ಸಂಕೇಶ್ವರ : ಪೀಪಲ್ಸ್ ಮಲ್ಟಿಪರಪಜ್ ಕೋ-ಆಪ್ ಸೊಸೈಟಿಯು ಕಡಿಮೆ ಬಂಡವಾಳದಿಂದ ಹೆಚ್ಚು ಲಾಭ ಗಳಿಸಲು ಸದಸ್ಯರ ಸಹಕಾರವೇ ಪ್ರಮುಖವಾಗಿದೆ ಎಂದು ನಿರ್ದೇಶಕ ಪವನ ಕಣಗಲಿ ಹೇಳಿದರು.
ಪಟ್ಟಣದ ದುರದುಂಡೀಶ್ವರ ಅನುಭವ ಮಂಟಪದಲ್ಲಿ ಜರುಗಿದ 2024–25ನೇ ಸಾಲಿನ 11ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಅವರು,
“ಕಳೆದ ವರ್ಷ ಘೋಷಿಸಲಾದ ವಿದ್ಯಾ ವೇತನ ಯೋಜನೆಯು ಈ ವರ್ಷವೂ ಮುಂದುವರಿಯಲಿದೆ.” ಈ ಯೋಜನೆ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ರೂಪಿಸಲಾಗಿದ್ದು. ಈ ಬಾರಿ, ವಿದ್ಯಾರ್ಥಿಗಳಿಗೆ ವಿದ್ಯಾ ವೇತನವನ್ನು ನೇರವಾಗಿ ಸಂಘದ ಮೂಲಕ ನೀಡಲಾಗುವುದು. ಸಂಬಂಧಿತ ಸದಸ್ಯರು ಸಹಾಯಕ್ಕಾಗಿ ಸಂಘವನ್ನು ಸಂಪರ್ಕಿಸಿರೆಂದು ತಿಳಿಸಿದರು.
ಸಂಘದ ನಿರ್ದೇಶಕಿ ಶಹನಾಜ ಗಡೇಕಾಯಿ ಮಾತನಾಡಿ ಸಂಘವು ಪ್ರಸ್ತುತ 701 ಸದಸ್ಯರೊಂದಿಗೆ 7.81 ಲಕ್ಷ ಶೇರು ಬಂಡವಾಳ ಹೊಂದಿದೆ. 6 ಕೋಟಿ 32ಲಕ್ಷ ರೂ. ದುಡಿಯುವ ಬಂಡವಾಳದೊಂದಿಗೆ ಸಂಘವು 2024–25 ಆರ್ಥಿಕ ವರ್ಷದ ಅಂತ್ಯಕ್ಕೆ ಸಂಘವು 11 ಲಕ್ಷ 30 ಸಾವಿರ ನಿವ್ವಳ ಲಾಭ ಗಳಿಸಿದ್ದು, ಸದಸ್ಯರಿಗೆ ಶೇಕಡಾ 12ರಷ್ಟು ಡಿವಿಡೆಂಡ್ ವಿತರಿಸಲಾಗುವುದು ಎಂದು ಹೇಳಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ಯಾಮಲಿಂಗ ಹಾಲಟ್ಟಿ ಅವರು ಸಂಘದ ವಾರ್ಷಿಕ ವರದಿಯನ್ನು ಮಂಡಿಸಿ ಸಭೆಯಿಂದ ಅನುಮೋದನೆ ಪಡೆದುಕೊಂಡರು. ಸಂಸ್ಥೆ ಸಂಸ್ಥಾಪಕ ಪ್ರಕಾಶ ಕಣಗಲಿ, ಅಧ್ಯಕ್ಷ ಚಿದಾನಂದ ಇಂಡಿ ಉಪಾಧ್ಯಕ್ಷೆ ಸುಮಲತಾ ಕಣಗಲಿ ನಿರ್ದೇಶಕರಾದ ಆನಂದ ಹಾಲದೇವರಮಠ, ಸೂರ್ಯಕಾಂತ ಖಾಡೆ, ಶಿವಗೌಡ ಪಾಟೀಲ, ಸಾಗರ ಗೊಂಧಳಿ, ಮಹೇಶ ಮಗೆನ್ನವರ, ಕೆಂಪಣ್ಣಾ ಹಾಲಟ್ಟಿ, ರಾಜು ಶೇಲಾರ, ಸುರೇಶ ನಾಯಿಕ, ವಿಲಾಸ ಹಿರೇಮನಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.