ಧಾರವಾಡ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಸತ್ತೂರು ಧಾರವಾಡದಲ್ಲಿ ಶಿಕ್ಷಕರ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.ಮಕ್ಕಳು ಎಲ್ಲ ಶಿಕ್ಷಕರಿಗೆ ತಲೆಯ ಮೇಲೆ ಹೂವಿನ ಮಳೆಯ ಮೂಲಕ ಸ್ವಾಗತ ಸಲ್ಲಿಸಿದರು. ನಂತರ ನಾಟಕ, ನೃತ್ಯ ಹಾಗೂ ಹಾಡುಗಳ ಮೂಲಕ ಶಿಕ್ಷಕರಿಗೆ ಮನರಂಜನೆ ನೀಡಿದರು.
ಶಿಕ್ಷಕರಿಗಾಗಿ ವಿವಿಧ ಆಟಗಳನ್ನು ಆಯೋಜಿಸಲಾಯಿತು.ಈ ಸಂದರ್ಭದಲ್ಲಿ ಗಣಿತದಲ್ಲಿ ಪರಿಣತಿ ಹೊಂದಿರುವ ಶ್ರೀ ನಾಗೇಶ್ ಶಾನ್ಭಾಗ್ ಅವರು ಅತಿಥಿಯಾಗಿ ಬಂದು, ತಮ್ಮ ಮಾತಿನಲ್ಲಿಃ “ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ” ಎಂದು ಹೃದಯಸ್ಪರ್ಶಿ ಸಂದೇಶ ನೀಡಿದರು.
ಶಾಲೆಯ ಕರೆಸ್ಪಾಂಡೆಂಟ್ ಶ್ರೀ ಗುರುರಾಜ್ ಅಗಡಿ ಅವರು ಸಹ ಶಿಕ್ಷಕ ವೃತ್ತಿಯ ಮಹತ್ವವನ್ನು ವಿವರಿಸಿ:“ಶಿಕ್ಷಕನು ಅನೇಕ ಜ್ಞಾನಗಳನ್ನು ಹೊಂದಿರುವವನು, ಸಮಾಜಕ್ಕೆ ದಾರಿ ತೋರಿಸುವವನು” ಎಂದು ತಿಳಿಸಿ ಎಲ್ಲಾ ಶಿಕ್ಷಕರಿಗೂ ದಿನಾಚರಣೆಯ ಶುