ಮತ್ತಿಕೊಪ್ಪ: ಭಾರತೀಯ ಕೃಷಿ ಅನುಸಂಧಾನ ಪರಿಷತ್ತು, ನವದೆಹಲಿಯ ಕೆಎಲ್‌ಇ-ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಹಾಗೂ ಪಶುಪಾಲನಾ ಶ್ರೇಷ್ಠತಾ ಕೇಂದ್ರ, ಹೆಸರಘಟ್ಟ, ಬೆಂಗಳೂರು ಇವರ ಸಹಯೋಗದಲ್ಲಿ ಮೂರು ದಿನ ಅವಧಿಯ ಹೈನೋದ್ಯಮ ಹಾಗೂ ಪಶುಸಂಗೋಪನೆಯಲ್ಲಿ ಉದ್ಯಮಶೀಲತೆ ತರಬೇತಿ ಕಾರ್ಯಕ್ರಮವನ್ನು ದಿನಾಂಕ ೧೦.೦೯.೨೦೨೫ ರಿಂದ ೧೨.೦೯.೨೦೨೫ ರವರೆಗೆ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪದಲ್ಲಿ ಆಯೋಜಿಸಲಾಗಿದೆ.
ತರಬೇತಿ ಕಾರ್ಯಕ್ರಮವನ್ನು ಪಶುಸಂಗೋಪನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಮಲ್ಪಪ್ಪ ಸಜ್ಜನ ಉದ್ಘಾಟಿಸಿ ಮಾತನಾಡುತ್ತ, ಗುಣಮಟ್ಟದ ಹಾಲು ಉತ್ಪಾದನೆಯನ್ನು ಉತ್ತೇಜಿಸಲು ಪಶು ಪೋ?ಣೆ, ಹಾಲು ಕರೆಯುವಿಕೆ ಮತ್ತು ಇತರ ಪದ್ಧತಿಗಳಲ್ಲಿ ರೈತರ ಪಾತ್ರವನ್ನು ವಿವರಿಸಿದರು ಹಾಗೂ ಹಾಲು ಉತ್ಪಾದಕರ ಅನುಕೂಲಕ್ಕಾಗಿ ಕೇಂದ್ರದ ಸೌಲಭ್ಯ ಹಾಗೂ ಚಟುವಟಿಕೆಗಳ ಬಗ್ಗೆ ರೈತರಿಗೆ ತಿಳಿಸಿದರು.
ಮತ್ತಿಕೊಪ್ಪದ ಕೆಎಲ್‌ಇ ಕೆವಿಕೆ ವಿಜ್ಞಾನಿ ಶ್ರೀ.ಎಸ್.ಎಂ. ವಾರದ ಮಾತನಾಡಿ ಪಶು ಸಾಕಾಣಿಕೆ ಕುರಿತು ವೈಜ್ಞಾನಿಕ ಹೈನುಗಾರಿಕೆ, ಗುಣಮಟ್ಟದ ಹಾಲು ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮುಂತಾದ ಚಟುವಟಿಕೆಗಳು ರೈತರ ಆದಾಯವನ್ನು ಹೆಚ್ಚಿಸುವುದಾಗಿ ಹಾಗೂ ಹೈನುಗಾರಿಕೆ ಲಾಭದಾಯಕ ಉಪಕಸುಬಾಗಿ ಬೆಳೆಯಬೇಕೆಂದು ತಿಳಿಸಿದರು. ಪಶುಸಂಗೋಪನೆ ಹಾಗೂ ಕೃಷಿ ಒಂದೇ ನಾಣ್ಯದ ಮುಖಗಳಿದ್ದಂತೆ ಹಾಗೂ ಅವುಗಳು ಒಂದಕ್ಕೊಂದು ಪೂರಕವಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ, ಹೈನು ಉದ್ಯಮ ಹಾಗೂ ಪಶುಸಂಗೋಪನೆಯಲ್ಲಿ ನಿರ್ದಿ?ವಾದ ಉತ್ಪಾದನೆ ಸಾಧ್ಯವಾಗುತ್ತಿಲ್ಲ. ಈ ಕ್ಷೇತ್ರದಲ್ಲಿ ರೈತರು ಆರ್ಥಿಕವಾಗಿ ಪ್ರಗತಿ ಹೊಂದಲು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಕಸುಬುಗಳು ಉದ್ದಿಮೆ ರೂಪದಲ್ಲಿ ಬೆಳೆಯಲು ಜಾನುವಾರು ತಳಿ, ರೋಗ ನಿರ್ವಹಣೆ ಕುರಿತು ವೈಜ್ಞಾನಿಕವಾದ ಕ್ರಮಗಳನ್ನು ತಿಳಿಯಪಡಿಸಲು ೩ ದಿನಗಳ ತರಬೇತಿಯಲ್ಲು ಆಯೋಜಿಸಲಾಗಿದೆ ಎಂದರು.
ಬೆಂಗಳೂರಿನ ಪಶುಸಂಗೋಪನಾ ಶ್ರೇ?ತೆಯ ಕೇಂದ್ರದ ಜಾನುವಾರು ಅಧಿಕಾರಿ ಡಾ.ಎಸ್. ಬಾಲರಾಜ್ ಮಾತನಾಡಿ ಹೈನುಗಾರಿಕೆ ಹಾಗೂ ಪಶುಸಂಗೋಪನಾ ವಿ?ಯದಲ್ಲಿ ರೈತರ ಜ್ಞಾನಮಟ್ಟ ಅಭಿವೃದ್ಧಿಪಡಿಸಿ ಕೌಶಲ್ಯ ಪೂರಕವಾಗಿ ನಿರ್ವಹಣೆ ಮಾಡಲು ತರಬೇತಿಯನ್ನು ಈ ಭಾಗದ ರೈತರಿಗೆ ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಲಾಗಿದೆ ಎಂದರು. ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲೆಯ ೫೦ ರೈತರು ಭಾಗವಹಿಸುತ್ತಿದ್ದಾರೆ. ಕೇಂದ್ರದ ತಾಂತ್ರಿಕ ಅಧಿಕಾರ ಶ್ರೀ.ವಿನೋದ ಕೋಚಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದ ಕರಡಿಗುದ್ದಿ ಸ್ವಾಗತಿಸಿದರು. ಡಾ. ಗುರುರಾಜ ಕೌಜಲಗಿ ವಿಜ್ಞಾನ (ಪಶು ವಿಜ್ಞಾನ) ಇವರು ವಂದಿಸಿದರು.


