ಕಾಗವಾಡ: ತಾಲ್ಲೂಕಿನ ಶೇಡಬಾಳ:ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿಯಿಂದ. ಸಾರ್ವಜನಿಕರು, ವಿದ್ಯಾರ್ಥಿಗಳು, ಮಕ್ಕಳು ಓಡಾಡಲು ಭಯ ಪಡುವಂತಾಗಿದೆ ಜನಸಾಮಾನ್ಯರಿಗೆ ತುಂಬ ತೊಂದರೆ ಉಂಟಾಗುತ್ತಿದ್ದು ತಕ್ಷಣವೇ ಪಟ್ಟಣಪಂಚಾಯತಯವರು ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸಬೇಕು ಎಂದು ಜಯಕರ್ನಾಟಕ ಸಂಘಟನೆಯವರು ಮನವಿ ಸಲ್ಲಿಸಿದ್ದಾರೆ.
ಪಟ್ಟಣದ ವಿವಿಧ ಕಾಲನಿಗಳಲ್ಲಿ ಬೀದಿ ನಾಯಿಗಳು ಗುಂಪು ಗುಂಪಾಗಿ ಎಲ್ಲೆಂದರಲ್ಲಿ ಓಡಾಡುತ್ತಿವೆ. ಈ ನಾಯಿಗಳು ಹಂದಿ, ಮಂಗ, ಬೆಕ್ಕು, ಸಾಕು ನಾಯಿ ಮತ್ತು ಕೋಳಿಗಳ ಮೇಲೆ ದಾಳಿ ಮಾಡುತ್ತಿವೆ. ಈಗಾಗಲೇ ಅನೇಕ ಮಂಗಗಳು ಮತ್ತು ಹಂದಿಗಳು ಇವುಗಳ ದಾಳಿಯಿಂದ ಮೃತಪಟ್ಟಿವೆ. ರಸ್ತೆಯಲ್ಲಿ ನಡೆದು ಹೋಗುವ ಸಾರ್ವಜನಿಕರು, ಮಕ್ಕಳ ಮೇಲೂ ಎರಗುತ್ತಿವೆ. ಅಲ್ಲದೆ, ರಸ್ತೆಯಲ್ಲಿ ಬೈಕಿಗೆ ಅಡ್ಡ ಬರುತ್ತಿರುವುದರಿಂದ ಅನೇಕ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಲ್ಲ ಘಟನೆಗಳು ಗಮನಕ್ಕಿದ್ದರೂ ಪಟ್ಟಣ ಪಂಚಾಯಿತಿಯವರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಕೂಡಲೇ ಪಪಂನವರು ನಾಯಿಗಳನ್ನು ಹಿಡಿದು ದೂರ ಪ್ರದೇಶದಲ್ಲಿ ಬಿಟ್ಟು ಬರಬೇಕು ಎಂದು.ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ. ವಿನೋದ ಕಾಂಬಳೆ, ಕಾರ್ಯದರ್ಶಿ ಆದಿನಾಥ್ ಲಾಟಕರ, ಸಂಜು ಅಲಾಸೆ,ಅಣ್ಣು ಚೌಗಲೆ,ಸುಕುಮಾರ ಪಾಟೀಲ,ಅಣ್ಣಾಸಾಬ ಫಲಕೆ, ಅಜೀತ ನರಸಗೌಡರ,ರಾವಸಾಬ, ಕಿರಣ ಯಾದಗೌಡರ.ಹಾಗೂ ಎಲ್ಲಾ ಸಂಘದ ಸದಸ್ಯರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.