ತಲೆಬುರುಡೆ ಕೇಸ್‌ಗೆ ನಯಾ ಟ್ವಿಸ್ಟ್‌; ಕೇರಳದ ಕಮ್ಯೂನಿಷ್ಟ್‌ ಎಮ್‌ಪಿ ಸಂತೋಷಕುಮಾರ್‌ಗೆ ಸಂಕಷ್ಟ

Ravi Talawar
ತಲೆಬುರುಡೆ ಕೇಸ್‌ಗೆ ನಯಾ ಟ್ವಿಸ್ಟ್‌; ಕೇರಳದ ಕಮ್ಯೂನಿಷ್ಟ್‌ ಎಮ್‌ಪಿ ಸಂತೋಷಕುಮಾರ್‌ಗೆ ಸಂಕಷ್ಟ
WhatsApp Group Join Now
Telegram Group Join Now

ಮಂಗಳೂರು, ಸೆಪ್ಟೆಂಬರ್ 6: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೆ ಎಂದು ಮಾಸ್ಕ್​ಮ್ಯಾನ್ ಚಿನ್ನಯ್ಯ ತಂದಿದ್ದ ತಲೆಬುರುಡೆ ಪ್ರಕರಣದಲ್ಲಿ ಇದೀಗ ಕೇರಳದ ಕಮ್ಯೂನಿಸ್ಟ್  ಸಂಸದ ಸಂತೋಷ್ ಕುಮಾರ್​ಗೆ ಸಂಕಷ್ಟ ಎದುರಾಗಿದೆ. ತಲೆಬುರುಡೆಯನ್ನು ತೆಗೆದುಕೊಂಡು ಆರೋಪಿ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ ಕೇರಳದ ಸಂಸದನ ಬಳಿ ತೆರಳಿ ಅವರ ಮುಂದೆ ವಿಚಾರ ಪ್ರಸ್ತಾಪಿಸಿತ್ತು ಎಂಬ ಸ್ಫೋಟಕ ಮಾಹಿತಿ ಎಸ್​​ಐಟಿ ತನಿಖೆ ವೇಳೆ ತಿಳಿದು ಬಂದಿರುವುದಾಗಿ ಮೂಲಗಳು ತಿಳಿಸಿವೆ. ಇದರೊಂದಿಗೆ ಪ್ರಕರಣಕ್ಕೆ ಇದೀಗ ಮತ್ತೊಂದು ತಿರುವು ದೊರೆತಂತಾಗಿದೆ.

ಏತನ್ಮಧ್ಯೆ, ತಲೆಬುರುಡೆಯನ್ನು ಕೊಟ್ಟಿದ್ದು ಜಯಂತ್. ತಾನು ಅದನ್ನು ಧರ್ಮಸ್ಥಳದಿಂದ ತಂದೇ ಇಲ್ಲವೆಂದು ಚೆನ್ನಯ್ಯ ಎಸ್​ಐಟಿ ಮುಂದೆ ಹೇಳಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಜಯಂತ್ ಮಾತ್ರ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್ ಕೊಟ್ಟಿದ್ದು ಎಂದಿದ್ದಾರೆ. ಮಟ್ಟಣನವರ್ ನಿರಾಕರಿಸಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ಕೇರಳ ಸಂಸದನ ಹೆಸರು ಪ್ರಕರಣದಲ್ಲಿ ತಳಕುಹಾಕಿಕೊಂಡಿದೆ.

 

WhatsApp Group Join Now
Telegram Group Join Now
Share This Article