ನವದೆಹಲಿ, ಸೆಪ್ಟೆಂಬರ್ 12: ದೆಹಲಿ ಹೈಕೋರ್ಟ್ಗೆ ಇಂದು ಇ–ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನ್ಯಾಯಮೂತರ್ಿಗಳು ಹಾಗೂ ವಕೀಲರು ಹಾಗೂ ಸಿಬ್ಬಂದಿಗಳನ್ನು ಆವರಣದಿಂದ ತಕ್ಷಣವೇ ಸ್ಥಳಾಂತರಿಸಲಾಗಿದೆ. ದೆಹಲಿ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಸೇರಿದಂತೆ ಭದ್ರತಾ ಸಂಸ್ಥೆಗಳು ಸಂಪೂರ್ಣ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಪ್ರದೇಶವನ್ನು ಸುತ್ತುವರೆದಿವೆ.
ಯಾವುದೇ ಸ್ಫೋಟಕ ಸಾಧನ ಇನ್ನೂ ಪತ್ತೆಯಾಗಿಲ್ಲವಾದರೂ, ದೆಹಲಿ ಹೈಕೋರ್ಟ್ ಅನ್ನು ನಿರ್ದಿಷ್ಟವಾಗಿ ಹೆಸರಿಸದೆ ಕೋರ್ಟ್ ಎಂದು ಮಾತ್ರ ಉಲ್ಲೇಖಿಸಿರುವ ಇ–ಮೇಲ್ ಭೀತಿಯನ್ನು ಉಂಟುಮಾಡಿದೆ.ಮತ್ತು ನ್ಯಾಯಾಲಯದ ವಿಚಾರಣೆಗಳನ್ನು ಸ್ಥಗಿತಗೊಳಿಸಲಾಯಿತು. ಅಧಿಕಾರಿಗಳು ಬೆದರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಮತ್ತು ಇ–ಮೇಲ್ನ ಮೂಲವನ್ನು ಪತ್ತೆಹಚ್ಚಲು ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ.