ಹುಬ್ಬಳ್ಳಿ,ಸೆ.೧೩ : ಗುಜರಾತ್ ನಲ್ಲಿ ನೆಲೆಗೊಂಡಿರುವ ವಿಶೇಷ ರಾಸಾಯನಿಕ ಸಂಯುಕ್ತಕಗಳ ತಯಾರಕ ಸಂಸ್ಥೆ ಸುಪ್ರೀತ್ ಕೆಮಿಕಲ್ಸ್ ಲಿಮಿಟೆಡ್ ಕಂಪನಿ ಇದೀಗ ತನ್ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಓ) ಗಾಗಿ ಸೆಕ್ಯುರಿಟೀಸ್ ಆಂಡ್ ಎಕ್ಸ್ ಚೇಂಜ್ ಬೋರ್ಡ್ (ಸೆಬಿ) ಆಫ್ ಇಂಡಿಯಾ ದಲ್ಲಿ ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (ಡಿಆರ್‌ಎಚ್‌ಪಿ)ನ್ನು ಸಲ್ಲಿಸಿದೆ.
ಕಂಪನಿಯ ವಿಶೇಷತೆ: ಈ ಕಂಪನಿಯು ೧೫ಕ್ಕಿಂತ ಹೆಚ್ಚು ಸಂಕೀರ್ಣ ರಾಸಾಯನಿಕ ಕ್ರಿಯೆಗಳನ್ನು ಮತ್ತು ೧೫ ಹಂತಗಳವರೆಗಿನ ಬಹು- ಹಂತದ ಘಟಕ ಕಾರ್ಯಾಚರಣೆಗಳು ಮತ್ತು ಪ್ರಕ್ರಿಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ವಿಶೇಷ ರಾಸಾಯನಿಕ ಸಂಯುಕ್ತಕಗಳ ಕಂಪನಿಗಳಲ್ಲಿ ಒಂದಾಗಿದೆ. ಇದರಿಂದಾಗಿ, ಇದು ವಿವಿಧ ರೀತಿಯ ಅಂತಿಮ ಉತ್ಪನ್ನಗಳು ಮತ್ತು ಉಪಕರಣಗಳ ಅಗತ್ಯಗಳನ್ನು ಪೂರೈಸಬಲ್ಲದು. ಅರೋಮ್ಯಾಟಿಕ್ ಅಮೈನ್ಸ್, ಸಲ್ಫೋನಾಮೈಡ್ಸ್, ಮತ್ತು ಅಮಿನೋ ಫೆನಾಲ್ಸ್ ಕುಟುಂಬಗಳ ಆಧಾರದ ಮೇಲೆ ಎಂಸಿಎ, ಸಲ್ಫೋನಾಮೈಡ್ಸ್ ಮತ್ತು ಎನ್‌ಎಪಿಎಸ್‌ಎ ನಂತಹ ಕೆಲವು ವಿಶೇಷ ರಾಸಾಯನಿಕ ಸಂಯುಕ್ತಕಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಪ್ರಮುಖ ತಯಾರಕರಲ್ಲಿ ಈ ಕಂಪನಿಯು ಒಂದಾಗಿದೆ.
ಐಪಿಓ ಯೋಜನೆ: ಕಂಪನಿಯು ಐಪಿಓ ಮೂಲಕ ?೪೯೯ ಕೋಟಿಗಳವರೆಗಿನ ಈಕ್ವಿಟಿ ಷೇರುಗಳ ತಾಜಾ ಸಂಚಿಕೆ ಮೂಲಕ ಹಣ ಸಂಗ್ರಹಿಸಲು ಯೋಜಿಸಿದೆ.
ಈ ಐಪಿಓದಿಂದ ಗಳಿಸಲಾಗುವ ಆದಾಯದಲ್ಲಿ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ೪ ಸ್ಥಾಪಿಸಲು ಬೇಕಾಗುವ ಬಂಡವಾಳ ವೆಚ್ಚಕ್ಕೆ ?೩೧೦ ಕೋಟಿಗಳ ಧನಸಹಾಯ, ಕೆಲವು ಸಾಲಗಳ ಮರುಪಾವತಿ/ ಮುಂಗಡ ಪಾವತಿಗೆ ?೬೫ ಕೋಟಿಗಳವರೆಗಿನ ಹಣ ಬಳಕೆ ಮತ್ತು ಉಳಿದ ಮೊತ್ತವನ್ನು ಸಾಮಾನ್ಯ ಕಾರ್ಪೊರೇಟ್ ಉದ್ದೇಶಗಳಿಗೆ ಬಳಸಲಾಗುವುದು ಎಂದು ಕಂಪನಿ ಯೋಜಿಸಿದೆ.
ಕಂಪನಿಯ ವೈಶಿಷ್ಟ್ಯ: ಸುಪ್ರೀತ್ ಕೆಮಿಕಲ್ಸ್ ಸಂಕೀರ್ಣ ರಾಸಾಯನಿಕ ಕ್ರಿಯೆಗಳು ಮತ್ತು ಬಹು ಹಂತದ ಘಟಕ ಕಾರ್ಯಾಚರಣೆಗಳ ನಿರ್ವಹಣೆಯಲ್ಲಿ ಅತ್ಯುತ್ತಮ ಪರಿಣತಿಯನ್ನು ಹೊಂದಿದ್ದು, ವಿಶೇಷ ರಾಸಾಯನಿಕ ಸಂಯುಕ್ತಕಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿದೆ. ಇದರ ಉತ್ಪನ್ನಗಳು ಟೆಕ್ಸ್ ಟೈಲ್ಸ್, ಪಾರ್ಮಾಸ್ಯೂಟಿಕಲ್ಸ್, ಪರ್ಫಾರ್ಮೆನ್ಸ್ ಕೆಮಿಕಲ್ಸ್, ವೈಯಕ್ತಿಕ ಆರೈಕೆ, ಕೃಷಿ ರಾಸಾಯನಿಕಗಳು ಮತ್ತು ಇತರ ವಿವಿಧ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.
ಆರ್ಥಿಕ ಕಾರ್ಯಕ್ಷಮತೆ (ಆರ್ಥಿಕ ವರ್ಷ ೨೦೨೫): ಕಂಪನಿಯ ಲಾಭದ ಬೆಳವಣಿಗೆ ಆರ್ಥಿಕ ವರ್ಷ ೨೦೨೫ರಲ್ಲಿ ಶೇ.೧೦೩ರಷ್ಟು ಏರಿಕೆಯಾಗಿದ್ದು, ಹಿಂದಿನ ವರ್ಷದ ?೨೫.೬ ಕೋಟಿಯಿಂದ ?೫೧.೯ ಕೋಟಿಗೆ ತಲುಪಿದೆ. ಆದಾಯವು ೫೧.೨% ಏರಿಕೆಯಾಗಿದ್ದು, ೨೦೨೪ ಆರ್ಥಿಕ ವರ್ಷದ ?೨೩೯.೮ ಕೋಟಿಗೆ ಹೋಲಿಸಿದರೆ ?೩೬೨.೫ ಕೋಟಿಗೆ ತಲುಪಿದೆ.ಐಐಎಫ್‌ಎಲ್ ಕ್ಯಾಪಿಟಲ್ ಸರ್ವಿಸಸ್ ಲಿಮಿಟೆಡ್ ಈ ಸಂಚಿಕೆಯ ಏಕೈಕ ಬುಕ್ ರನಿಂಗ್ ಲೀಡ್ ಮ್ಯಾನೇಜರ್ ಆಗಿದೆ.