ನೇಸರಗಿ. ಇಲ್ಲಿನ ಪ್ರತಿಷ್ಠಿತ ದಿ. ನೇಸರಗಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ ಲಿ. ನೇಸರಗಿ ಇದರ ಸನ್ 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಧಾರಣ ಸಭೆಯು ಬ್ಯಾಂಕಿನ ಸಭಾ ಭವನದಲ್ಲಿ ಶುಕ್ರವಾರ ದಿ. 12-09-2025 ರಂದು ಮದ್ಯಾಹ್ನ 3-00 ಘಂಟೆಗೆ ಬ್ಯಾಂಕಿನ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸನಗೌಡ ದೊಡ್ಡಗೌಡರ ಇವರ ಅಧ್ಯಕ್ಷತೆಯಲ್ಲಿ ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಜರುಗಲಿದೆ. ಕಾರಣ ಯಾವತ್ತೂ ಬ್ಯಾಂಕಿನ ಸದಸ್ಯರು ಸರಿಯಾದ ಸಮಯಕ್ಕೆ ಆಗಮಿಸಬೇಕೆಂದು ಬ್ಯಾಂಕಿನ ವ್ಯವಸ್ಥಾಪಕರಾದ ಸುಭಾಸ ಎಸ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.