ಗಾದಿಲಿಂಗಪ್ಪ ವಿರುದ್ಧದ ಆರೋಪ ನಿರಾಧಾರ : ಜೋಳದ ರಾಶಿ  ತಿಮ್ಮಪ್ಪ 

Ravi Talawar
ಗಾದಿಲಿಂಗಪ್ಪ ವಿರುದ್ಧದ ಆರೋಪ ನಿರಾಧಾರ : ಜೋಳದ ರಾಶಿ  ತಿಮ್ಮಪ್ಪ 
WhatsApp Group Join Now
Telegram Group Join Now
 ಬಳ್ಳಾರಿ :11. ಇತ್ತೀಚೆಗೆ ಕೆಲವು ಜನ ವಾಲ್ಮೀಕಿ ಸಮುದಾಯದ ಮುಖಂಡರುಗಳು ವಾಲ್ಮೀಕಿ ಭವನದ ಉಸ್ತುವಾರಿ ಹಾಗೂ ಪರಿಶಿಷ್ಟ ಪಂಗಡ  ಇಲಾಖೆಯ  ತಾಲೂಕ ಕಲ್ಯಾಣ ಅಧಿಕಾರಿ ಗಾದಿಲಿಂಗಪ್ಪನವರ ಮೇಲೆ ನಿರಾಧಾರವಾದ ಯಾವುದೇ ಸಾಕ್ಷಿಗಳಿಲ್ಲದ  ಆರೋಪಗಳನ್ನು ಮಾಡುತ್ತಿದ್ದಾರೆ ಇದೆಲ್ಲಾ ಕಪೋಲ ಕಲ್ಪಿತ ಎಂದು ಅಖಂಡ ಕರ್ನಾಟಕ ವಾಲ್ಮೀಕಿ ನಾಯಕ ಒಕ್ಕೂಟದ ರಾಜ್ಯಾಧ್ಯಕ್ಷ ಜೋಳದ ರಾಶಿ ತಿಮ್ಮಪ್ಪ ತಿಳಿಸಿದರು.
 ಅವರು ಇಂದು ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿ, ತಾಲೂಕ ಅಧಿಕಾರಿ ಗಾದಿಲಿಂಗಪ್ಪನವರು ತಮಗೆ ಅನುಕೂಲಕರವಾದ ರೀತಿಯಲ್ಲಿ ಇಲ್ಲ ಎಂಬ ಕಾರಣದಿಂದ ಅವರ ಮೇಲೆ ಸುಖಾ ಸುಮ್ಮನೆ ಆಧಾರ ರಹಿತ ದಾಖಲೆ ರಹಿತ ಆರೋಪಗಳನ್ನು ಮಾಡುತ್ತಾ  ಗೂಬೆ ಕೂರಿಸುತ್ತಿದ್ದಾರೆ, ವಾಲ್ಮೀಕಿ ಭವನದಲ್ಲಿ ಯಾವುದೇ ಹಗರಣ ನಡೆದಿಲ್ಲ 16 ಕೋಟಿ ರೂಪಾಯಿಗಳಷ್ಟು ಹಗರಣ ನಡೆಯಲು ಅಲ್ಲಿ ಏನು ವ್ಯವಹಾರವಿಲ್ಲ ವರ್ಷಕ್ಕೆ ಕೇವಲ 15 ರಿಂದ 18 ಲಕ್ಷ ರೂಪಾಯಿಗಳ ಆದಾಯವಿರುತ್ತದೆ ಅದು ಹೇಗೆ 16 ಕೋಟಿಯಷ್ಟು ಹಗರಣ ಮಾಡಲು ಸಾಧ್ಯ ಎಂದು ಆರೋಪಿತರನ್ನು  ಪ್ರಶ್ನಿಸಿದರು.
 ನಿವೃತ್ತ ಪಬ್ಲಿಕ್ ಪ್ರೊಸಿಕ್ಯೂಟರ್ ಬಿ ಜಯರಾಮ್ ಮಾತನಾಡಿ, ಕೆಲವೇ ಕೆಲವು ನಾಯಕರು ಗಾದಿಲಿಂಗಪ್ಪನವರ ಮೇಲೆ  ದಾಖಲೆಗಳಿಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಗಾದಿಲಿಂಗಪ್ಪ ತಮ್ಮ ಜೊತೆ ಅನ್ಯೂನ್ಯವಾಗಿ ಇಲ್ಲ ಎಂಬುದನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಅವರ ಮೇಲೆ ಹೇಗಾದರೂ ಮಾಡಿ ಆರೋಪಗಳನ್ನು ಹೋರಿಸಬೇಕೆಂದು ದಾಖಲೆಗಳಿಲ್ಲದ ಸಾಕ್ಷಿಗಳಿಲ್ಲದ ಸುಳ್ಳು ಸುದ್ದಿಗಳನ್ನು ಹರಡುತ್ತಾ ಆರೋಪಿಸುತ್ತಿದ್ದಾರೆ, ಅದೇ ರೀತಿಯಾಗಿ ಪರಿಶಿಷ್ಟ ಪಂಗಡದ ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಇಲ್ಲ ಒಂದು ವೇಳೆ ತೊಂದರೆ ಇದ್ದಲ್ಲಿ ವಿದ್ಯಾರ್ಥಿಗಳಾಗಲಿ ಅಥವಾ ಪೋಷಕರಾಗಲಿ ಜಿಲ್ಲಾ ಪರಿಶಿಷ್ಟ ಪಂಗಡ ಅಧಿಕಾರಿಗಳಿಗೆ ಅಥವಾ ಜಿಲ್ಲಾಧಿಕಾರಿಗಳಿಗೆ ದೂರು ನೀಡಬಹುದು ಆದರೆ ಈ ಮುಖಂಡರುಗಳು ಗಾದಿಲಿಂಗಪ್ಪ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಜಿಲ್ಲಾಧಿಕಾರಿಗಳು ಈ ಕುರಿತು ಗಂಭೀರವಾಗಿ ಪರಿಗಣಿಸಬೇಕಾದದ್ದು ಏನು ಇಲ್ಲ  ಎಂದರು.
 ಈ ಸಂದರ್ಭದಲ್ಲಿ ಬಿ ದುರ್ಗಪ್ಪ, ಕೆ ಸತ್ಯನಾರಾಯಣ, ಎರಗುಡಿ ಮುದಿ ಮಲ್ಲಯ್ಯ, ಹಗರಿ ಜನಾರ್ದನ, ಕೆಕೆಹಾಳ್ ದುರ್ಗಪ್ಪ,  ವಿನಾಯಕನಗರ ಲೋಕನಾಥ್, ಹಾವಳಗಿ ವೆಂಕಟೇಶ್, ಸಿಂದಿಗೆರಿ ಗೋವಿಂದಪ್ಪ, ಕಾಯಿ ಗಡ್ಡೆ ಬಸವರಾಜ್ ಸೇರಿದಂತೆ ನೂರಾರು ಜನ ವಾಲ್ಮೀಕಿ ಸಮಾಜದ ಮುಖಂಡರುಗಳು ಇದ್ದರು.
WhatsApp Group Join Now
Telegram Group Join Now
Share This Article