ಮಸ್ಜೀದ್ ಎ ಅಬುಬಕ್ಕರ್ ಸಿದ್ದೀಖ್(ಸುನ್ನಿ) ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ನೋಂದಣಿ

Ravi Talawar
ಮಸ್ಜೀದ್ ಎ ಅಬುಬಕ್ಕರ್ ಸಿದ್ದೀಖ್(ಸುನ್ನಿ) ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ನೋಂದಣಿ
WhatsApp Group Join Now
Telegram Group Join Now

ಬಳ್ಳಾರಿ,ಸೆ.12 ಬಳ್ಳಾರಿ ನಗರದ ಕೌಲ್ ಬಜಾರ್ ವ್ಯಾಪ್ತಿಯಲ್ಲಿರುವ ಮಸ್ಜೀದ್ ಎ ಅಬುಬಕ್ಕರ್ ಸಿದ್ದೀಖ್(ಸುನ್ನಿ) ವಕ್ಫ್ ಸಂಸ್ಥೆಯ ಸಾಮಾನ್ಯ ಸದಸ್ಯರ ನೋಂದಣಿ ಇದೇ ಸೆಪ್ಟೆಂಬರ್  15 ರಿಂದ  ಅಕ್ಟೋಬರ್ 16 ರವರೆಗೆ ನಡೆಯಲಿದೆ ಎಂದು ನೋಂದಣಿ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್  15 ರಿಂದ  ಅಕ್ಟೋಬರ್ 04 ರವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 02.30 ಗಂಟೆ ಅವಧಿಯಲ್ಲಿ ಸದಸ್ಯರ ದಾಖಲಾತಿಗಾಗಿ ಅರ್ಜಿ ನಮೂನೆ ವಿತರಣೆ ಮಾಡಲಾಗುತ್ತದೆ.ಭರ್ತಿ ಮಾಡಿದ ಅರ್ಜಿ ನಮೂನೆಗಳೊಂದಿಗೆ ಇತ್ತೀಚಿನ 3 ಭಾವಚಿತ್ರ ಹಾಗೂ ರೂ.400 ಶುಲ್ಕ ಹಾಗೂ ಅಧಿಕೃತ ವಿಳಾಸದ 02 ಗುರುತಿನ ಚೀಟಿಗಳೊಂದಿಗೆ ಅಕ್ಟೋಬರ್ 04 ರ ಮಧ್ಯಾಹ್ನ 02.30 ರೊಳಗೆ ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ನೋಂದಣಿ ಅಧಿಕಾರಿಗಳ ಕಚೇರಿಗೆ ಸಲ್ಲಿಸಬಹುದು.

ದಾಖಲಾದ ಸದಸ್ಯರ ಕರಡು ಪಟ್ಟಿಯನ್ನು ಅಕ್ಟೋಬರ್ 09 ರಂದು  ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಗೆ ಸಂಬAಧಿಸಿದAತೆ ಆಕ್ಷೇಪಣೆ ಹಾಗೂ ಸಲಹೆ-ಸೂಚನೆಗಳಿದ್ದಲ್ಲಿ ಅಕ್ಟೋಬರ್ 10 ರಿಂದ 13 ರೊಳಗೆ  ಬೆಳಿಗ್ಗೆ 11 ಗಂಟೆಯಿAದ ಸಂಜೆ 5.30 ರೊಳಗೆ ಸಲ್ಲಿಸಬಹುದು.ಆಕ್ಷೇಪಣೆಗಳ ವಿಚಾರಣೆ ಅಕ್ಟೋಬರ್ 14 ರಂದು ಮಧ್ಯಾಹ್ನ 12.30 ಕ್ಕೆ ನಡೆಸಲಾಗುತ್ತದೆ. ದಾಖಲಾದ ಸಾಮಾನ್ಯ ಸದಸ್ಯರ ಅಂತಿಮ ಪಟ್ಟಿಯನ್ನು ಅಕ್ಟೋಬರ್ 16 ರಂದು ಮಸ್ಜೀದ್ ಎ ಅಬುಬಕ್ಕರ್ ಸಿದ್ದೀಖ್(ಸುನ್ನಿ) ಮತ್ತು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಪ್ರಕಟಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article