ಹಾಟ್ ಏರ್ ಬಲೂನ್‌ನ ಎಂಜಿನ್‌ನಲ್ಲಿ ಬೆಂಕಿ; ಅಪಾಯದಿಂದ ಪಾರಾದ ಮಧ್ಯಪ್ರದೇಶದ ಸಿಎಂ

Ravi Talawar
ಹಾಟ್ ಏರ್ ಬಲೂನ್‌ನ ಎಂಜಿನ್‌ನಲ್ಲಿ ಬೆಂಕಿ;  ಅಪಾಯದಿಂದ ಪಾರಾದ ಮಧ್ಯಪ್ರದೇಶದ ಸಿಎಂ
WhatsApp Group Join Now
Telegram Group Join Now

ಭೋಪಾಲ್‌: ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರು ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದ ಹಾಟ್ ಏರ್ ಬಲೂನ್‌ನ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಮಂದಸೋರ್‌ನಲ್ಲಿ ನಡೆದಿದ್ದು, ಮೋಹನ್ ಯಾದವ್ ಅವರು ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ಬೆಳಿಗ್ಗೆ ಮಂದಸೋರ್‌ನ ಗಾಂಧಿ ಸಾಗರ್ ಅರಣ್ಯ ಪ್ರದೇಶದಲ್ಲಿ ಮೋಹನ್ ಯಾದವ್ ಹಾಟ್‌ ಏರ್‌ ಬಲೂನ್‌ನಲ್ಲಿ ಹಾರಾಟ ನಡೆಸಲು ಸಿದ್ಧತೆ ನಡೆಸಿದ್ದರು. ಅಷ್ಟರಲ್ಲೇ ಎಂಜಿನ್‌ನ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಭದ್ರತಾ ಸಿಬ್ಬಂದಿ ಅವರನ್ನು ಕೆಳಗಿಳಿಸಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ಹಾಟ್ ಏರ್‌ ಬಲೂನ್‌ ಹಾರಾಟದಲ್ಲಿದ್ದಾಗ ಬೆಂಕಿ ಹೊತ್ತಿಕೊಂಡಿದ್ದರೆ ಭಾರೀ ಅನಾಹುತ ಸಂಭವಿಸುತ್ತಿತ್ತು. ಅದೃಷ್ಟವಶಾತ್‌ ನೆಲದಲ್ಲಿದ್ದಾಗ ಈ ಅವಘಡ ಸಂಭವಿಸಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

WhatsApp Group Join Now
Telegram Group Join Now
Share This Article