ಗೆದ್ದು ಬಾ ಇಂಡಿಯಾ ಪ್ರಶಿಕ್ಷಣಾರ್ಥಿಗಳಿಂದ ಶುಭ ಹಾರೈಕೆ

Pratibha Boi
ಗೆದ್ದು ಬಾ ಇಂಡಿಯಾ ಪ್ರಶಿಕ್ಷಣಾರ್ಥಿಗಳಿಂದ ಶುಭ ಹಾರೈಕೆ
WhatsApp Group Join Now
Telegram Group Join Now

ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ ಸೆ.೧೪ರಂದು ದುಬೈನಲ್ಲಿ ನಡೆಯುತ್ತಿರುವ ಏ?ಕಪ್-೨೦೨೫ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆದ್ದು ಬರಲಿ ಎಂದು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರಶಿಕ್ಷಣಾರ್ಥಿಗಳು ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ದಾನಯ್ಯ ಮಠಪತಿ ಮಾತನಾಡಿ, ಇದು ೧೭ನೇ ಏ? ಟಿ೨೦ ಆಗಿದ್ದು, ಇದರಲ್ಲಿ ಭಾರತ ಒಟ್ಟು ೮ಬಾರಿ ವಿಜಯಶಾಲಿಯಾಗಿದೆ. ಐಸಿಸಿ ನಡೆಸುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತ್ರ ಭಾರತ ಪಾಕಿಸ್ತಾನ ಎದುರಾಳಿಗಳಾಗಿ ಭಾಗವಹಿಸುತ್ತವೆ. ಭಾರತ ಕ್ರಿಕೆಟ್ ತಂಡದ ಬಲಿ? ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟಿ-೨೦ಯಿಂದ ನಿವೃತ್ತಿಯಾಗಿರುವುದು ಬೇಸರದ ಸಂಗತಿಯಾಗಿದ್ದರೂ ಜಗತ್ತು ಅವರಿಲ್ಲದ ಭಾರತ ತಂಡ ಹೇಗಾಡುತ್ತದೆ ಎಂದು ನೋಡಲು ಅತ್ಯಂತ ಕಾತುರದಿಂದ ವೀಕ್ಷಿಸಲಿದ್ದಾರೆ. ಮುಂಬರುವ ೨೦೨೮ರಲ್ಲಿ ಇಟಲಿಯಲ್ಲಿ ಜರುಗುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಟಿ-೨೦ ಮ್ಯಾಚ್‌ಗಳು ಜರುಗಲಿವೆ. ಹೀಗಾಗಿ ಈ ಪಂದ್ಯಾವಳಿಯು ನಿರ್ಣಾಯಕತ್ವವನ್ನು ಹೊಂದಿದೆ. ಅದೇನೇ ಇದ್ದರೂ ಈ ಬಾರಿಯೂ ಕೂಡ ಖಂಡಿತವಾಗಿಯೂ ಭಾರತ ಗೆಲ್ಲಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ವೇಳೆ ಪ್ರಾಧ್ಯಾಪಕ ದಾನಯ್ಯ ಮಠಪತಿ, ಸುಧಾಕರ ಚೌವ್ಹಾಣ, ಚನ್ನು ಕತ್ತಿ ಮಾತನಾಡಿ, ಭೀಕರ ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಭಾರತದ ಆಪರೇ?ನ್ ಸಿಂಧೂರ ಸೇನಾ ಕಾರ್ಯಾಚರಣೆ ಉತ್ತರದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವೇ? ಹೊಗೆಯಾಡುತ್ತಿದೆ. ಇಂತಹ ಬಿಗುವಿನ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದು ಅ? ಸುಲಭದ ಮಾತಲ್ಲ. ಈ ಬಾರಿ ಟಿ-೨೦ ಏ? ಕಪ್‌ನಲ್ಲಿ ಪಂದ್ಯಾವಳಿಗಿಂತಲೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆ ಬಳಿಕ ಆಪರೇ?ನ್ ಸಿಂಧೂರ ಸೇನಾ ಕಾರ್ಯಾಚರಣೆ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಇದರ ಮಧ್ಯೆ ಜಗತ್ತು ಈ ಒಂದು ಆಟವನ್ನು ನೋಡಲು ಕಾತುಕರಾಗಿ ನಿಂತಿದೆ. ಭಾರತ ಬಲಿ? ತಂಡವಾಗಿ ಹೊರ ಹೊಮ್ಮುತ್ತಿರುವುದು ನಮಗೆ ದೊಡ್ಡ ಹೆಮ್ಮೆ ಎಂದರು.
ಈ ವೇಳೆ ಕಾಲೇಜಿನ ಆವರಣದಲ್ಲಿ ಜಿತೇಗಾ ಜಿತೇಗಾ ಇಂಡಿಯಾ ಜಿತೇಗಾ, ಗೆದ್ದು ಬಾ ಇಂಡಿಯಾ, ಭಾರತ್ ಮಾತಾ ಕೀ ಜೈ, ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ ಎಂಬ ಕೂಗುಗಳು ಕೇಳಿ ಬಂದವು.

WhatsApp Group Join Now
Telegram Group Join Now
Share This Article