ಮೂಡಲಗಿ : ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಷನ್ ಗೋಕಾಕ್ ಸಂಯುಕ್ತಾಶ್ರಯದಲ್ಲಿ ರವಿವಾರ ದಿ.14ರಂದು ಬೆಳಗಾವಿ ನಗರದಲ್ಲಿ ಉಚಿತವಾಗಿ ಬೃಹತ ಸರ್ವ ಧರ್ಮ ವಧು-ವರರ ಮುಖಾಮುಖಿ ಸಮಾವೇಶ ಏರ್ಪಡಿಸಲಾಗಿದೆ ಎಂದು ನಮ್ಮ ಕನ್ನಡಿಗರ ಬಳಗ ಹಾಗೂ ಬನವಿ ಫೌಂಡೇಶನ್ ರಾಜ್ಯಾಧ್ಯಕ್ಷ ಬಾಲಚಂದ್ರ ಬನವಿ ತಿಳಿಸಿದರು.
ಮಂಗಳವಾರದಂದು ಪಟ್ಟಣದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಧು-ವರರ ಸಮಾವೇಶವನ್ನು ಬೆಳಿಗ್ಗೆ 10-00 ರಿಂದ ಸಂಜೆ 4-00 ಫಂಟೆಯವರೆಗೆ ಬೆಳಗಾವಿಯ ಶ್ರೀ ಶಿವಬಸವ ಶಿವಾಲಯ ನವಗ್ರಹ ಮಂದಿರ, ದೇವರಾಜ ಅರಸ ಬಡಾವಣೆ, ಬಸವನ ಕುಡಚಿ, (ಸಾಂಬ್ರಾ ರೋಡ)ನಲ್ಲಿ ಆಯೋಜಿಸಲಾಗಿದ್ದು, ಸಮಾವೇಶದಲ್ಲಿ ವಯೋಮಿತಿ ಮೀರಿದವರು, ವಿಕಲಚೇತನರು, ವಿಚ್ಚೇದಿತರು, ಮರು ವಿವಾಹ ಬಯಸುವ ಗಂಡು ಅಥವಾ ಹೆಣ್ಣು ಭಾಗವಹಿಸಬಹುದು. ಭಾಗವಹಿಸಲಿಚ್ಚಿಸುವ ವಧು-ವರರು ತಮ್ಮ ಇತ್ತೀಚಿನ ಪೂರ್ಣ ಭಾವಚಿತ್ರ, ದೂರವಾಣಿ ಸಂಖ್ಯೆ, ಸಂಪೂರ್ಣ ವಿವರಗಳೊಂದಿಗೆ ದಿ.11 ರೊಳಗೆ ಮೊಬೈಲ್ ಸಂಖ್ಯೆ 7760527149, 9164206421 ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದಾಗಿದ್ದು, ಸಮಾವೇಶದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂಧರ್ಭದಲ್ಲಿ ನಮ್ಮ ಕನ್ನಡಿಗರ ಬಳಗದ ಮಹಿಳಾ ಘಟಕ ರಾಜ್ಯಾಧ್ಯಕ್ಷೆ ಪರಿದಾ ನದಾಫ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಶಿಗ್ಗಾಂವಿ, ಮಹಿಳಾ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷೆ ಸವಿತಾ ಶಿಗ್ಗಾಂವಿ, ಮೂಡಲಗಿ ತಾಲೂಕಾ ಅಧ್ಯಕ್ಷ ಅಜೀತ್ ಬಡಿಗೇರ, ಗೋಕಾಕ್ ತಾಲೂಕಾ ಅಧ್ಯಕ್ಷ ಅರುಣ ಮಾದರ, ಗೋಕಾಕ್ ತಾಲೂಕಾ ರೈತ ಘಟಕದ ಅಧ್ಯಕ್ಷ ಯಲ್ಲಪ್ಪ ಬೀರನಗಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.