ಬೆಳಗಾವಿ: ಮನುಷ್ಯನ ದೇಹದಲ್ಲಿ ಕಣ್ಣು ಮಹತ್ವ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಅದರ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರು ಕಾಳಜಿ ವಹಿಸಬೇಕು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರು, ನ್ಯಾಯವಾದಿ ಜಿ.ಆರ್ ಸೋನೇರ್ ಅವರು ಹೇಳಿದರು.
ನಗರದ ಗೌವಂವಾಡದ ಆಂಜನೇಯ ದೇವಸ್ಥಾನ ಸಭಾಭನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಳಗಾವಿ ತಾಲೂಕು ಬಿಸಿ ಟ್ರಸ್ಟ್ ಹಾಗೂ ಡಾ. ರವಿ ಪಾಟೀಲ್ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಉಚಿತ ಕಣ್ಣಿನ ತಪಾಸಣೆ ಹಾಗೂ ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಮತ್ತು ಸುಜ್ಞಾನನಿಧಿ ಶಿಷ್ಯವೇತನ ಮಂಜುರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಷ್ಟೂ ಜನರು ಹುಟ್ಟಿನಿಂದ ದೃಷ್ಟಿಯನ್ನು ಕಳೆದುಕೊಂಡು ಪ್ರಪಂಚವನ್ನು ನೋಡುವ ಅದೃಷ್ಟ ಇರುವುದಿಲ್ಲ, ಭಗವಂತ ನೀಡಿರುವ ಕಣ್ಣನ್ನು ಪ್ರತಿಯೊಬ್ಬರೂ ರಕ್ಷಣೆ ಮಾಡುವುದು ಕರ್ತವ್ಯವಾಗಿದೆ. ಕಾಲಕಾಲಕ್ಕೆ ಕಣ್ಣಿನ ತಪಾಸಣೆ ಮಾಡಬೇಕು, ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ಸತೀಶ ನಾಯ್ಕ್ , ಗ್ರಾ ಪಂ. ಅಧ್ಯಕ್ಷೇ ರೋಹಿಣಿ ಮೋಹನ್ ನಾಥ, ಸದಸ್ಯರಾದ ರೇಖಾ ವಿಜಯ ಸುತಾರ್, ಕಲ್ಪನಾ ಮಲ್ಲಪ್ಪ, ಡಾ. ಸ್ನೇಹಲ್ , ಡಾ. ಭಾರತಿ , ಅಶೋಕ್ ಪಾಟೀಲ್, ವೈಶಾಲಿ , ಸುಧಾ, ಗೌರವ್ವ್, ಸುರೇಖಾ, ಭಾಗ್ಯಶ್ರೀ, ಮಾಧುರಿ, ಭಾರತಿ, ಮಾಧುರಿ ಹಾಗೂ ಗಣ್ಯರು, ವಿದ್ಯಾರ್ಥಿಗಳು, ಪೋಷಕರು ಕಣ್ಣಿನ ತಪಾಸಣೆಯಲ್ಲಿ ಭಾಗಿಯಾಗಿದರು.