ಮಹಾಲಿಂಗಪುರ: ನಗರದ ಬಸ್ ನಿಲ್ದಾಣದಲ್ಲಿ ೧೦ ಗ್ರಾಂ ಸಿಕ್ಕ ಚಿನ್ನವನ್ನು ಮಹಾಲಿಂಗಪುರ ನಗರದ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಣಾಧಿಕಾರಿ ಎಸ್ ಬಿ ಜಂಬಗಿ ಮರಳಿ ನೀಡಿದ್ದಾರೆ.
ಈಗಿನ ಆಧುನಿಕ ಕಾಲದಲ್ಲಿ ಒಂದು ರೂಪಾಯಿ ಸಿಕ್ಕರು ತಮ್ಮ ಜೇಬಿಗೆ ಹಾಕಿಕೊಳ್ಳುವ ಮನು?ರು ಇರುವಾಗ ನಗರದ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಹಾಲಿಂಗಪುರ ನಗರದ ಬಸ್ ನಿಲ್ದಾಣದಲ್ಲಿ ಓರ್ವ ಮಹಿಳೆ ತನ್ನ ೧೦ ಗ್ರಾಂ ಬಂಗಾರದ ಸರ ಕಳೆದುಕೊಂಡು ಅಲೆದಾಡುತ್ತಿರುವುದನ್ನು ಕಂಡು ನಗರದ ಬಸ್ ನಿಲ್ದಾಣದ ಕಂಟ್ರೋಲ್ ಕಡೆ ಸಿಕ್ಕ ಬಂಗಾರವನ್ನು ಮಹಿಳೆಗೆ ನೀಡಿ ಮಾನವೀಯತೆಯನ್ನು ಮರೆದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಸಾರ್ವಜನಿಕರು ಅವರ ಕಾರ್ಯ ವೈಖರಿಯನ್ನು ಮೆಚ್ಚುಗೆ ವ್ಯಕ್ತಪಡಿಸಿ ಆ ಬಂಗಾರವನ್ನು ಮರಳಿ ಆ ಮಹಿಳೆ ನೀಡಿದ ಅಧಿಕಾರಿಯನ್ನು ಕೂಡಲೇ ಮೇಲಾಧಿಕಾರಿಗಳು ಅವರಿಗೆ ಸೂಕ್ತ ಬಹುಮಾನವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
ಸಿಕ್ಕ ಚಿನ್ನದ ಸರವನ್ನು ಮರಳಿ ಮಹಿಳೆಗೆ ನೀಡಿ ಮಾನವೀಯತೆ ಮೆರೆದ ಸಾರಿಗೆ ನಿಯಂತ್ರಣಾಧಿಕಾರಿ
