ಗರಗ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರು ನಮನ ಕಾರ್ಯಕ್ರಮ.

Pratibha Boi
ಗರಗ ಗ್ರಾಮದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರು ನಮನ ಕಾರ್ಯಕ್ರಮ.
WhatsApp Group Join Now
Telegram Group Join Now
ಧಾರವಾಡ. ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ವಿದ್ಯಾರ್ಥಿಯ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಅನಿವಾರ್ಯತೆಯ ಕಾಲಘಟ್ಟದಲ್ಲಿ ಇದ್ದೇವೆ ಎಂದು ಧಾರವಾಡದ ಮನಗುಂಡಿಯ ಪರಮ ಪೂಜ್ಯ ಶ್ರೀ ಬಸವಾನಂದ ಮಹಾ ಸ್ವಾಮೀಜಿಗಳು ಹೇಳಿದರು.
 ಧಾರವಾಡ ತಾಲೂಕಿನ ಗರಗದ ಶ್ರೀ ಮಡಿವಾಳೇಶ್ವರ ಸಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 1997 ಮತ್ತು 99ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸ್ನೇಹ ಸಮ್ಮೇಳನ ಹಾಗೂ ಗುರುನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಆಶೀರ್ವಚನ ನೀಡುವ ಮೂಲಕ ಮಾತನಾಡಿದರು.
 ಈ ದಿವ್ಯ ಭವ್ಯ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಯುರ್ವೇದಿಕ ತಜ್ಞರು ಡಾ. ಶೃತಿ ಕೌಲಗುಡ್ಡವರು ಆಗಮಿಸಿ ಮಾತನಾಡಿ ದ ಅವರು ಮಿತಿಮೀರಿ ತಂತ್ರಜ್ಞಾನ ಬಳಕೆ ಮಾಡುತ್ತಿರುವುದರಿಂದ ಆತ ತನ್ನ ಸಹಜ ಬುದ್ಧಿಮತ್ತೆ ಕಳೆದುಕೊಳ್ಳುತ್ತಿದ್ದಾನೆ ಕೃತಕ ಬುದ್ಧಿಮತ್ತೆಯ ಗುಲಾಮನ ಆಗುತ್ತಿರುವುದು ವಿಷಾದನೀಯ ಎಂದರು. ಪರಿಣಾಮ. ಪ್ರಾಥಮಿಕ ಶಾಲಾ ಹಂತದ ವಿದ್ಯಾರ್ಥಿಗಳಿಗೆ ಕೌನ್ಸಿಲಿಂಗ್ ಮಾಡುತ್ತಿರುವ ಪ್ರಸಂಗ ಬಂದಿರುವುದು ದುರಾದೃಷ್ಟಕರವಾಗಿದೆ ಎಂದರು.
 ಶ್ರೀ ಗುರು ಮಡಿವಾಳೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಅಧ್ಯಕ್ಷರಾದ ಮಡಿವಾಳಗೌಡ್ರ ಪಾಟೀಲ್ ಅವರು  ಅಧ್ಯಕ್ಷೀಯ ನುಡಿಗಳನ್ನಆಡಿದರು.
ಗುರುವಂದನೆ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು, ತಮಗೆ ಕಲಿಸಿದ ಗುರುಗಳನ್ನು ವಿಶೇಷವಾಗಿ ಗೌರವಿಸಿದರು. ಎಲ್ಲ ಶಿಕ್ಷಕರನ್ನು ಹೂವು ಹಾಕಿ  ಬರಮಾಡಿಕೊಂಡು ತಮ್ಮ ವಿದ್ಯಾರ್ಥಿ ಜೀವನದ ಹಳೆಯ ಘಟನೆಗಳನ್ನು ಮೆಲಕು ಹಾಕಿದರು.
 ಪ್ರಾಂಶುಪಾಲರಾದ ಎನ್ ವೈ ಭಜಂತ್ರಿ.ಮತ್ತು ಶಿಕ್ಷಕರಾದ ಬಿ.ವೈ.ಬಾರಕೇರ. ಎಸ್ ಡಿ ಮರೇದ. ಆರ್ ಎಸ್ ಕಲ್ಲೋಳಿ. ಏನ್ ಜಿ ಮೆಲವಂಕಿ..ಸಿಎಂ ಜವಳಿ .ನಾಗಯ್ಯ ಹಿರೇಮಠ್ . ಎಮ್ ಬಿ ರಾಟಿ. ಜಿ ಜಿ ಶಿವಳ್ಳಿ. ಬಸವರಾಜ್ ಮೂರ್ಖಂಡಿ. ಫಕೀರಪ್ಪ ಸಣ್ಣಮನಿ. ಸೇರಿದಂತೆ ಶಾಲೆಯ ಹಳೆಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು
WhatsApp Group Join Now
Telegram Group Join Now
Share This Article