ಶಿಕ್ಷಕರು ಅಕ್ಷರಭ್ಯಾಸ ಕೌಶಲ್ಯ ಮತ್ತು ಸಾಮರ್ಥ್ಯ ಬೆಳೆಸಿಕೊಳ್ಳಬೇಕು: ಎಲ್. ಎನ್ . ಉಡುಪಿ

Ravi Talawar
ಶಿಕ್ಷಕರು  ಅಕ್ಷರಭ್ಯಾಸ ಕೌಶಲ್ಯ ಮತ್ತು ಸಾಮರ್ಥ್ಯ ಬೆಳೆಸಿಕೊಳ್ಳಬೇಕು: ಎಲ್. ಎನ್ . ಉಡುಪಿ
WhatsApp Group Join Now
Telegram Group Join Now

ವಿಜಯಪುರ – ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿ ಶಿಕ್ಷಕರಿಗೆ ಗೌರವ ಸಲ್ಲಿಸಿದರು .
ಮುಖ್ಯ ಅತಿಥಿಯಾಗಿ ಮಾತನಾಡಿದ ಪ್ರೌಢಶಾಲಾ ಶಿಕ್ಷಕಿ ಎಲ್. ಎನ್ . ಉಡುಪಿ ಮಕ್ಕಳ ಮನಸ್ಸು ಕೋಮಲ ಅವರ ಭಾವನೆಗೆ ಸ್ಪಂದಿಸಿ ಅಕ್ಷರಭ್ಯಾಸವನ್ನು ಮಾಡಿಸುವ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಶಿಕ್ಷಕರಾದ ನಾವು ಬೆಳೆಸಿಕೊಳ್ಳಬೇಕು. ಇಂತಹ ಉದಾತ್ತ ಪರಿಕಲ್ಪನೆಯನ್ನು ಡಾ|| ಸರ್ವಪಲ್ಲಿ ರಾಧಾಕೃ?ನ್ ಹೊಂದಿದ್ದರು ಎಂದು ತಿಳಿಸಿದ ಅವರು ಅವರೊಬ್ಬ ಆದರ್ಶ ಶಿಕ್ಷಕರಾಗಿ ತತ್ವಜ್ಞಾನಿಯಾಗಿ ಮನದ ಅಜ್ಞಾನದ ಕತ್ತಲೆ ಕಳೆದು ವಿದ್ಯಾರ್ಥಿಗಳ ಬದುಕಿಗೆ ಸುಜ್ಞಾನದ ಬೆಳಕು ಬೀರಿದ ಅದ್ಭುತ ಶಕ್ತಿ. ಎಂದರಲ್ಲದೆ ಗುರು ಶಿ? ಸಂಬಂಧದ ಭವ್ಯ ಪರಂಪರೆ ಅರಿತು ಅತ್ಯುತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ನೀಡಿ ಶಿ? ಬಳಗವನ್ನು ಸೃಷ್ಟಿಸಿದ ದಾರ್ಶನಿಕರಾಗಿದ್ದರು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಡಾ|| ಸರ್ವಪಲ್ಲಿ ರಾಧಾಕೃ?ನ್ ಚಿತ್ರ ಬಿಡಿಸಿ ಅವರ ತತ್ವಾದರ್ಶಗಳ ಸಂದೇಶವನ್ನು ಓದಿದರು.ವೇದಿಕೆ ಮೇಲೆ ಮುಖ್ಯೋಪಾಧ್ಯಾಯ ರಮೇಶ ಕೋಟ್ಯಾಳ, ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು. ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article