ರನ್ನ ಬೆಳಗಲಿ:ಸೆ.೧೨., ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸರಕಾರಿ ಸಂಘದ ೨೦೨೪-೨೫ನೇ ಸಾಲಿನ ೮೧ನೇ ವಾರ್ಷಿಕ ಸರ್ವ ಸಾಧಾರಣ ಸಭೆಯು ಶ್ರೀ ಬಂದ ಲಕ್ಷ್ಮೀ ದೇವಸ್ಥಾನದ ಕವಿ ಚಕ್ರವರ್ತಿ ರನ್ನ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ದಂದು ಜರುಗಿತು.
ಧರೆಪ್ಪ ಸಾಗಲೀಕರ ರೈತರಿಗಾಗಿ ಸ್ಥಾಪನೆಗೊಂಡ ಸಹಕಾರಿ ಸಂಘವು ರೈತರ ಆರ್ಥಿಕ ಸರ್ವೋತೊಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಪ್ರಸ್ತುತ ಪಟ್ಟಣದ ರೈತ ಬಾಂಧವರು ಹದಿನಾಲ್ಕು ಕೋಟಿ ಸಾಲ ಪಡೆದು ತಮ್ಮ ಕೃಷಿ ಬದಕನ್ನ ಸುಗಮಗೊಳಿಸಿದ್ದಾರೆ. ೨೨.೯೫ ಲಕ್ಷ ಲಾಭಾಂಶ ಜೊತೆಗೆ ನಮ್ಮ ಸಹಕಾರಿ ಸಂಘವು ಅಭಿವೃದ್ಧಿಯತ್ತ ಮುನ್ನಡೆ ಹೊಂದಿದ್ದು ಸಂತಸ ತಂದ್ದಿದೆ. ಅದರಂತೆ ಉಳಿತಾಯ ಖಾತೆಯನ್ನು ಹೊಂದಿ ಕೃಷಿಯಿಂದ ಬಂದ ಲಾಭಾಂಶವನ್ನು ಉಳಿತಾಯ ಮಾಡುವ ನಿಟ್ಟಿನಲ್ಲಿ ರೈತ ಬಾಂಧವರು ಸಹಕಾರ ನೀಡಿ ಸಂಘದಲ್ಲಿ ಎಫ್ ಡಿ ಮಾಡಬೇಕೆಂದು ತಿಳಿಸಿದರು.
ಪರಮ ಪೂಜ್ಯ ಶ್ರೀ ಸಿದ್ದರಾಮ ಶಿವಯೋಗಿಗಳು ಸಿದ್ಧಾರೂಢ ಆಶ್ರಮ ಮುಧೋಳ ಪೂಜ್ಯರು ಸಾನಿಧ್ಯ ವಹಿಸಿದರು. ಚಿನ್ನಪ್ಪ ಪೂಜೇರಿ ಅಧ್ಯಕ್ಷತೆವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಸವರಾಜ ಹಿಕಡಿ ಮುಖ್ಯ ಕಾರ್ಯನಿರ್ವಾಹಕರು ೩,೪೩೫ ಸದಸ್ಯರನ್ನು ಹೊಂದಿದ ಊರಿನ ಅತ್ಯಂತ ದೊಡ್ಡ ಸಹಕಾರಿ ಸಂಘವೆ ನಮ್ಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವಾಗಿದೆ. ರೈತ ಅಭಿವೃದ್ಧಿಗಾಗಿ ಅನೇಕ ಸರ್ಕಾರದಲ್ಲಿರುವ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಾ, ಪ್ರಸ್ತುತ ವ?ದಿಂದ ಡಿಸಿಸಿ ಬ್ಯಾಂಕು ಕೂಡ ಜಾರಿಗೊಂಡು ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.
ಪ್ರಸ್ತುತ ವರುಷದ ಸಾಧಕ ವಿದ್ಯಾರ್ಥಿಗಳಾದ ರೂಪಾ ಹಳ್ಳೂರ, ಬಸವರಾಜ ನಂದಿಗೋಣಿ,ಆಕಾಶ ಕಂಬಳಿ, ಸಮರ್ಥರಾಜು,ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಪುರಸ್ಕಾರ ನೀಡಿದರು.
ಪಂಡಿತ ಪೂಜಾರಿ, ಕಾಶಿನಾಥ ಕೂಗಾಟೆ ರೈತ ಪ್ರತಿನಿಧಿಗಳಾಗಿ ಮಾತನಾಡಿದರು. ಮುಖಂಡರಾದ ಶಿವನಗೌಡ ಭೀಮನಗೌಡ ಪಾಟೀಲ, ಮಹಾಲಿಂಗಪ್ಪ ಲಾಗದವರ, ಉಪಾಧ್ಯಕ್ಷರಾದ ಶಿವಯ್ಯ ಮೆಟಗುಡ್ಡ, ನಿರ್ದೇಶಕರಾದ ಗಿರೀಶ ಶಿರೋಳ, ನಿಂಗಪ್ಪ ಆರೇನಾಡ, ಶಂಕರ ಆರೇನಾಡ, ಯಮನಪ್ಪ ಚಂದಪ್ಪನವರ, ಪರಮಾನಂದ ಸನಹಟ್ಟಿ, ಲಕ್ಷ್ಮಿ ಹುಣ್ಣೂರ, ಸಂತಪ್ಪ ಮಲಾವಡಿ, ಭೀಮವ್ವ ನ್ಯಾಮಗೌಡ, ಹನಮಂತ ದೊಡಹಟ್ಟಿ, ಕೇತ್ರಾಧಿಕಾರಿಗಳಾದ ಸವಿತಾ ಮಾರಂಗಪ್ಪನವರ ವೇದಿಕೆ ಮೇಲೆ ಉಪಸ್ಥಿತರಿದ್ದರು.ರೈತ ಬಾಂಧವರು ಹಾಗೂ ಪಟ್ಟಣದ ಮುಖಂಡರು ಹಾಜರಿದ್ದರು. ವಿಠ್ಠಲ ಬಿರಾಜನವರ ಸ್ವಾಗತಿಸಿದರು, ಯೋಗ ಶಿಕ್ಷಕರ ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮಕ್ಕೆ ನಿರೂಪಿಸಿ ವಂದಿಸಿದರು.
ರನ್ನ ಬೆಳಗಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ೨೨.೯೫ ಲಕ್ಷ ಲಾಭ
