ಹುನಗುಂದ: ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರ ಮಳೆಯಿಂದ ಅತಿವೃಷ್ಟಿ ಸಂಭವಿಸಿ ಸಾವಿರಾರು ಹೆಕ್ಟರ ಪ್ರದೇಶದಲ್ಲೀನ ರೈತರ ಬೆಳೆಗಳು ಸಂಪೂರ್ಣ ಹಾನಿಯಾಗಿದ್ದು.ಸರ್ಕಾರ ಬೆಳೆ ಹಾನಿ ಪರಿಹಾರ, ಬೆಳೆ ಸಾಲ ಮನ್ನಾ, ಬೆಳೆ ವಿಮೆಯನ್ನು ತಕ್ಷಣವೇ ಒದಗಿಸುವಂತೆ ಒತ್ತಾಯಿಸಿ ಶನಿವಾರ ಗಚ್ಚಿನಮಠದ ಶ್ರೀಗಳ ನೇತೃತ್ವದಲ್ಲಿ ವಿವಿಧ ರೈತಪರ ಸಂಘಟನೆಗಳು ಪಟ್ಟಣದ ಗಚ್ಚಿನಮಠದಿಂದ ನೂರಾರು ರೈತ ಮುಖಂಡರ ಪ್ರತಿಭಟನೆ ಲಿಯ ಮೂಲಕ ತಹಶೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿಕೊಂಡ ಗಚ್ಚಿನಮಠದ ಅಮರೇಶ್ವರ ದೇವರು ಮಾತನಾಡಿ ಅತಿವೃಷ್ಟಿಯಿಂದ ಹಾಳಾಗಿರುವ ರೈತರ ಬೆಳೆಗಳಲ್ಲಿ ಕೇವಲ ತೊಗರಿ ಮತ್ತು ಹೆಸರಿನ ಬೆಳೆಗಳನ್ನು ಮಾತ್ರ ಸಮೀಕ್ಷೆ ಮಾಡಲಾಗುತ್ತಿದ್ದು. ಉಳಿದ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ, ಸೂರ್ಯಕಾಂತಿ ಸೇರದಂತೆ ಇತರೆ ಬೆಳೆಗಳು ಸಮೀಕ್ಷೆ ಮಾಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಸರ್ಕಾರ ನಿರಂತರ ಮಳೆಯಿಂದ ಹಾನಿಗೊಳಗಾದ ಎಲ್ಲ ಬೆಳೆಗಳ ಪೂರ್ಣ ಪ್ರಮಾಣದ ವೈಮಾನಿಕ ಸಮೀಕ್ಷೆಯನ್ನು ಮಾಡಿ, ಪ್ರತಿ ಎಕರೆಗೆ ಸೂಕ್ತ ಹಣವನ್ನು ನಿಗದಿಗೊಳಿಸಿ, ಯೋಗ್ಯ ಪರಿಹಾರವನ್ನು ಒದಗಿಸಬೇಕೆಂದು ಒತ್ತಾಯಿಸಿದರು.
