ಹಸಿರು ಕ್ರಾಂತಿ ವರದಿ , ಜಮಖಂಡಿ;ವಿದ್ಯಾರ್ಥಿಗಳ ಸಾಧನೆಯೇ ಗುರುಗಳನ್ನು ಸಂತೋಷ ಪಡಿಸುವ ಸಂಗತಿಯಾಗಿದೆ ಎಂದು ಓಲೆ ಮಠದ ಆನಂದ ದೇವರು ಅಭಿಪ್ರಾಯ ಪಟ್ಟರು. ನಗರದ ಮುರುಗೋಡು ಕಲ್ಯಾಣ ಮಂಟಪದಲ್ಲಿ ಭಾನುವಾರ ಸರಕಾರಿ ಪ್ರೌಢಶಾಲೆ ಹುನ್ನೂರಿನ 2003-2004 ನೇ ಸಾಲಿನ 10ನೇ ತರಗತಿ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ ಗುರುನಮನ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಬದುಕನ್ನು ಕಟ್ಟಿಕೊಡುವ ಶಿಕ್ಷಕರು, ಶಿಶ್ಯರ ಸಾಧನೆಯಿಂದ ಸಂತೋಷ ಪಡುತ್ತಾರೆ. ಕಠಿಣವಾದ ಕಲ್ಲನ್ನು ಮೂರ್ತಿಕಾರರು ಕೆತ್ತಿ ಸುಂದರವಾದ ವಿಗ್ರಹ ತಯಾರಿಸುವಂತೆ ಗುರುಗಳು ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಾರೆ. ಹಿಂದೆ ಗುರು ಮುಂದೆ ಗುರಿ ಇರಬೇಕು ಅಂದರೆ ಜೀವನ ಸೊಗಸಾಗಿರುತ್ತದೆ. ಗುರುವನ್ನು ದೇವರಿಗೆ ಹೋಲಿಸಿದ್ದಾರೆ ಅವರನ್ನು ಸ್ಮರಿಸುವದು, ಆದರಿಸುವದು, ಗೌರವಿಸುವದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಗಾಳಿಪಟ ಎತ್ತರಕ್ಕೆ ಹಾರಲು ಬೇಕಾದ ಸೂತ್ರ, ಬಾಲಂಗೊಚಿ, ದಾರದಂತೆ ಗುರುಗಳು ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳನ್ನು ಎತ್ತರಕ್ಕೆ ಏರಿಸಿರುತ್ತಾರೆ ಎಂಬುದನ್ನು ಮರೆಯ ಬಾರದು ಎಂದು ಹೇಳಿದರು. ವಿಶೇಷ ಉಪನ್ಯಾಸ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಿಶ್ರಾಂತ ನಿರ್ದೇಶಕರು ಸಿದ್ದರಾಮ ಮನಹಳ್ಳಿ ಮಾತನಾಡಿ, ಬೀಜ ಮೊಳಯೊಡೆದು ಹೇಗೆ ದೊಡ್ಡ ಮರ ಆಗುವ ಹಾಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರ, ತಿಳಿಸಿ ಸಮಾಜದಲ್ಲಿ ಪ್ರಜ್ಞಾವಂತ ಪ್ರಜೆಯನ್ನಾಗಿ ರೂಪಿಸುವರು ಶಿಕ್ಷಕರು.ಬಡವನಾಗಿ ಹುಟ್ಟುವುದು ತಪ್ಪಲ್ಲ ಬಡವನಾಗಿ ಸಾಯುವುದು ತಪ್ಪು.ಇರುವುದರೊಳಗೆ ಏನಾದರೂ ಸಾಧಿಸಬೇಕು.ಕಂಡಿದ್ದಕ್ಕೆ ಕಣ್ಣೆ ಸಾಕ್ಷಿ ಮಾಡಿದ್ದಕ್ಕೆ ಮಾತೆ ಸಾಕ್ಷಿ ಎಂಬಂತೆ.ಗುರುವಿನ ಮಾರ್ಗದರ್ಶನದೊಂದಿಗೆ ವಿದ್ಯಾರ್ಥಿಗಳು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ತಿಳಿಸಿದರು.
2003-04ನೇ ಸಾಲಿನ ಪ್ರೌಢ ಶಾಲಾ ಗುರು ವೃಂದದ ಐ. ಪಿ. ರಾಠೋಡ,ಮಂಜುನಾಥ ಮಾನೆ, ಕೆ. ಎಮ್. ಪೂಜಾರಿ, ಎಲ್. ಕೆ. ವಿಮಠ, ಕೆ. ಕೆ. ಮಠ, ಎ. ಎಮ್. ಅವಟಿ, ಬಿ. ಎಸ್. ಕುಂಬಾರ,, ಎಸ್. ಕೆ. ಕಳ್ಳಿಮಠ, ಎಸ್. ಎಮ್. ದಯಾಗೊಂಡ, ಎಮ್. ಏ. ಮಾಗಿ, ಎಮ್. ಎ. ದೇಶಪಾಂಡೆ, ವಿ. ಟಿ. ಪಡತಾರೆ, ಎಂ. ಪಿ. ಜೀರಗಾಳ,ಶ್ರೀಮತಿ ಬಾಣದ ಮೇಡಂ, ಶ್ರೀಮತಿ ವೀಣಾ ಹಾವನೂರ ಶ್ರೀಮತಿ ಎಮ್. ಸಿ. ಹೋಸಮಠ, ಬಸವರಾಜ ಮಲಕನ್ನವರ, ಎಸ್. ಎಮ್. ಬಿರಾದಾರ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವರಾಜ್ ಬಿರಾದರ ಅನಿಸಿಕೆ ವ್ಯಕ್ತಪಡಿಸಿದರು, ಲಿಂಗಾನಂದ ಗವಿಮಠ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು, ಹಳೆಯ ವಿದ್ಯಾರ್ಥಿ ಸತೀಶ ಕಡಪಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಸಬರದ ಹಾಗೂ ಸಂಗಡಿಗರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು ಕುಮಾರ, ರಾಹುಲ, ಪ್ರ. ಬಳುಲಗಿಡದ.ಸ್ವಾಗತಿಸಿದರು. ಸಂಗಮೇಶ ಗಾಣಿಗೇರ, ಸರಿತಾ ಸಿರಗುಪ್ಪಿ, ನಿರೂಪಣೆ ಮಾಡಿದರು. ಶಿವಾನಂದ ಹಿರೇಮಠ ವಂದಿಸಿದರು.