ಪಂಜಾಬ್‌ ನೆರೆ ಸಂತ್ರಸ್ತರಿಗೆ ಚಿನ್ನಾಭರಣ ದಾನಗೈದ ವೃದ್ಧೆ

Ravi Talawar
ಪಂಜಾಬ್‌ ನೆರೆ ಸಂತ್ರಸ್ತರಿಗೆ ಚಿನ್ನಾಭರಣ ದಾನಗೈದ ವೃದ್ಧೆ
WhatsApp Group Join Now
Telegram Group Join Now

ನುಹ್​(ಹರಿಯಾಣ): ಭೀಕರ ಪ್ರವಾಹದಿಂದ ತತ್ತರಿಸಿರುವ ಪಂಜಾಬ್​ ಜನರಿಗೆ ನೆರವಾಗಲು ವೃದ್ಧೆಯರು ತಮ್ಮಲ್ಲಿದ್ದ ಎಲ್ಲ ಆಭರಣಗಳನ್ನು ದಾನವಾಗಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ತಿಲಕ್‌ಪುರಿ ಗ್ರಾಮದ 75 ವರ್ಷದ ರಹೀಮಿ ಅವರು, “ಇದನ್ನು ನನ್ನ ಮಗಳ ಮದುವೆಗಾಗಿ ಕೂಡಿಟ್ಟಿದ್ದೆ. ಆದರೆ, ಇದರ ಅವಶ್ಯಕತೆ ಈಗ ಪಂಜಾಬ್​ಗೆ ಇದೆ” ಎಂದರು. “1996ರಲ್ಲಿ ನಾನೂ ಕೂಡ ಪ್ರವಾಹ ಸಂತ್ರಸ್ತೆಯಾಗಿದ್ದು, ಜನರ ಸಂಕಷ್ಟದ ಅರಿವಿದೆ. ಹಾಗಾಗಿ, ಈ ಆಭರಣ ಅವರ ನೆರವಿಗೆ ಇರಲಿ” ಎಂದಿದ್ದಾರೆ.

ಇನ್ನು, ಸೋಹ್ನಾ ಬ್ಲಾಕ್‌ನ ನುನೆಹ್ರಾ ಗ್ರಾಮದ 70ರಿಂದ 80 ವರ್ಷ ವಯಸ್ಸಿನ ಮಹಿಳೆಯರು ಕೂಡಾ ಪ್ರವಾಹಪೀಡಿತರಿಗೆ ಸಹಾಯ ಮಾಡಲು ಸುಮಾರು 2 ಕೆ.ಜಿ ಬೆಳ್ಳಿ ಮತ್ತು 20 ಗ್ರಾಂ ಚಿನ್ನ ಹಾಗು 5 ಲಕ್ಷ ರೂ.ಗಳನ್ನು ದಾನ ಮಾಡಿದ್ದಾರೆ. ಈ ಕುರಿತು ಮಾತನಾಡಿರುವ 85 ವರ್ಷದ ಅಸ್ಮೀನಾ ಅವರು, “ಸಂತ್ರಸ್ತ ಹೆಣ್ಣು ಮಕ್ಕಳಿಗೆ ಮಾನವೀಯತೆಯ ನೆಲೆಯಲ್ಲಿ ನನ್ನ ಆಭರಣಗಳನ್ನು ನೀಡುತ್ತಿದ್ದೇನೆ” ಎಂದು ತಿಳಿಸಿದರು. ಅನೇಕ ಹಿರಿಜೀವಗಳು ತಮ್ಮ ಅಮೂಲ್ಯ ವಸ್ತುಗಳನ್ನು ದಾನ ಮಾಡಿದ್ದಾರೆ. ಆಭರಣ ಇಲ್ಲದವರು ತಮ್ಮಲ್ಲಿದ್ದ ಇತರೆ ವಸ್ತುಗಳನ್ನೂ ದಾನ ಮಾಡಿದ್ದಾರೆ.

WhatsApp Group Join Now
Telegram Group Join Now
Share This Article