ಧರ್ಮಸ್ಥಳ ಯೋಜನೆಗಳಿಂದ ಮಹಿಳೆಯರಲ್ಲಿ ಸ್ವಾವಲಂಬಿ ಜೀವನ : ಮಹಾಂತೇಶ ಕೌಜಲಗಿ

Ravi Talawar
ಧರ್ಮಸ್ಥಳ ಯೋಜನೆಗಳಿಂದ ಮಹಿಳೆಯರಲ್ಲಿ ಸ್ವಾವಲಂಬಿ ಜೀವನ : ಮಹಾಂತೇಶ ಕೌಜಲಗಿ
WhatsApp Group Join Now
Telegram Group Join Now
ಬೈಲಹೊಂಗಲ. ಇಲ್ಲಿನ ಶ್ರೀ ಧರ್ಮಸ್ಥಳ ಗ್ರಾಮೀಣಭಿವೃದ್ಧಿ ಯೋಜನೆ ವತಿಯಿಂದ   ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ವಿಚಾರಗೋಷ್ಠಿ     ಕಾರ್ಯಕ್ರಮವನ್ನು ಆಯೋಜಿಸಲಾಯಿತು.
       ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕರಾದ ಮಹಾಂತೇಶ ಕೌಜಲಗಿ ವಹಿಸಿದ್ದರು. ಉದ್ಘಾಟಕರಾಗಿ ಧಾರವಾಡ ಪ್ರಾದೇಶಿಕ ಕಚೇರಿ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲಾ, ಬೈಲಹೊಂಗಲ ಪೊಲೀಸ್ ಸಬ್ ಇನ್ಸ್ಪೆಕ್ಟರ್  ಎಫ್ ವಾಯ ಮಲ್ಲೂರ,    ಬೆಳಗಾಂ ಜಿಲ್ಲೆಯ  ನಿರ್ದೇಶಕರಾದ  ಸತೀಶ ನಾಯ್ಕ, ಪುರಸಭಾ ಸದಸ್ಯರಾದ
 ಅಂಬಿಕಾ ಕೊಡಬಾಗಿ, ಶ್ರೀ ಉದ್ಭವ ಚನ್ನಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ  ಗಂಗಪ್ಪ ಗುಗ್ಗರಿ,ಶ್ರೀಮತಿ ನಿರ್ಮಲ ಬಟ್ಟಲ, ಸಂಪನ್ಮೂಲ ವ್ಯಕ್ತಿ ಬೆಳಗಾಂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ
ರತ್ನ  ಗೋಧಿ, ವಿಠ್ಠಲ್ ಪೀಸೆ, ತಾಲೂಕಿನ  ಯೋಜನಾಧಿಕಾರಿಗಳಾದ ವಿಜಯ ಕುಮಾರ, ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ಯೋಜನೆ ಅಧಿಕಾರಿ ಸುಧಾ  ಅವರುಗಳು   ವಿಚಾರಗೋಷ್ಠಿ ಕಾರ್ಯಕ್ರಮಕ್ಕೆ   ದೀಪ ಬೆಳಗಿಸುವ ಮೂಲಕ  ಚಾಲನೆ ನೀಡಿದರು.
    ಶಾಸಕರಾದ ಮಹಾಂತೇಶ ಕೌಜಲಗಿಯವರು ಕಾರ್ಯಕ್ರಮ  ಉದ್ದೇಶಿಸಿ ಮಾತನಾಡಿ   ಧರ್ಮಸ್ಥಳ ಯೋಜನೆ ಮಾಡುವ ಕೆಲಸ ಕಾರ್ಯಗಳು  ಪೂಜ್ಯರು ನೀಡುವ ಸೌಲಭ್ಯಗಳ ಬಗ್ಗೆ ಪ್ರಶಂಸೆ  ವ್ಯಕ್ತಪಡಿಸಿದರು.  ಬಾಂಕಿನಿಂದ ದೊರಕುವ ಸಾಲ ಸೌಲಭ್ಯಗಳ ಬಗ್ಗೆ ಮಹಿಳೆಯರನ್ನು  ಸ್ವಉದ್ಯೋಗದತ್ತ ಕೊಂಡೊಯ್ಯುವ ಕೆಲಸ ಮಾಡುತ್ತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.           ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲಾ ಮಾತನಾಡಿ  ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ನಡೆದ ಬಂದ ದಾರಿ ಕ್ಷೇತ್ರದಿಂದ ನಡೆಯುವಂತಹ  ಅಭಿವೃದ್ಧಿ ಕಾರ್ಯಗಳು ಸ್ವಸಹಾಯ ಸಂಘಗಳ ಮಹತ್ವ ಮಾಶಾಸನ ವಿತರಣೆ ವಾತ್ಸಲ್ಯ ಮನೆ ರಚನೆ ಜನಮಂಗಳ ಕಾರ್ಯಕ್ರಮ ಸಮುದಾಯ ಅಭಿವೃದ್ಧಿ ವಿಭಾಗದಿಂದ ನೀಡುವ ಅನುದಾನಗಳ ಬಗ್ಗೆ ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ ಸ್ವಸಹಾಯ ಸಂಘದವರಿಗೆ ನೀಡುವ ಪ್ರಗತಿ ನಿಧಿ ಬಗ್ಗೆ  ಮಾಹಿತಿ ನೀಡಿದರು ವಾತ್ಸಲ್ಯ ಮನೆ ಮಂಜೂರಾತಿ ಮತ್ತು ಕ್ರಿಟಿಕಲ್ ಫಂಡ್  ಮಂಜೂರಾತಿ ಪತ್ರ ಹಸ್ತಾಂತರ ಮಾಡಲಾಯಿತು.
         ಕಾರ್ಯಕ್ರಮದ   ನಿರೂಪಣೆ ಪ್ರಾದೇಶಿಕ ಕಚೇರಿ ಜ್ಞಾನವಿಕಾಸ ವಿಭಾಗದ ಯೋಜನಾಧಿಕಾರಿ ಸುಧಾ ಮೇಡಂ, ಸ್ವಾಗತವನ್ನು  ತಾಲೂಕಾ ಯೋಜನಾಧಿಕಾರಿ  ವಿಜಯ್ ಕುಮಾರ, ವಂದನೆಯನ್ನು  ಜ್ಞಾನವಿಕಾಸ ಸಮನ್ವಯ ಅಧಿಕಾರಿ ಶೈಲಾ ಜಕ್ಕನವರ, ಕೃಷಿ ಅಧಿಕಾರಿ ರವಿ, ನಾಗರಾಜ್ ಸಮಸ್ತ   ತಾಲೂಕಿನ 25 ಜ್ಞಾನವಿಕಾಸ ಸೇವಾ ಪ್ರತಿನಿಧಿಗಳು ಸರ್ವಜ್ಞಾನವಿಕಾಸ ಸಂಘದ ಸದಸ್ಯರ  ಸಮ್ಮುಖದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲಾಯಿತು.
WhatsApp Group Join Now
Telegram Group Join Now
Share This Article