ಗದಗ: ಇಲ್ಲಿನ ರೋಟರಿ ಗದಗ ಸೆಂಟ್ರಲ್ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಕರಿಗೆ ರೋಟರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸೇವಾಲಾಲ ನಗರದ ರೋಟರಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಚೇತನ ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವ ಶಿಕ್ಷಕರನ್ನು ನಾವೇ ಗುರುತಿಸಿ ಆಯ್ಕೆ ಮಾಡಿ ಈ ಪ್ರಶಸ್ತಿಯನ್ನು ನೀಡುತ್ತಿದ್ದೇವೆ ಎಂದು ಚೇತನ ಹೇಳಿದರು.
ಈ ಸಂದರ್ಭದಲ್ಲಿ ಆದರ್ಶ ಶಿಕ್ಷಕರಾದ ಶ್ರೀಮತಿ ಮಂಜುಳಾ ವಿ ಕಲಹಾಳ, ಶ್ರೀ ಬಿ.ಎಸ್.ಹಳ್ಯಾಳ, ಶ್ರೀ ಸಿದ್ದಲಿಂಗಪ್ಪಾ ಕೆ ಹಗರನ್ನವರ, ಶ್ರೀಮತಿ ತ್ರಿವೇಣಿ ಜಿ ಕಂಬಾಳಿಮಠ, ಶ್ರೀ ವಿನಾಯಕ ಆರ್ ಬಂಡಾ ಅವರನ್ನು ಪ್ರಶಸ್ತಿ ಪತ್ರದೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯ ಮೇಲೆ ಅಸಿಸ್ಟಂಟ್ ಗೌರ‍್ನರ ವಿ.ಕೆ.ಗುರುಮಠ, ರೋಟರಿ ಲಿಟ್ರಸಿ ಛೇರ‍್ಮನ್ ಪಿಎಜಿ ಎಸ್.ಆಯ್ ಅಣ್ಣಿಗೇರಿ, ಕಾರ್ಯದರ್ಶಿ ರಾಜಶೇಖರ ಉಮನಾಬಾದಿ, ಕೋಶಾಧಿಕಾರಿ ಡಾ.ಪ್ರಭು ಗಂಜಿಹಾಳ ಉಪಸ್ಥಿತರಿದ್ದರು. ಸ್ವಾಗತವನ್ನು ಮಾಜಿ ಅಸಿಸ್ಟಂಟ್ ಗವರ‍್ನರ್ ಮಲ್ಲಿಕಾರ್ಜುನ ಐಲಿ ಮಾಡಿದರೆ ಕೊನೆಯಲ್ಲಿ ಡಾ.ಪ್ರಭು ಗಂಜಿಹಾಳ ವಂದಿಸಿದರು. ಕಾರ್ಯಕ್ರಮವನ್ನು ರಾಜಶೇಖರ ಉಮನಬಾದಿ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ರೋಟರಿ ಗದಗ ಸೆಂಟ್ರಲ್ ನ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು.