ಬಳ್ಳಾರಿ ಸೆ 10.ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಕೆಲಸವನ್ನು ಮಾಡುತಿದ್ದ ಹಮಾಲಿ ಕಾರ್ಮಿಕ ಪೀರಸಾಬ್ (40) ಅನಾರೋಗ್ಯ ನಿಮಿತ್ತ ಸಾವನ್ನಪ್ಪಿದ್ದಾರೆ.ಇವರಿಗೆ ಎಪಿಎಂಸಿ ವತಿಯಿಂದ ಸರಕಾರದ ಕಾಯಕನಿಧಿ ಅಡಿಯಲ್ಲಿ ಮೃತರ ಅಂತ್ಯ ಸಂಸ್ಕಾರಕ್ಕೆ 25 ಸಾವಿರ ರೂ ಗಳ ಚೆಕ್ಕನ್ನು ಎಪಿಎಂಸಿ ಅಧ್ಯಕ್ಷರಾದ ಕಟ್ಟೆಮನೆ ನಾಗೇಂದ್ರ, ಉಪಾಧ್ಯಕ್ಷ ರಾಮಣ್ಣ, ಕಾರ್ಯದರ್ಶಿ ಜಯಕುಮಾರ್ ಉಪಸ್ಥಿತಿಯಲ್ಲಿ ಚೆಕ್ ವಿತರಣೆ ಮಾಡಿದರು.
ಸರಕಾರದಿಂದ ಇನ್ನು ಒಂದು ಲಕ್ಷ ರೂ ವಿಮೆಯ ಹಣವನ್ನು ಕೂಡಾ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಹಮಾಲಿಗಳು ಮತ್ತು ಕಚೇರಿಯ ಸಿಬ್ಬಂದಿಗಳಾದ ವಿಶ್ವನಾಥ, ನಿರಂಜನ ಮೂರ್ತಿ, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.