ಯರಗಟ್ಟಿ : ತಾಲೂಕಿನಲ್ಲಿ ಹೆಚ್ಚುತ್ತಿರುವ ಗುಂಡಾಗಿರಿ, ದೌರ್ಜನ್ಯ, ಕಳ್ಳತನ, ಅನಾಚಾರಗಳನ್ನು ಎಸಗುವ ದುಷ್ಕರ್ಮಿಗಳನ್ನು ಮಟ್ಟ ಹಾಕುವಂತೆ ಪಟ್ಟಣದ ಮಹಾತ್ಮ ಗಾಂಧೀಜಿ ವೃತ್ತಿದಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭವಾಗಿ ಬಾಗವಾ ಚೌಕ, ಮಠದಗಲ್ಲಿ, ಟೀಚರ್ ಕಾಲೋನಿ, ಮಹಾಂತೇಶ ನಗರ, ಸಂಗೋಳ್ಳಿ ರಾಯಣ್ಣ ವೃತ್ತಿದ ಮೂಲಕ ಎಂ.ಜಿ ರಸ್ತೆಯಲ್ಲಿ ಪ್ರತಿಭಟನೆ ವೇದಿಕೆಗೆ ಬಂದು ಶಾಂತಿಯುತ ಪ್ರತಿಭಟನೆ ಮಾಡಲಾಯಿತು.
ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಹಾಗೂ ಯರಗಟ್ಟಿ ಪಟ್ಟಣದಲ್ಲಿ ಮತ್ತುಕೆಲವು ದುಷ್ಕರ್ಮಿಗಳ ಹಾವಳಿ ಹೆಚ್ಚಾಗಿದ್ದು ಗುಂಡಾ ವರ್ತನ ಮುಖಾಂತರ ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿ ಮಾಡತ್ತಿದ್ದು ಅವರು ಮಾಡುವ ಕೃತ್ಯಗಳನ್ನು ಪ್ರತಿದಿನ ನೋಡಿದಾಗ ಪಟ್ಟಣದಲ್ಲಿ ಹೆದರಿಕೆಯಿಂದ ಜೀವನ ಸಾಗಿಸುವ ಹಾಗೇ ಯರಗಟ್ಟಿ ತಾಲೂಕಿನ ಜನ ಇವತ್ತಿನ ದಿನದಲ್ಲಿ ಎದುರು ನೋಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ದಲಿತ ಮುಖಂಡ ಭಾಸ್ಕರ್ ಹಿರೇಮೆತ್ರಿ ಮಾತನಾಡಿದ ಅವರು ಪಟ್ಟಣದ ಮಹಿಳೆ ವ್ಯಾಪಾರಸ್ಥರ ಮೇಲೆ ಹಲ್ಲೆ ಮಾಡಿ ಕಪಾಳಕ್ಕೆ ಹೊಡೆಯುವುದು,ತಾಲೂಕಿನಲ್ಲಿ ಜರಗುವ ಸಾರ್ವಜನಿಕ ಸಭೆ ಸಮಾರಂಭಗಳು, ಮೆರವಣಿಗೆಯಲ್ಲಿ ಅನಗತ್ಯವಾಗಿ ಭಾಗವಹಿಸಿ ಜಗಳ ಮಾಡಿ ಜನರಿಗೆ ಚಾಕು ತೋರಿಸಿ ಜೀವ ಬೆದರಿಕೆ ಹಾಕಿ ಅಷ್ಟೆ ಅಲ್ಲದೇ ಅವರ ಮನೆಯವರಿಂದ ಜೀವ ಬೆದರಿಕೆ ಹಾಕುವುದು, ಬಾರ್, ಖಾನಾವಳಿ, ದಾಭಾಗಳಲ್ಲಿ ಊಟ ಮಾಡಿದ ನಂತರ ಬಿಲ್ ಕೇಳಿದರೆ ಮಾಲಕರೆ ಮೇಲೆ ಹಾಗೂ ಅಲ್ಲಿರುವ ಕೆಲಸಗಾರರ ಮೇಲೆ ಹಲ್ಲೆ ಮಾಡಿ ಬಿಲ್ ಕೊಡದೇ ಹೋಗುವುದು ಇಂತಹ ಪ್ರಕರಣಗಳು ಬೆಳಕಿಗೆ ಬಂದ ಕಾರಣ ಇಂದು ಪಟ್ಟಣದ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರು ಬೀದಿಗೆ ಬಂದು ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದರು.
ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ ಜನ ನಿಬಿಡ ಪ್ರದೇಶದಲ್ಲಿ ಸಂಚರಿಸುವ ಬೈಕ ಸವಾರರನ್ನು ಅಡ್ಡಗಟ್ಟಿ ಶಾಕು ಹಾಗೂ ತಲ್ವಾರಗಳನ್ನು ತೋರಿಸಿ ಹಣ, ಚಿನ್ನ, ಮೊಬೈಲ್ ಕಸಿದುಕೊಳ್ಳುವುದು, ಕಾಲೇಜು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷಬೀಜ ಹಾಕಿ ಅವರಿಗೆ ಹಣದ ಆಸೆ ತೋರಿಸಿ ಚಟಕ್ಕೆ ದಾಸನಾದ ಮೇಲೆ ಅವರಿಂದ ಕಾನೂನು ಬಾಹಿರ ಕೆಲಸ ಮಾಡುವ ಹಾಗೆ ಪ್ರೇರಣೆ ಮಾಡುವುದು, ಯರಗಟ್ಟಿ ತಾಲೂಕಿನಲ್ಲಿ ಬೇರೆ ರಾಜ್ಯದಿಂದ ಬಂದು ವ್ಯಾಪಾರ ಮಾಡುವ ವರ್ತಕರಿಗೆ ಪ್ರತಿ ತಿಂಗಳು ಹಪ್ತಾ ಕೊಡುವುದಂತೆ ಹೇಳುವುದು ಕೊಡದೇ ಇದ್ದ ಸಮಯದಲ್ಲಿ ಆ ಅಂಗಡಿಯನ್ನು ದರೋಡೆ ಮಾಡುವುದು ಅವರಿಗೆ ಹೆದರಿಕೆ ಹಾಕುವುದು, ಪ್ರತಿ ಶನಿವಾರ ನಡೆಯುವ ಯರಗಟ್ಟಿಯ ದನದ ಮಾರುಕಟ್ಟೆಯಲ್ಲಿ ದನದ ವ್ಯಾಪಾರಸ್ಥರಿಗೆ ಹಾಂಗೂ ರೈತರಿಗೆ ಹೆದರಿಕೆ ಹಾಕಿ ಹಣ ವಸೂಲಿ ಪ್ರಕರಣಗಳು ಕೇಳಿ ಬಂದಿವೆ ಆದರಿಂದ ಕಿಡಿಗೇಡಿಗಳನ್ನು ಕುಡಲೆಬಂದಿಸಿ ಅವರಿಗೆ ಕಠಿಣ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಆನಂದ ಬಾಗೋಡಿ ಮಾತನಾಡಿ ಯರಗಟ್ಟಿ ಬಸ್ ನಿಲ್ದಾನದಲ್ಲಿ ರಾತ್ರಿ ವೇಳೆ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿಸಿ ಅವರ ಮೇಲೆ ಹಲ್ಲೆ ಮಾಡಿ ಹೆದರಿಸಿ ಹಣ, ಚಿನ್ನ ಮತ್ತು ಮೊಬೈಲಗಳನ್ನು ಕಿತ್ತುಕೊಂಡು ಹೋಗುವುದು. ಒಟ್ಟಾರೆಯಾಗಿ ಯರಗಟ್ಟಿ ತಾಲೂಕಿನಲ್ಲಿ ಅಶಾಂತಿ ಸೃಷ್ಟಿ ಮಾಡಿ ಯರಗಟ್ಟಿ ತಾಲೂಕಿನಲ್ಲಿ ಜನರ ನೆಮ್ಮದಿ ಹಾಳು ಮಾಡಲು ಹೊರಟಿರುವ ಪುಡಿ ರೌಡಿಗಳನ್ನು ಹಾಗೂ ಪುಡಿ ರೌಡಿಗಳಿಗೆ ಬೆನ್ನುಲುಬಾಗಿ ನಿಂತಿರುವ ಎಲ್ಲರನ್ನು ಮಟ್ಟ ಹಾಕಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಹಾಗೂ ಅವರನ್ನು ಆದಷ್ಟು ಬೇಗನೆ ಗುರುತಿಸಿ ಗಡಿಪಾರು ಮಾಡಬೇಕೆಂದು ಈ ಸ್ವಾಭಿಮಾನಿ ಪ್ರತೀಕದ ಹೋರಾಟದ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಜರುಗದೇ ಇದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿ ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೋಳ, ಶಾಸಕ ವಿಶ್ವಾಸ ವೈದ್ಯ, ಡಿಎಸ್ಪಿ ಮಾಡಿವಾಳರ ಡಿ ಎಂ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅಜೀತಕುಮಾರ ದೇಸಾಯಿ, ವಿಶಾಲಗೌಡ ಪಾಟೀಲ, ಶಶಿಕಾಂತ ಹಾದಿಮನಿ, ಜೆ. ರತ್ನಾಕರ ಶೆಟ್ಟಿ, ಸಂತೋಷ ಹಾದಿಮನಿ, ಶ್ರೇಯಸ್ ಮಾಮನಿ, ವೆಂಕಟೇಶ ದೇವರಡ್ಡಿ, ಈರಣ್ಣಾ ಚಂದರಗಿ, ಅಶೋಕ ಗಾಣಿಗಿ, ಮಹಾಂತೇಶ ಜಕಾತಿ, ಫಕ್ಕೀರಪ್ಪ ಕಿಲಾರಿ, ಗಿರೀಶ ಪಾಟೀಲ, ಆಯ್. ಜಿ. ಬೆಣ್ಣಿ, ಕುಮಾರ ಹಿರೇಮಠ, ಚೇತನ ಜಕಾತಿ, ಮಹಾಂತೇಶ ಅಲ್ಲನ್ನವರ, ಸದಾನಂದ ಹಣಬರ, ಮುತ್ತು ದೇವರಡ್ಡಿ, ಈರಣ್ಣಾ ಪೂಜೇರ, ನಿಖಿಲ ಪಾಟೀಲ, ಇಮ್ತೀಯಾಜ ಖಾದ್ರಿ, ಬಸವರಾಜ ಗಂಗರಡ್ಡಿ, ವಿಠ್ಠಲಗೌಡ ದೇವರಡ್ಡಿ, ಸಂತೋಷ ಚನ್ನಮೆತ್ರಿ,ಮಲ್ಲಿಕಸಾಬ ಬಾಗವಾನ, ಅರುಣ ನೀಲಪ್ಪನ್ನವರ, ಅರುಣ ಪಟ್ಟೇದ, ಶಿವಾನಂದ ಪಟ್ಟಣಶೆಟ್ಟಿ, ಸುಪ್ರೀತ ಬಾಳಿ, ಸದಾನಂದ ಪಾಟೀಲ, ಎಪಿಎಂಸಿ ಅಧ್ಯಕ್ಷ ನೀಲಕಂಠ ಸಿದ್ದಬಸನ್ನವರ, ಕೆಎಂಎಫ್ ನಿರ್ದೇಶಕ ಶಂಕರ ಇಟ್ನಾಳ, ಪ್ರಕಾಶ ವಾಲಿ, ನಾಗಪ್ಪ ಪುಂಜಿ ಮತ್ತು ರೈತ ಸಂಘ, ಪಟ್ಟಣ ವ್ಯಾಪಾರಸ್ಥರು, ಬಾರ್ ಅಸೋಸಿಯೇಶನ್, ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ಹೇಳಿಕೆ ೧ : ಪಟ್ಟಣದಲ್ಲಿ ಅಶಾಂತಿ ನಿರ್ಮಾಣ ಮಾಡಲು ಯತ್ನಿಸುವ ಕಿಟ ಗಾಡಿಗಳನ್ನು ಮಟ್ಟ ಹಾಕಲು ಪೊಲೀಸ ಇಲಾಖೆ ಅಧಿಕಾರಿಗಳು ಚರ್ಚೆ ಮಾಡಿ ಅವರನ್ನು ಕೂಡಲೆ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಮಾನ್ಯ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಶೀಘ್ರದಲ್ಲಿ ಯರಗಟ್ಟಿಗೆ ಪಿಐ ಪೊಲೀಸ್ ಠಾಣೆ ಮಂಜೂರು ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಜೊತೆ ಮಾಡುತ್ತೇನೆ ಎಂದು ಹೇಳಿದರು.
ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ವಿಧಾನ ಸಭಾ ಕ್ಷೇತ್ರ
ಹೇಳಿಕೆ ೨ :
ಪಟ್ಟಣದ ಜನರ ನೆಮ್ಮದಿ ಹಾಳು ಮಾಡುತ್ತಿರುವ ಗಿಡಿ ಗಾಡಿಗಳ ವಿರುದ್ಧ ಕೂಡಲೇ ಸೂಕ್ತ ಕ್ರಮ ಕೈಗೊಂಡು ಹೆಚ್ಚಿನ ಪೊಲೀಸರ ಯೋಜನೆ ಮಾಡಿ ಗಸ್ತು ತಿರುಗಲು ಇಬ್ಬರ ಪೊಲೀಸ್ ಪೇದೆಗಳ ನೇಮಕಾತಿ ಮಾಡಲಾಗುವುದು.
ಮಡಿವಾಳರ ಎಂ
ಡಿ, ಡಿಎಸ್ಪಿ ರಾಮದುರ್ಗ ವೃತ್ತಿ