ರೈಲು ನಿಲ್ದಾಣದ ನವೀಕರಣ ಕಾಮಗಾರಿ ಬೇಗ ಮುಗಿಸಲು ಸಂಸದ ಜಗದೀಶ ಶೆಟ್ಟರ್ ಸೂಚನೆ

Ravi Talawar
ರೈಲು ನಿಲ್ದಾಣದ ನವೀಕರಣ ಕಾಮಗಾರಿ ಬೇಗ ಮುಗಿಸಲು ಸಂಸದ ಜಗದೀಶ ಶೆಟ್ಟರ್ ಸೂಚನೆ
WhatsApp Group Join Now
Telegram Group Join Now
 ಘಟಪ್ರಭಾ:  ಇಲ್ಲಿನ  ರೈಲು ನಿಲ್ದಾಣದಲ್ಲಿ  ನಡೆಯುತ್ತಿರುವ ಕಾಮಗಾರಿ ನಿಧಾನವಾಗಿ ಸಾಗುತ್ತಿದೆ ಮತ್ತು ಗುಣಮಟ್ಟ ಕಳಪೆಯಾಗಿದೆ ಆದ್ದರಿಂದ ಪ್ರಯಾಣಿಕರಿಗೆ ಅದರಲ್ಲೂ ವಿಶೇಷವಾಗಿ ಅಂಗವಿಕಲರು  ಮಹಿಳೆಯರು, ವೃದ್ಧರಿಗೆ ಆಗುತ್ತಿರುವ ತೊಂದರೆ ಪರಿಹರಿಸಲು ನವೀಕರಣ ಕಾರ್ಯವನ್ನು ಆದಷ್ಟು ಬೇಗ ಮುಗಿಸಬೇಕೆಂದು ಅಧಿಕಾರಿಗಳಿಗೆ ಮಾಜಿ ಮುಖ್ಯ ಮಂತ್ರಿ ಹಾಗೂ ಸಂಸದರಾದ ಜಗದೀಶ ಶೆಟ್ಟರ  ಸೂಚನೆ ನೀಡಿದರು.
      ಈ ಬೇಟಿ ವೇಳೆಯಲ್ಲಿ  ಹಿರಿಯರಾದ ಶಂಕರ ಹತ್ತರವಾಟ, ಭೂಪಾಲ್ ಖೆಮಲಾಪುರೆ,  ಈಶ್ವರ ಮಟಗಾರ   ಆವರ ಮನೆಗಳಿಗೆ ಭೇಟಿ ನೀಡಿದರು,  ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಗ್ರಾಮೀಣ ಬಿಜೆಪಿ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಗೋಕಾಕ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ,  ಘಟಪ್ರಭಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ವಿ ಮಹಾಜನ, ಬಿಜೆಪಿ ಮುಖಂಡ ಸುರೇಶ ಪಾಟೀಲ,ರಾಜು ಕತ್ತಿ, ರಾಮಣ್ಣ ದೇಮಣ್ಣವರ, ರಾಮಣ್ಣ ಹುಕ್ಕೇರಿ, ಕರವೇ ರಾಜ್ಯಾಧ್ಯಕ್ಷ ಕೆಂಪಣ್ಣಾ ಚೌಕಸಿ , ಅಪ್ಪಾಸಾಬ ಮುಲ್ಲಾ, ಗುರುಬಸಯ್ಯಾ ಕರ್ಪೂರಮಠ,  ಶೇಖರ ರಜಪೂತ,ಕುಮಾರ್ ಕರ್ಪೂರಮಠ,ಸಚಿನ್ ಖಡಬಡಿ, ಗಣೇಶ ಗಾಣಿಗ, ವಿಜಯ ಗುಪ್ತಾ ,ನೂರ್ ಪೀರಜಾದೆ, ಪ್ರಶಾಂತ ಅರಳಿಕಟ್ಟಿ   ಮುಂತಾದವರು ಸೇರಿದಂತೆ ಘಟಪ್ರಭಾ ಹಾಗೂ ಸುತ್ತಮುತ್ತಲಿನ ನೂರಾರು ನಾಗರೀಕರು ಹಾಜರಿದ್ದರು.
WhatsApp Group Join Now
Telegram Group Join Now
Share This Article