ಬೆಳಗಾವಿ: ನಿವೃತ್ತ ಪ್ರಾಚಾರ್ಯರ ಹಾಗೂ ಇನ್ನತರ ಶಿಕ್ಷಣ ಕ್ಷೇತ್ರದ ಸ್ನೇಹಬಳಗ ಸಹ್ಯಾಧ್ರಿನಗರ ಬೆಳಗಾವಿ ವತಿಯಿಂದ ಡಾ ರಾಧಾಕೃಷ್ಣನ್ ಅವರ ಜನ್ಮದಿನ ಹಾಗೂ “ಶಿಕ್ಷಕರ ದಿನೋತ್ಸವವನ್ನು ಅತೀ ವಿಜೃಂಭಣೆಯಿಂದ ೫ ಸೆಪ್ಟಂಬರ ೨೦೨೫ ರಂದು ಪೂಜಾ ಕಾರ್ಯಕ್ರಮದೊಂದಿಗೆ ಆಚರಿಸಲಾಯಿತು.
ಪ್ರಾರಂಭದಲ್ಲಿ ನಿವೃತ್ತ ಪ್ರಾಚಾರ್ಯ ಎಸ್ ಆರ್ ಹೀರೇಮಠ ಡಾ ರಾಧಾಕೃಷ್ಣನ್ ಅವರು ಪೋಟೋಕ್ಕೆ ಹಾರ ಹಾಕಿ ಪೂಜೆ ನೆರವೇರಿಸಿ, ಎಲ್ಲರನ್ನೂ ಸ್ವಾಗತಿಸಿದರು. ಅಧ್ಯಕ್ಷರಾದ ನಿವೃತ್ತ ಜೆ.ಡಿಪಿಯು ಶಿಕ್ಷಣ ಇಲಾಖೆ ಬೆಂಗಳೂರು ಬೆಳಗಾವಿ ಅವರಿಗೆ ಮಾಲಾರ್ಪಣೆ ಮಾಡಿ, ಎಸ್ ಆರ್ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡುತ್ತ ನಮ್ಮ ಶಿಕ್ಷಣ ತಜ್ಞರ ಮಾತೇ ಹೂವು ಅವರಯಡಿನಾದಾವುತವೇ ಮಕರಂದ ಪ್ರತಿನಿತ್ಯ ತಾಪತ್ರಯಗಳಲ್ಲಿ ಸಿಕ್ಕಿಬಿದ್ದು ಪರಿತಪಿಸುವ ಮಾನವನಿಗೆ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳುಲು ಜ್ಞಾನವೆಂಬುದು ವರ ಪ್ರಸಾದ ನಮ್ಮ ಉದ್ರೇಕ ಸ್ವಭಾವದ ಉನ್ಮ ಆದದ ಮನಸ್ಸನ್ನು ತೆಪ್ಪಗಾಗಿಸುವ ಶಕ್ತಿ ವಿದ್ಯೆ ಹಾಗೂ ಜ್ಞಾನಕ್ಕಿದೆ. ನಮ್ಮ ಮೆದುಳು ಚಟುವಟಿಕೆ ಹೃದಯ ಚಟುವಟಿಕೆಗೆ ತಕ್ಕ ವಾತಾವರಣ ಕಲ್ಪಿಸುವ ಶಕ್ತಿ ಸಂಗೀತ ಹಾಘೂ ಜ್ಞಾನಕ್ಕಿದೆ.ವಿದ್ಯೆ ಹಾಘೂ ಜ್ಞಾನಕ್ಕೆ ಪ್ರತ್ಯಕ ಭಾಷೆಯಿಲ್ಲ, ವಿದ್ಯೆಯಲ್ಲಿ ಭಾವವೇಭಾಷೆ ಅದರಲ್ಲಿ ಆತ್ಮೀಯತೆ, ಮಾರ್ದವತೆ, ಆದ್ರೆಧತೆ ಇರಬೇಕು. ಇದು ಮನುಷ್ಯನ ವ್ಯಕ್ತಿತ್ವವನ್ನು ವಿಕಸನಗೊಳಿಸುವ ಶೂರೂಪವೆನ್ನಬಹುದು. ಇದೆಲ್ಲವೂ ಕೈಗೂಡಬೇಕಾದರೆ ಶಿಕ್ಷಕರ (ಗುರುವಿನ) ಮಾರ್ಗದರ್ಶನ ಶಿಷ್ಯರಿಗೆ ಅತೀ ಅವಶ್ಯ ಇಂತಹ ಶಿಕ್ಷಕರೇ ಇಂದು ಶಿಕ್ಷಣ ಕ್ಷೇತ್ರದಲ್ಲಿ ಇರಲೇಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು. ರಾಷ್ಟ್ರ ಪ್ರಶಸ್ತಿ ವಿಜೇಥ ನಿವೃತ್ತ ಶಿಕ್ಷಕ ಶರಣಗೌಡ ಎಸ್ ಪಾಟೀಲ ಅವರು ಮಾತನಾಡುತ್ತ ಸರಳವಾದ ಸಾತ್ವಿಕ ಜೀವನ ರೂಢಿಸಿಕೊಂಡಿದ್ದ ಡಾ ರಾಧಾಕೃಷ್ಣನ್ ಅವರು ತತ್ವಜ್ಞಾನಿಯಾಗಿ ಪ್ರಥಮ ಉಪರಾಷ್ಟ್ರಪತಿಯಾದ ಎರಡನೇ ರಾಷ್ಟ್ರಪತಿಯಾಗಿ ದೇಶದ ಉನ್ನತಿಗಾಗಿ ಸದಾ ಪ್ರಯತ್ನಶೀಲರಾಗಿದ್ದರು. ಅವರ ಜ್ಮದಿನವನ್ನೇ ” ಶಿಕ್ಷಕರ ದಿನೋತ್ಸವ” ವಾಗಿ ಆಚರಿಸಲ್ಪಡುತ್ತಲಿದೆ. ಎಂದುತಿಳಿಸಿದರು.
ಅಧ್ಯಕ್ಷರಾದ ಎಸ್ ಆರ್ ಹೆಗಡೆ ಮಾತನಾಡುತ್ತ ” ಗುರುವಿನ ಗುಲಾಮನಾಗುವತನಕ ದೊರೆಯಣ್ಣ ಮುಕುತಿ” ಎಂದು ಹೇಳುತ್ತ ಉತ್ಸಾಹವೇ ಯೌವ್ವನ, ನಿರುತ್ಸಾಹವೇ ವೃದ್ಯಾಪ್ಪ ಎಂಬುದನ್ನು ಎಲ್ಲ ಶಿಕ್ಷಕ ಸಮೂಹದವರು ತಿಳಿದಿರಬೇಕು ಅರಿವೇ ಗುರು ಎಂಬುದನ್ನೂ ಸಹ ತಿಳಿದಿರಬೇಕು. ಬದುಕಿನ ಅವಧಿ ತುಂಬಾ ಚಿಕ್ಕದು. ಗುಣವನ್ನಾಗಲೀ ಧನವನ್ನಾಗಲೀ ತನ್ನ ವ್ಯಕ್ತಿತ್ವ ಬಲದಿಂದಲೇ ಸಂಪಾದಿಸಿದಾಗ ಅದಕ್ಕೆ ಬೆಲೆ ಹೆಚ್ಚು ಅದನ್ನು ವೃದ್ಧಿಸಿಕೊಳ್ಳಬೇಕು. ಡಾ ರಾಧಾಕೃಷ್ಣನ್ ರು “ತಾನೂ ಒಬ್ಬೆಲ್ಲರಂತೆ ಶಿಕ್ಷಣ” ಎನ್ನುವುದನ್ನು ಅರಿತು ತಮ್ಮ ಜನ್ಮದಿನವನ್ನು “ಶಿಕ್ಷಕರ ದಿನೋತ್ಸವನ್ನಾಗಿ ಆಚರಿಸಲು ಕರೆಕೊಟ್ಟದ್ದು ಅವರ ವ್ಯಕ್ತಿತ್ವಕ್ಕೆ ತಂದ ಗೌರವವಾಗಿದೆ ಎಂದು ತಿಳಿಸಿದರು. ಎಸ್ ಎಸ್ ಪಾಟೀಲ ಅವರು ವಂಸನೆಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಪಿ ಎಫ್ ಅಂಜಿ ರಾದುರ್ಗ ಶಿವರಾಕಾಂತ, ನಿವೃತ್ತ ಎಸ್.ಪಿ ಕಾಂಬಳೆ ಶರಣಗೌಡ ಗೋಡಬೋತಿ ರಮೇಶ, ಕುಕ್ಕರೆ, ಆಕಾಶಶಂಕರ ಹೆಗಡೆ ಇನ್ನೂ ಹಲವಾರು ಶಿಕ್ಷಕರು ಭಾಗವಹಿಸಿ ಸಮಾರಂಭಕ್ಕೆ ಉತ್ಸಾಹ ತುಂಬಿದರು.
ಗುರುವಿಗೆ ವಿದ್ವಾಂಸನೇ ಶಿಷ್ಯ
