ಹೊಸಪೇಟೆ ಸೆ.10: ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯನ್ನಾಗಿ ಕವಿತಾ ಎಸ್ ಮಣ್ಣಿಕೇರಿ ಐ.ಎ.ಎಸ್ (2012ಬ್ಯಾಚ್ )ರವರನ್ನು ನೇಮಕಮಾಡಿ ಮಂಗಳವಾರ ಆದೇಶ ಹೊರಡಿಸಿದೆ. ಬುಧವಾರ ಕವಿತಾ ಎಸ್ ಮಣ್ಣಿಕೇರಿ ಯವರು ವಿಜಯನಗರ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಅಧಿಕೃತವಾಗಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಜಿಲ್ಲೆಯ ಮೊಟ್ಟ ಮೊದಲ ಮಹಿಳಾ ಜಿಲ್ಲಾಧಿಕಾರಿ ಎನ್ನುವ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ.ಎಸ್ ದಿವಾಕರ ಅವರು ಜಿಲ್ಲೆಯಲ್ಲಿ 2ವರ್ಷ ಸೇವೆ ಸಲ್ಲಿಸಿದ್ದು. ಹುದ್ದೆ ತೋರಿಸದೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ತೆರವಾದ ಜಿಲ್ಲಾಧಿಕಾರಿ ಹುದ್ದೆಗೆ ಕವಿತಾ ಎಸ್ ಮಣ್ಣಿಕೇರಿಯವರನ್ನು ನೇಮಕ ಮಾಡಿದೆ.