ಬೆಂಗಳೂರು, ಸೆಪ್ಟೆಂಬರ್ 6: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬಿಎಂಟಿಸಿ ಬಸ್ಗಳಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಪ್ರಮುಖ ಕಾರಣ ಬಿಎಂಟಿಸಿಯ ಹಳೆಯ ಡಕೋಟಾ ಬಸ್ಸುಗಳು ಎಂಬ ಆರೋಪವಿದೆ. ಕಳೆದ ಒಂದು ವರ್ಷದಲ್ಲಿ ಬಿಎಂಟಿಸಿ ಬಸ್ ಅಪಘಾತಗಳಲ್ಲಿ 44 ಜನ ಪ್ರಾಣ ಕಳೆದುಕೊಂಡಿದ್ದರೆ, ಕಳೆದ ಒಂದು ತಿಂಗಳಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ. ಬಿಎಂಟಿಸಿ ಸಾಕಷ್ಟು ಬಸ್ಸುಗಳಲ್ಲಿ ಹಾರ್ನ್ ಇಲ್ಲ, ಇಂಜಿನ್ ಸಮಸ್ಯೆ, ಗೇರ್ ಬಾಕ್ಸ್ ಬ್ರೇಕ್, ಕ್ಲಚ್ ಪ್ಯಾಡ್, ಹೀಗೆ ನಾನಾ ರೀತಿಯ ಸಮಸ್ಯೆ ಗಳಿದ್ದು, ಹೊಸ ಬಸ್ಗಳಿಂದ ಅಪಘಾತಗಳ ಸಂಖ್ಯೆ ಕಡಿಮೆ ಆಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
4100 ಸಾಮಾನ್ಯ ಎಲೆಕ್ಟ್ರಿಕ್ ಬಸ್, 400 ಎಸಿ ಎಲೆಕ್ಟ್ರಿಕ್ ಬಸ್ ಬರಲಿದ್ದು ಈಗಾಗಲೇ ಬಿಎಂಟಿಸಿ ನಿಗಮದ 15 ರಿಂದ 20 ಡಿಪೋ ಗಳಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬಿಎಂಟಿಸಿಯಲ್ಲಿ ಸದ್ಯ 1200 ಎಲೆಕ್ಟ್ರಿಕ್ ಬಸ್ಗಳಿವೆ. 4500 ಹೊಸ ಬಸ್ಗಳಿಂದ ಬಿಎಂಟಿಸಿಯಲ್ಲಿ ಒಟ್ಟು 5700 ಎಲೆಕ್ಟ್ರಿಕ್ಗಳಾಗಲಿವೆ. ಗ್ರಾಸ್ ಕಾಂಟ್ರಾಕ್ಟ್ ಅಡಿಯಲ್ಲಿ ಈ ಬಸ್ಸುಗಳು ನಗರದಲ್ಲಿ ಸಂಚಾರ ಮಾಡಲಿದೆ. ಈ ಬಸ್ಸಿಗೆ ಡ್ರೈವರ್ ಬಸ್ ಕಂಪನಿ ಅವರಾದರೆ, ಕಂಡಕ್ಟರ್ ಬಿಎಂಟಿಸಿಯಿಂದ ಇರುತ್ತಾರೆ.