ಕಾಗವಾಡ – ಐನಾಪುರ ಯಾತ ನೀರಾವರಿ ಯೋಜನೆಯಿಂದ ಕಾಗವಾಡ ಶಾಸಕ ರಾಜು ಕಾಗೆ ಹಾಗೂ ನೀರಾವರಿ ಅಧಿಕಾರಿಗಳ ಸತತ ಪ್ರಯತ್ನದಿಂದ ಕಾಲುವೆಗೆ ಬುಧವಾರ ದಿನಾಂಕ 10 ರಂದು ನೀರು ಹರಿಸಲಾಯಿತು . ಇದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದೇ ಜೂನ್ 2025 ರಂದು ಕಾಲುವೆಗೆ ನೀರು ಹರಿಸಲಾಗಿತ್ತು ಆದರೆ ಟ್ರಾನ್ಸ್ಫಾರ್ಮರ್ ಕೆಟ್ಟು ಹೋದ ಕಾರಣ ಕೇವಲ ಒಂದೇ ತಿಂಗಳಲ್ಲಿ ಬಂದಾಯಿತು, ಈ ಭಾಗದಲ್ಲಿ ರಿಪೇರಿ ಆಗದ ಕಾರಣ ಚೆನ್ನೈನಲ್ಲಿ ಒಯ್ಯಲಾಯಿತು ಇನ್ನುವರೆಗೆ ಆ ಟ್ರಾನ್ಸ್ಫರ್ಮರ್ ರಿಪೇರಿ ಆಗಲಿಲ್ಲ, ಇದನ್ನು ಮನಗಂಡ ಶಾಸಕ ರಾಜು ಕಾಗೆ ಹಾಗೂ ನೀರಾವರಿ ಅಧಿಕಾರಿಗಳು ರೈತರ ಹಿತಾಸಕ್ತಿಯನ್ನು ಕಾಪಾಡಲು ತುರ್ತು ಪರಿಸ್ಥಿತಿಯಲ್ಲಿ ಬಾಡಿಗೆ ಆಧಾರದ ಮೇಲೆ ಪ್ರತಿ ತಿಂಗಳಿಗೆ 30 ಸಾವಿರ ರೂಪಾಯಿಯಂತೆ ಬೇರೆ ಟ್ರಾನ್ಸ್ಫಾರ್ಮರ್ ನ್ನು ಸೀಸನ್ ಮುಗಿಯುವವರೆಗೆ ಬಾಡಿಗೆ ರೂಪದಲ್ಲಿ ತಂದು ಆರಂಭಿಸಲಾಗಿದೆ ಎಂದು ನೀರಾವರಿ ಸಹಾಯಕ ಅಭಿಯಂತರ ಪ್ರಶಾಂತ್ ಪೋತದಾರ್ ಹೇಳಿದರು, ಅವರು ಮಾತನಾಡುತ್ತಾ, ಕಷ್ಟಪಟ್ಟು ರೈತರು ಬೆಳೆಯದ ಬೆಳೆಯನ್ನು ಉಳಿಸುವ ಗೋಸ್ಕರ ಶಾಸಕರ ಪರಿಶ್ರಮದಿಂದ ಹಂಗಾಮಿಯಾಗಿ ಪ್ರಾರಂಭಿಸಲಾಗಿದೆ.2600 ಅಶ್ವ ಶಕ್ತಿ ಸಾಮರ್ಥ್ಯದ 2 ಮೋಟಾರ್ ಗಳನ್ನು ಪ್ರಾರಂಭಿಸಲಾಗಿದೆ, ಇದರಿಂದ 21 ಸಾವಿರ ಹೆಕ್ಟರ್ ರೈತರ ಜಮೀನುಗಳಿಗೆ ನೀರಾವರಿ ಅನುಕೂಲವಾಗಲಿದೆ. ಐನಾಪುರ, ಮೋಳೆ, ಕವಲಗುಡ್, ಕೆಂಪವಾಡ, ಸಿದ್ದೆ ವಾಡಿ, ಮದಬಾವಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಕೃಷ್ಣಾ ನದಿಯ ಒಳಹರಿವು ಇರುವ ತನಕ ಬೇಸಿಗೆಯಲ್ಲಿ 6 ಟಿಎಂಸಿ ನೀರನ್ನು ಉಳಿಸಿಕೊಳ್ಳಬೇಕಾಗುತ್ತದೆ ಅದರ ಆಧಾರದ ಮೇಲೆ ಅಂದಾಜು ನವಂಬರ್ ವರೆಗೆ ಕಾಲುವೆಗೆ ನೀರು ಹರಿಸಲಾಗುವುದು ಎಂದು ಹೇಳಿದರು . ಈ ವೇಳೆ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ ಮಾತನಾಡಿ, ಐನಾಪುರ್ ಯಾತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಬಂದಿರುವುದರಿಂದ ರೈತರ ಸಾವಿರಾರು ಎಕರೆ ಭೂಮಿಯಲ್ಲಿ ಬೆಳೆದ ಬೆಳೆಗಳಿಗೆ ಅನುಕೂಲವಾಗಲಿದೆ ಅಲ್ಲದೆ ಈ ಭಾಗದ ರೈತರ ಬಾವಿಗಳು ತುಂಬಲಿದೆ ರೈತರ ಕಷ್ಟಕ್ಕೆ ನೆರವಾದ ಶಾಸಕರನ್ನು ಹಾಗೂ ಅಧಿಕಾರಿಗಳನ್ನು ಅಭಿನಂದಿಸುತ್ತೇನೆ ಎಂದರು. ಮಲ್ಲಪ್ಪ ಚುಂಗ , ಮುಕುಂದ ಪೂಜಾರಿ,ಧರ್ಮಾ ಕೋಳೇಕರ್, ರವಿ ಪಾಟೀಲ್, ದೀಪಕ್ ಕುಟುವಡೆ, ಶರತ್ ಪಾಟೀಲ್ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.