ಬಳ್ಳಾರಿ ಸೆ 15.ವೀರಶೈವ ವಿದ್ಯಾವರ್ಧಕ ಸಂಘವು ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಶ್ರೀಮತಿ. ಅಲ್ಲಂ ಸುಮಂಗಳಮ್ಮ ಮಹಿಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರವನ್ನು ಉದ್ಘಾಟನಾ ಮಾಡಿದ ಟಿ ಸಿ ಎಸ್ ಸಂಸ್ಥೆಯ ಪ್ರಾದೇಶಿಕ ಮುಖ್ಯಸ್ಥರಾದ ನಾಗಪ್ಪ ಬಕ್ಕಣ್ಣನವರ್ ಮಾತನಾಡುತ್ತಾ ನನ್ನ ಯಶಸ್ಸಿನ ಹಿಂದೆ ನನ್ನೆಲ್ಲಾ ಶಿಕ್ಷಕರ ಶ್ರಮವಿದೆ. ಶಿಕ್ಷಕರು ಸಮಾಜದ ಶಿಲ್ಪಿಗಳು ಹಾಗೂ ಸಮಾಜದ ಬೆನ್ನಲುಬು. ಶಿಕ್ಷಕರು ಹೊಸ ತಂತ್ರಜ್ಞಾನ ತಿಳಿದು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳ ಕಡೆ ಗಮನ ಕೊಡಬೇಕಾಗಿದೆ.
ಮಾತೃ ಭಾಷೆಯ ಮೇಲೆ ಅವರಿಗೆ ಪ್ರಭುತ್ವ ಬರುವಂತೆ ಮಾಡಬೇಕಾಗಿದೆ. ವೀ ವಿ ಸಂಘದವರು ಶಿಕ್ಷಕರ ಸೇವೆಯನ್ನು ಪರಿಗಣಿಸಿ ಅವರನ್ನು ಸನ್ಮಾನಿಸುತ್ತಿರುವುದು ಅಭಿನಂದನಾರ್ಹ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಗಣ್ಯರನ್ನು ಸ್ವಾಗತಿಸಿ ಪ್ರಸ್ತಾವಿಕ ನುಡಿಯನ್ನು ಹಂಚಿಕೊAಡ ವೀ ವಿ ಸಂಘದ ಕಾರ್ಯದರ್ಶಿಗಳಾದ ಡಾ|| ಅರವಿಂದ ಪಟೇಲ್ ಅವರು ಮಾತಾಡುತ್ತಾ ಶಿಕ್ಷಕರಿಂದ ಶಿಕ್ಷಣ ಕ್ಷೇತ್ರ ಗೌರವಿತವಾಗಬೇಕು, ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಸ್ಥೆಯಾದ ವೀ ವಿ ಸಂಘವು ಹಾನಗಲ್ ಶ್ರೀ ಕುಮಾರ ಮಹಾಸ್ವಾಮಿಗಳ ಮುಂದಾಲೋಚನೆಯಿAದ ಸ್ಥಾಪಿಸಲ್ಪಟ್ಟಿತು. ಕಳೆದ ೧೦೦ ವರ್ಷಗಳಿಂದ ಈ ಸಂಸ್ಥೆ ಗುಣ ಮಟ್ಟದ ಶಿಕ್ಷಣ ನೀಡುತ್ತಾ ಬಂದಿದೆ. ಬದಲಾದ ವ್ಯವಸ್ಥೆಯಲ್ಲಿ ಮಕ್ಕಳಿಗೆ ಕಲಿಸುವುದು ಶಿಕ್ಷಕರಿಗೆ ಸವಾಲಾಗಿದೆ. ಈ ಸವಾಲನ್ನು ಸ್ವೀಕರಿಸಿ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಗಣ್ಯರನ್ನು ಸ್ವಾಗತಿಸಿದರು. ವೀ ವಿ ಸಂಘದಲ್ಲಿ ಸಾರ್ಥಕ ಸೇವೆ ಸಲ್ಲಿಸಿ ೨೦೨೪-೨೫ ನೇ ಶೈಕ್ಷಣಿಕ ಸಾಲಿನಲ್ಲಿ ನಿವೃತ್ತರಾದ ೧೨ ಶಿಕ್ಷಕರಿಗೆ ಗಣ್ಯರು ಸನ್ಮಾನಿಸಿದರು. ಸನ್ಮಾನಿತರ ಪರವಾಗಿ ಎ ಡಿ ಬಿ ಕಾಲೇಜಿನ ಪ್ರಾಧ್ಯಾಪಕರಾದ ಡಾ ತಿಪ್ಪೇಸ್ವಾಮಿ, ಡಾ ಎಂ ಸದಾಶಿವ ಅವರು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮಾಜಿ ಕಾರ್ಯದರ್ಶಿಗಳಾದ ಶ್ರೀ ಚೋರನೂರು ಕೊಟ್ರಪ್ಪ ಅವರು ಮಾತನಾಡುತ್ತಾ ಶಿಕ್ಷಕರು ಸಾಯುವವರೆಗೆ ಶಿಕ್ಷಕನಾಗಬೇಕು ಶಿಕ್ಷಕ ಸೋತರೆ ದೇಶ ಸೋತಂತೆ ಎಂದು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ|| ಕಣೇಕಲ್ ಮಹಾಂತೇಶ್ ಅವರು ಮಾತನಾಡುತ್ತಾ ಅಧ್ಯಕ್ಷನಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತದ್ದು ನನ್ನ ಭಾಗ್ಯ. ನಮ್ಮ ವೀ ವಿ ಸಂಘ ಕಲ್ಯಾಣ ಕರ್ನಾಟಕದಲ್ಲಿ ಪ್ರತಿಷ್ಠಿತ ಸಂಘವಾಗಿದೆ. ಪ್ರತಿಯೊಬ್ಬ ನೌಕರರು ಶ್ರಮವಹಿಸಿ ದುಡಿದು ಸಂಘಕ್ಕೆ ಕೀರ್ತಿ ತರಬೇಕೆಂದು ಮನವಿ ಮಾಡಿ, ನಿವೃತ್ತ ಅಧ್ಯಾಪಕರಿಗೆ ಅಭಿನಂದನೆಗಳನ್ನು ಅರ್ಪಿಸಿದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿಗಳಾದ ಯಾಳ್ಪಿ ಮೇಟಿ ಪಂಪನಗೌಡ, ಶ್ರೀಮತಿ. ಎ.ಎಸ್ ಎಂ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಕಾತ್ಯಾಯಿನಿ ಎಂ ಮರಿದೇವಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸಿ ಮೋಹನರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗಂಧರ್ವ ಸಂಗೀತ ಶಾಲೆಯ ಮಕ್ಕಳು ವಚನಗಾಯನ ಹಾಗೂ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು. ಪ್ರಾಚಾರ್ಯರಾದ ಡಾ.ದೂಪಂ ಸತೀಶ್ ಗಣ್ಯರನ್ನು ಪರಿಚಯಿಸಿದರು. ಶ್ರೀಮತಿ. ಎ.ಎಸ್ ಎಂ ಕಾಲೇಜಿನ ಅಧ್ಯಾಪಕಿಯರು ನಿವೃತ್ತರನ್ನು ಪರಿಚಯಿಸಿದರು. ಪ್ರಾಚಾರ್ಯರಾದ ಡಾ.ಬಿ ಗೋವಿಂದ ರಾಜು ಅವರು ಸರ್ವರಿಗೂ ವಂದನೆಗಳನ್ನು ಸಲ್ಲಿಸಿದರು..ಎಂ.ಪಿ ವೀರೇಶಸ್ವಾಮಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ವೀ ವಿ ಸಂಘದ ವಿವಿಧ ಶಾಲಾ ಕಾಲೇಜಿನ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಷ್ಟçಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.