ಘಟಪ್ರಭಾದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ

Ravi Talawar
ಘಟಪ್ರಭಾದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ
WhatsApp Group Join Now
Telegram Group Join Now
 ಘಟಪ್ರಭಾ.ರವಿವಾರ ದಿನಾಂಕ 07-09-2025 ರಂದು ಮಲ್ಲಾಪುರ ಪಿ ಜಿ ವಿಠ್ಠಲ ರುಕ್ಮಿಣಿ ಮಂದಿರದಲ್ಲಿ ಏಕತಾ ಪೌಂಡೇಶನ್ ಗೋಕಾಕ ಇವರ ನೇತೃತ್ವದಲ್ಲಿ ಉಚಿತ ಕಣ್ಣಿನ ಶಿಬಿರ ನಡೆಯಿತು. ಶಾಸಕರಾದ   ರಮೇಶ್ ಲ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ರೋಗಿ ಕಣ್ಣುಗಳ ತಪಾಸಣೆ ನಡೆಸಲಾಯಿತು.ಅಗತ್ಯ ಇದ್ದವರಿಗೆ ಕನ್ನಡಕ ವಿತರಣೆ, ಹಾಗೂ ಶಸ್ತ್ರಚಿಕಿತ್ಸೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಣ್ಣು ಮನುಷ್ಯನ ಶ್ರೇಷ್ಠವಾದ ಒಂದು ಅಂಗ ಕಣ್ಣು ಇಲ್ಲದಿದ್ದರೆ ಮನುಷ್ಯನಿಗೆ ಜಗತ್ತೇ ಶೂನ್ಯ, ಏಕ್ತಾ ಫೌಂಡೇಶನ್ ಗೋಕಾಕದವರು ಹಾಕಿಕೊಂಡ ಈ ಕಾರ್ಯಕ್ರಮ ಘಟಪ್ರಭಾ  ಸುತ್ತಮುತ್ತಲಿನ ಭಾಗದ ಜನರು ಇದರ ಸದುಪಯೋಗವನ್ನು ಪಡೆಸಿಕೊಳ್ಳಬೇಕೆಂದು ಕರವೇ ರಾಜ್ಯಾಧ್ಯಕ್ಷರಾದ ಡಾ. ಕೆಂಪಣ್ಣ ಚೌಕಶಿ ಹೇಳಿದರು, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ವಿ ಮಹಾಜನ, ಮಾತನಾಡಿ ಜನರಿಗೆ ಉಪಯೋಗ ಆಗುವ ಕಾರ್ಯ ಮಾಡುತ್ತಿರುವ ಏಕತಾ ಫೌಂಡೇಷನ್ ಸದಸ್ಯರಿಗೆ ಸಮಸ್ತ ಘಟಪ್ರಭಾದ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದರು, ಈ ಸಂದರ್ಭದಲ್ಲಿ ಯುವ ಮುಖಂಡರುಗಳಾದ ಮಾರುತಿ ಹುಕ್ಕೇರಿ, ಶಿವಪುತ್ರ ಕೊಗನೂರ, ಕುಮಾರ್ ಹುಕ್ಕೇರಿ, ಮಲ್ಲಿಕಾರ್ಜುನ ತುಕ್ಕಾನಟ್ಟಿ, ಕನ್ನಡ ಸೇನೆ ಗೋಕಾಕ  ತಾಲೂಕು ಅಧ್ಯಕ್ಷ ಅಪ್ಪಾಸಾಬ ಮುಲ್ಲಾ, ಕರವೇ ಸಂತೋಷ ಅರಳಿಕಟ್ಟಿ ಬಣದ ರಾಜ್ಯಾಧ್ಯಕ್ಷ ಪ್ರಶಾಂತ್ ಅರಳಿಕಟ್ಟಿ, ಕಾಡಪ್ಪಾ ಕರೋಶಿ, ವೀರಭದ್ರ ಕಾಡದವರ, ಶಶಿ ಚೌಕಶಿ, ಆನಂದ್ ಬನ್ನನವರ್, ಹಾಲಪ್ಪ ನಿಡಸೋಶಿ ,ಅಶೋಕ್ ಚಚಡಿ, ರಮೇಶ್ ಕರೋಶಿ, ಪ್ರಕಾಶ್ ಬಡಕುಂದ್ರಿ, ಮಾಂತೇಶ್ ಸಂಕೇಶ್ವರಿ, ಶಂಕರ್ ಬಡಕುಂದ್ರಿ, ಅಜ್ಜಪ್ಪ ಕುಡ್ಡಗೋಳ. ಏಕ್ತಾ ಫೌಂಡೇಶನ್ ಗೋಕಾಕ್ ಅಧ್ಯಕ್ಷರಾದ ಅಜರ್ ಮುಜಾವರ್, ಅಬ್ದುಲ್ ಪಠಾಣ, ಸದ್ದಾಮ್ ಸೌದಾಗರ್, ಬಾಳು ಲಂಕೆನ್ನವರ್, ಅಜೀಮ್ ಮುಜಾವರ್, ಶಾಹಿದ್ ಮುಜಾವರ್, ಹಾಗೂ ವೈದ್ಯರುಗಳು, ಮುಂತಾದವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article