ಹಿಂದೂ ಮುಸ್ಲಿಂ ಭ್ರಾತೃತ್ವ ಸಾಕ್ಷಿಯಾದ ಧಾರವಾಡ ಗಣೇಶೋತ್ಸವ

Ravi Talawar
  ಹಿಂದೂ ಮುಸ್ಲಿಂ ಭ್ರಾತೃತ್ವ ಸಾಕ್ಷಿಯಾದ ಧಾರವಾಡ ಗಣೇಶೋತ್ಸವ
WhatsApp Group Join Now
Telegram Group Join Now
ಧಾರವಾಡ: ನಗರದಲ್ಲಿ ಹಿಂದೂ ಮುಸ್ಲಿಂ ಭಾಂದವರು ಒಟ್ಟಾಗಿ ಸಾರ್ವಜನಿಕ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನಾ ಮೆರವಣಿಗೆ ನಡೆಸುವ ಮೂಲಕ ಗುರುವಾರ ಏಕದಂತನಿಗೆ ವಿದಾಯ ಹೇಳಿದರು.
ಸಾರ್ವಜನಿಕ ವಿಗ್ರಹಗಳ 9ನೇ ದಿನದ ವಿಸರ್ಜನಾ ಕಾರ್ಯಕ್ರಮ ನಗರದಲ್ಲಿ ಅದ್ಧೂರಿ ಮೆರವಣಿಗೆ ಮೂಲಕ ನಡೆಯಿತು. ಡಿಜೆ ಹಾಡುಗಳಿಗೆ ಯುವಕರು ಸಕತ್ ಸ್ಟೆಪ್ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮಾಳಾಪುರದಲ್ಲಿ ಮುಸ್ಲಿಂರೂ ಗಣೇಶೋತ್ಸವ ಮೆರವಣಿಗೆ ಜತೆಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಈ ಭ್ರಾತೃತ್ವದ ಹಬ್ಬಕ್ಕೆ ಪೊಲೀಸರು ಸಾಕ್ಷಿಯಾದರು.
ಧಾರವಾಡದ ಮಾಳಾಪುರ, ಮದಿಹಾಳ, ಸಪ್ತಾಪುರ,ನೆಹರೂ ನಗರ, ಶ್ರೀನಗರ, ಜಯನಗರ, ಕಮಲಾಪುರ, ಬೂಸ್ ಗಲ್ಲಿ, ಕುರುಬರ ಓಣಿ, ಮನಕಿಲ್ಲಾ, ಮದಾರಮಡ್ಡಿ, ಮಾದರ ಓಣಿ, ಕೆಲಗೇರಿ ಸೇರಿದಂತೆ ವಿವಿಧ ಕಡೆಗಳ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ನಗರದೆಲ್ಲೆಡೆ ಗಣಪತಿ ಮಂಟಪದಲ್ಲಿ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ಕಾರ್ಯಗಳು ನಡೆದವು. ಬಿಗಿ ಪೊಲೀಸ್ ಬಂದೋ ಕಲ್ಪಿಸಲಾಗಿತ್ತು.
WhatsApp Group Join Now
Telegram Group Join Now
Share This Article