ಒಳಮೀಸಲಾತಿಯಲ್ಲಾದ ಅನ್ಯಾಯ ಸರಿಪಡಿಸಿಲು ಬಂಜಾರ, ಭೋಮಿ, ಕೊರಮ, ಕೊರಚ ಸಮುದಾಯದಿಂದ ಬೃಹತ್ ಪ್ರತಿಭಟನೆ

Ravi Talawar
ಒಳಮೀಸಲಾತಿಯಲ್ಲಾದ ಅನ್ಯಾಯ ಸರಿಪಡಿಸಿಲು ಬಂಜಾರ, ಭೋಮಿ, ಕೊರಮ, ಕೊರಚ ಸಮುದಾಯದಿಂದ ಬೃಹತ್ ಪ್ರತಿಭಟನೆ
WhatsApp Group Join Now
Telegram Group Join Now
 ಬಳ್ಳಾರಿ: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅವೈಜ್ಞಾನಿಕವಾಗಿ ವರ್ಗೀಕರಣ ಮಾಡಿ ರಾಜ್ಯ ಸರ್ಕಾರ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಕ್ಕೆ ಅನ್ಯಾಯ ಎಸಗಿದ್ದನ್ನು ಖಂಡಿಸಿ ಸರ್ಕಾರದ ವಿರುದ್ಧ ಸೆ. 15ರಂದು ಬಳ್ಳಾರಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
 ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ ಪ್ರತಿಯೊಂದು ಸಮುದಾಯಗಳಲ್ಲಿ ಶಿಕ್ಷಣ, ಉದ್ಯೋಗದಲ್ಲಿ ಅಂತರ್ ಹಿಂದುಳಿದಿರುವಿಕೆಯನ್ನು ಸಾಬೀತುಪಡಿಸಬೇಕು, ಅಧ್ಯಯನದ ಮೂಲಕ ವಾಸ್ತವಿಕ ದತ್ತಾಂಶಗಳನ್ನು ಪತ್ತೆಹಚ್ಚಬೇಕಿದೆ. ಆದರೆ, ಸರ್ಕಾರ ತರಾತುರಿಯಲ್ಲಿ ಏಕಪಕ್ಷಿಯವಾಗಿ ದೋಷಪೂರಿತ ದತ್ತಾಂಶವನ್ನು ಪರಿಗಣಿಸಿ ಒಳಮೀಸಲಾತಿ ಜಾರಿಗೊಳಿಸುವ ಮೂಲಕ ನಮ್ಮ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ.
ಭೋವಿ,ಲಂಬಾಣಿ, ಕೊರಚ, ಕೊರಮ ಸಮುದಾಯಗಳಿಗೆ ಹಿಂದಿನ ರಾಜ್ಯ ಸರಕಾರ 4.50% ಒಳ ಮೀಸಲಾತಿ ನಿಗದಿ ಪಡಿಸಿದಾಗ, ಎಲ್ಲರೂ ಆ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ರಂಪಾಟ ಮಾಡಿ ಚುನಾವಣೆಯಲ್ಲಿ ಸೋಲು  ಉಣ್ಣಿಸಿದರು. ತದನಂತರ ನಡೆದ ಚುನಾವಣೆಯಲ್ಲಿ ಅತ್ಯಧಿಕ  ಶಾಸಕರೊಂದಿಗೆ ಗೆಲುವು ಸಾಧಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಈ ಹಿಂದಿನ ಸರ್ಕಾರದ ತಪ್ಪು ನಡೆಯನ್ನು ಸರಿ ಪಡಿಸಿ ಒಳ ಮೀಸಲಾತಿಯಲ್ಲಿ ಅಧಿಕ ಪಾಲನ್ನು ದೊರಕಿಸಿ ತಮಗೆ ನ್ಯಾಯ ಒದಗಿಸುತ್ತದೆ ಎಂದು ನಮ್ಮ ಈ ನೊಂದ ಸಮುದಾಯಗಳುಇಟ್ಟ ನಿರೀಕ್ಷೆಗೆ ಕಪ್ಪು ಮಸಿ ಬಳೆಯಿತು ಸಿದ್ದರಾಮಯ್ಯ ಸರ್ಕಾರ.
ಸರಿಯಾದ ಮಾನದಂಡಗಳನ್ನು ಅನುಸರಿಸದೆ, ಎಡ, ಬಲ ಸಮುದಾಯಗಳಿಗೆ ಒಳ ಮೀಸಲಾತಿ ಪ್ರಮಾಣ ನಿರ್ಧರಿಸುವಾಗ, ಹೆಚ್ಚಿನ ಪಾಲು ಪಡೆಯಲುಗಲಾಟೆ ಮಾಡುತ್ತಿದ್ದ ತಮ್ಮ ನೆಚ್ಚಿನ ಕೆಲವು
ನಾಯಕರನ್ನುಮೆಚ್ಚಿಸಲು  ಕಾಂಗ್ರೆಸ್ ಸರ್ಕಾರಮಾಡಿದ ತಂತ್ರ ಗಾರಿಕೆ ಅಥವಾ ರಾಜಿ ಸಂಧಾನದಮಾರ್ಗದಿಂದಾಗಿ, ಈ ಹಿಂದೆ 4.50% ಒಳ ಮೀಸಲಾತಿಪಡೆದಿದ್ದ ಭೋವಿ, ಲಂಬಾಣಿ, ಕೊರಚ, ಕೊರಮ ಸಮುದಾಯಗಳು 1% ಮೀಸಲಾತಿ ಪಡೆದಿದ್ದ ಇತರೆ  ಅಲೆಮಾರಿ ಸಮುದಾಯಗಳ ಸೇರ್ಪಡೆಯಿಂದಾಗಿ  ಒಟ್ಟು ಮೀಸಲಾತಿ 5.50% ಗೆ ಬದಲಾಗಿ 5.00% ಪಡೆದು, ಅನ್ಯಾಯಕ್ಕೆ ಒಳಗಾಯಿತು. ಇದರ ಬಗ್ಗೆ ನಮ್ಮ ಜನಾಂಗದ ಕಾಂಗ್ರೆಸ್ ನಾಯಕರು  ಯಾವುದೇ ಪ್ರತಿಭಟನೆ ಮಾಡದೆ ಸುಮ್ಮನಾಗಿರುವುದು ಏಕೆ ? ಅವರು ತಮ್ಮ ನಾಯಕರನ್ನು ಎದುರಿಸಲಾರ ದಷ್ಟು ನಿಸ್ಸಹಾಯಕ ರಾಗಿ ಬಿಟ್ಟರೆ ?
ಮಾಧುಸ್ವಾಮಿ ವರದಿ ಮೀಸಲಾತಿಯ ವರ್ಗೀಕರಣಕ್ಕೆ ಜನಸಂಖ್ಯೆಯೇ ಆಧಾರ ಎಂದು ಹೇಳಿತು . ಹಾಗಾಗಿ ಬೋವಿ , ಬಂಜಾರ , ಕೊರಚ , ಕೊರಮ ಗುಂಪಿನ ಮೀಸಲಾತಿ ಶೇ 3 ( ಸದಾಶಿವ ಆಯೋಗದ ವರದಿಯಂತೆ ) ರಿಂದ ಶೇ 4.5 ಕ್ಕೆ ಏರಿಕೆ ಆಯಿತು .