ಸಾಮಾಜಿಕ ಹೋರಾಟಗಾರ ನಾಗರಾಜ ಹೊಂಗಲ್ ಮಾತನಾಡಿ ರಾಜ್ಯದ ಮಳೆ ಬಾರದ ಪ್ರದೇಶಕ್ಕೆ ಈ ಬಾರಿ ಕಳೆದ ನಾಲ್ಕು ತಿಂಗಳಿಂದ ದಾಖಲೆ ಮಳೆಯಾಗಿ ಅತಿವೃಷ್ಟಿ ಸಂಭವಿಸಿ ಹುನಗುಂದ ಮತ್ತು ಇಳಕಲ್ ತಾಲೂಕಿನ ರೈತರ ಬದುಕಿಗೆ ಆಧಾರವಾಗಿರುವ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಆಗ?ದವರಿಗೆ ನಮ್ಮ ರಾಜ್ಯದಲ್ಲಿ ಸತತ ಮಳೆಯಿಂದ ಸುಮಾರು ೪೦ ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲೀನ ವಿವಿಧ ಬೆಳೆಗಳು ಹಾನಿಯಾಗಿವೆ ಅಂತ ಕಂದಾಯ ಇಲಾಖೆಯಲ್ಲಿ ವರದಿ ಇದೆ. ಇನ್ನು ೧೦ ಸಾವಿರ ಎಕರೆಗೂ ಹೆಚ್ಚು ತೋಟಗಾರಿಕೆಯ ಬೆಳೆ ಹಾನಿಯಾಗಿದೆ ಎನ್ನುವ ಅಂದಾಜು ಕೂಡಾ ಇದೆ. ಆದರೆ ವಾಸ್ತವಾಗಿ ನೋಡಿದರೆ ಅಧಿಕೃತವಾಗಿ ಇದಕ್ಕಿಂತಲೂ ಎರಡು ಮೂರು ಪಟ್ಟು ರೈತರ ಬೆಳೆ ಹಾನಿಯಾಗಿದೆ. ಸರ್ಕಾರ ಕಂದಾಯ, ಕೃಷಿ,ತೋಟಗಾರಿಕೆ ಸಹಯೋಗದಲ್ಲಿ ಡ್ರೋನ್ ಆಧಾರಿತ ಸಮೀಕ್ಷೆಯನ್ನು ನಡೆಸಿ, ವಾಸ್ತವ ಅಂಕಿ ಅಂಶಗಳನ್ನು ಪಡೆದುಕೊಂಡು ತಕ್ಷಣವೇ ರೈತರಿಗೆ ಮಧ್ಯಾಂತರ ಪರಿಹಾರವನ್ನು ಘೋಷಿಸಬೇಕು. ಪೂರ್ಣ ಪ್ರಮಾಣದ ಸಮೀಕ್ಷೆಯ ನಂತರದ ಅಂಕಿ ಅಂಶಗಳ ಲೆಕ್ಕಾಚಾರದ ಮೇಲೆ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಘೋಷಿಸಬೇಕು ಎಂದರು.ವೇ.ಮೂ. ಮಹಾಂತಯ್ಯ ಗಚ್ಚಿನಮಠ,ಹಿರಿಯ ರೈತ ಮುಖಂಡ ಮಲ್ಲನಗೌಡ ತುಂಬದ,ಸಂಗಣ್ಣ ನಾಗರಾಳ, ಬಸಯ್ಯ ಹಿರೇಮಠ, ಮಾಜಿ ಸೈನಿಕ ವೆಂಕಣ್ಣ ಹಾಗೆದಾಳ ಮಾತನಾಡಿದರು.sಈ ಸಂದರ್ಭದಲ್ಲಿ ನವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಶ್ರೀಕೃ? ಜಾಲಿಹಾಳ, ಶೇಖರಪ್ಪ ಬಾದವಾಡಗಿ, ಚನ್ನಬಸಪ್ಪ ಇಳಕಲ್ಲ, ಶಂಕರಗೌಡ ಹೊಸಮನಿ, ನಾಗಪ್ಪ ಕರಂಡಿ, ಹುಚ್ಚಪ್ಪ ಮಾವಿನಮರದ, ಹನಮಂತ ನಡುವಿನಮನಿ, ಶಾಂತಪ್ಪ ಹೊಸಮನಿ, ಗಿರಮಲ್ಲಪ್ಪ ಹಳಪೇಟೆ, ನಾರಾಯಣ ಕುರಕುಂಟಾ, ಮಲ್ಲಪ್ಪ ಕಡಪಟ್ಟಿ, ಕಿಡಿಯಪ್ಪ ಹೂಲಗೇರಿ ಸೇರಿದಂತೆ ಅನೇಕ ರೈತ ಮುಖಂಡರು ಭಾಗವಹಿಸಿದ್ದರು.
ಪರಿಹಾರ ಮತ್ತು ಬೆಳೆ ವಿಮೆ ನೀಡುವಂತೆ ಆಗ್ರಹಿಸಿ ರೈತರಿಂದ ಪ್ರತಿಭಟನೆ
