿತಿಯನ್ನು ಏರಿಸಲಾಗಿದೆ.
ಯುಪಿಐ ಟ್ರಾನ್ಸಾಕ್ಷನ್ ಮಿತಿ ಹೆಚ್ಚಳ; ಸೆಪ್ಟೆಂಬರ್ 15ರಿಂದ ಈ ಹೊಸ ನಿಯಮ ಜಾರಿಗೆ
