ಸಾಮೂಹಿಕ ಗುಂಡಿನ ದಾಳಿ ಕುರಿತ ಸಂವಾದದಲ್ಲಿ ಟ್ರಂಪ್‌ ಸ್ನೇಹಿತ ಕಿರ್ಕ್‌ ಹತ್ಯೆ

Ravi Talawar
ಸಾಮೂಹಿಕ ಗುಂಡಿನ ದಾಳಿ ಕುರಿತ ಸಂವಾದದಲ್ಲಿ ಟ್ರಂಪ್‌ ಸ್ನೇಹಿತ  ಕಿರ್ಕ್‌ ಹತ್ಯೆ
WhatsApp Group Join Now
Telegram Group Join Now

ಅಮೆರಿಕ: ಉತಾಹ್ ವ್ಯಾಲಿ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಮೆರಿಕದ ಕರ್ನರ್ವೇಟಿವ್ ಕಾರ್ಯಕರ್ತ ಹಾಗು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸ್ನೇಹಿತ ಚಾರ್ಲಿ ಕಿರ್ಕ್(31) ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡು ಕುತ್ತಿಗೆ ಸೀಳಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಕಿರ್ಕ್ ಅವರಿಗಾಗಿ ಪ್ರಾರ್ಥಿಸಿ – ಟ್ರಂಪ್: ಕಿರ್ಕ್ ಹತ್ಯೆಯನ್ನು ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. “ಕಿರ್ಕ್ ಎಲ್ಲರಿಂದಲೂ ಪ್ರೀತಿಸಲ್ಪಟ್ಟವರು ಮತ್ತು ಮೆಚ್ಚುಗೆ ಗಳಿಸಿದವರು. ಅವರಿಗಾಗಿ ಎಲ್ಲರೂ ಪ್ರಾರ್ಥಿಸೋಣ” ಎಂದು ಸಾಮಾಜಿಕ ಜಾಲತಾಣ ಟ್ರೂತ್‌ನಲ್ಲಿ ಮನವಿ ಮಾಡಿದ್ದಾರೆ.

“ದಂತಕಥೆ ಚಾರ್ಲಿ ಕಿರ್ಕ್ ಸಾವನ್ನಪ್ಪಿದ್ದಾರೆ. ಅಮೆರಿಕದಲ್ಲಿ ಚಾರ್ಲಿಗಿಂತ ಉತ್ತಮವಾಗಿ ಯಾರೂ ನಮ್ಮ ಯುವಕರ ಹೃದಯವನ್ನು ಅರ್ಥಮಾಡಿಕೊಂಡವರಿಲ್ಲ. ಅವರನ್ನು ಎಲ್ಲರೂ ಅದರಲ್ಲೂ ವಿಶೇಷವಾಗಿ ನಾನು ಹೆಚ್ಚು ಪ್ರೀತಿಸುತ್ತಿದ್ದೆ ಮತ್ತು ಮೆಚ್ಚಿಕೊಂಡಿದ್ದೆ. ಈಗ ಅವರು ನಮ್ಮೊಂದಿಗಿಲ್ಲ. ಪತ್ನಿ ಮೆಲಾನಿಯಾ ಮತ್ತು ನನ್ನ ಸಹಾನುಭೂತಿ ಕಿರ್ಕ್ ಅವರ ಪತ್ನಿ ಎರಿಕಾ ಮತ್ತು ಕುಟುಂಬದೊಂದಿಗೆ ಇರುತ್ತದೆ” ಎಂದು ಬರೆದುಕೊಂಡಿದ್ದಾರೆ. ಇದೇ ವೇಳೆ, ಕಿರ್ಕ್ ಗೌರವಾರ್ಥವಾಗಿ ಅಮೆರಿಕದಾದ್ಯಂತ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸುವಂತೆಯೂ ಅವರು ಆದೇಶಿಸಿದ್ದಾರೆ.

WhatsApp Group Join Now
Telegram Group Join Now
Share This Article