ನ್ಯಾ ನಾಗಮೋಹನ ದಾಸ  ವರದಿಯಲ್ಲಿ ಬೋವಿ, & ಬಂಜಾರ  ಸಮುದಾಯದ ಏರಿಕೆ ಅತ್ಯಂತ ಕಡಿಮೆ  ಎಂದು ತೋರಿಸಲಾಗಿದೆ . 28 ಲಕ್ಷ ಜನಸಂಖ್ಯೆ ಇರುವ ಬೋವಿ , ಬಂಜಾರ , ಕೊರಚ, ಕೊರಮ ಗುಂಪಿಗೆ  ಶೇ 4 ರ ಮೀಸಲಾತಿಯನ್ನು ನ್ಯಾ ನಾಗಮೋಹನ ದಾಸ್ ನಿಗದಿ ಪಡಿಸಿದ್ದರು . ನಮಗಿಂತ 16 ಮಾನದಂಡಗಳಲ್ಲಿ ಸಾಮಾಜಿಕ , ಶೈಕ್ಶಣಿಕವಾಗಿ ಮುಂದೆ ಇರುವ  ಇತರ ಉಪಜಾತಿಗಳ ಗುಂಪಿಗೆ ಎರಡು ಜಾತಿ ಸೇರಿಸಿ ಶೇ 5 ರಿಂದ ಶೇ 6 ಕ್ಕೆ ಹೆಚ್ಚಿಸಿರುವುದು ಪಕ್ಷಪಾತದ ನಿರ್ಣಯವಾಗಿದೆ .
 ಸಿದ್ಧರಾಮಯ್ಯನವರ ಸರ್ಕಾರ ಮತ್ತೂ ಮುಂದೆ ಹೋಗಿ ನಮ್ಮ ಬೋವಿ ಬಂಜಾರ ಕೊರಚ ಕೊರಮ ಗುಂಪಿಗೆ 59 ಜಾತಿಗಳನ್ನು ಸೇರಿಸಿ ಮೀಸಲಾತಿಯನ್ನು ಶೇ 4 ರಿಂದ ಶೇ 5 ಕ್ಕೆ ಹೆಚ್ಚಿಸಿರುವುದು ಪಕ್ಷಪಾತದ ನಿರ್ಣಯವಾಗಿದೆ‌.
ಹಾಗಾಗಿ, ಈ ಒಳಮೀಸಲಾತಿಯಲ್ಲಾದ ಅನ್ಯಾಯವನ್ನು ಸರಿಪಡಿಸಿ, ಮರು ವರ್ಗಿಕರಣ ಮಾಡಿ, ನಮ್ಮ ಜನಾಂಗಗಳಿಗೆ ನ್ಯಾಯ ದೊರಕಿಸಬೇಕೆಂದು ಸರ್ಕಾರಕ್ಕೆ ಈ ಪ್ರತಿಭಟನೆಯ ಮೂಲಕ್ ಒತ್ತಾಯಿಸುತ್ತೇವೆ.
ಪತ್ರಿಕೆ ಗೋಷ್ಠಿಯಲ್ಲಿ ಭೋವಿ ಸಮಾಜದ ಅಧ್ಯಕ್ಷರಾದಶ್ರೀ ರಾಮಾಂಜನಿಯ್ಯಬಂಡಿಹಟ್ಟಿ ಮಹೇಶ್,ಟಿ.ವಿ.ವೆಂಕಟೇಶ್,ಟಿ.ವಿ.ವೆಂಕಟೇಶ, ವಿ.ತಮ್ಮಣ್ಣ,ಗುಡದೂರುಹನುಮಂತ, ಲಂಬಾಣಿ ಸಮುದಾಯದಜಲ್ಲಾಧ್ಯರಾದ ರಾಮು ನಾಯಕ,ಗೋಪಿನಯಕ,ಕೊರಚ-ಕೊರಮ ಸಮುದಾಯದ ಮುಖಂಡರಾದ ಡಾಕ್ಟರ್ ಹನುಮಂತಪ್ಪ, ಶಂಕರ ಬಂಡೆ ವೆಂಕಟೇಶ್,ಹೆಚ್ ಕೆ ಹೆಚ್ ಹನುಮಂತಪ್ಪ, ರಮಣಪ್ಪ ಭಜಂತ್ರಿ, ಕೆ. ರಂಗಸ್ವಾಮಿ, ಎಲ್ಲ ಸಮುದಾಯದ ಮುಖಂಡರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article