ಬಳ್ಳಾರಿ :06.. ಭಗೀರಥ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಆಡಳಿತ ಮಂಡಳಿಯ ತೀರ್ಮಾನದಂತೆ ಮ್ಯಾನೇಜಿಂಗ್ ಟ್ರಸ್ಟಿ ಪಿ.ಶಿವಶಂಕರ್‌ರವರ ಅಧ್ಯಕ್ಷತೆಯಲ್ಲಿ ನಾಳೆ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಮೈಸೂರು ಸರಸ್ವತಿಪುರಂನ ಉಪ್ಪಾರ ವಿದ್ಯಾರ್ಥಿನಿಲಯದಲ್ಲಿ ಟ್ರಸ್ಟಿನ ಆಡಳಿತ ಮಂಡಳಿ ಸಭೆ ಮತ್ತು ಸಮಾಜದ ಬಂಧುಗಳೊಂದಿಗೆ ‘ಚಿಂತನ-ಮಂಥನ ಸಭೆ’
ಮತ್ತು ಮಧ್ಯಾಹ್ನ ಎರಡು ಗಂಟೆಗೆ ಟ್ರಸ್ಟಿನ ಸರ್ವಸದಸ್ಯರ ಸಭೆ ಅಯೋಚಿಸಲಾಗಿದೆ.
ಎಲ್ಲಾ ಟ್ರಸ್ಟಿಗಳು, ದಾನಿಗಳು, ಉಪ್ಪಾರ ಸಮಾಜದ ಮುಖಂಡರುಗಳು ಮತ್ತು ಮೈಸೂರು ಕಂದಾಯ ವಿಭಾಗದ ವ್ಯಾಪ್ತಿಗೆ ಒಳಪಡುವ ಮೈಸೂರು , ಚಾಮರಾಜನಗರ , ಮಂಡ್ಯ , ಕೊಡಗು , ಹಾಸನ, ಚಿಕ್ಕಮಗಳೂರು , ದಕ್ಷಿಣ ಕನ್ನಡ , ಉಡುಪಿ , ರಾಮನಗರ ಜಿಲ್ಲೆ ಹಾಗೂ ರಾಜ್ಯದ ಇತರೆ ಎಲ್ಲಾ ಜಿಲ್ಲೆಗಳ ಮತ್ತು ರಾಜ್ಯದ ಎಲ್ಲಾ ಉಪ್ಪಾರ ಸಮಾಜದ ಗಣ್ಯರು, ಜನಪ್ರತಿನಿಧಿಗಳು, ಉದ್ಯಮಿಗಳು, ಶಿಕ್ಷಣತಜ್ಞರು, ಗುತ್ತಿಗೆದಾರರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಉಪ್ಪಾರ ಸಂಘಟನೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಮಟ್ಟದ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಯುವ ಮುಖಂಡರು, ಮಹಿಳಾ ಮುಖಂಡರು, ಸರ್ಕಾರಿ, ಖಾಸಗಿ ವಲಯದ ನೌಕರರು, ನಿವೃತ್ತ ನೌಕರರು, ವೃತ್ತಿಪರರು, ದಯವಿಟ್ಟು ಈ ‘ಚಿಂತನ-ಮಂಥನ ಸಭೆ’ಗೆ ತಮ್ಮ ಅಮೂಲ್ಯವಾದ ಸಲಹೆ ಸೂಚನೆಗಳೊಂದಿಗೆ ಭಾಗವಹಿಸಬೇಕೆಂದು ಬಳ್ಳಾರಿ ಜಿಲ್ಲೆ ಯ ಉಪ್ಪಾರ ಸಮಾಜದ ಮುಖಂಡರಾದ ಪುರುಷೋತ್ತಮ್ ಮತ್ತು ಗೋವಿಂದ ಇವರುಗಳು ಪತ್ರಿಕಾ ಪ್ರಕಟಣೆಯ ಮೂಲಕ ಕೋರಿದ್ದಾರೆ.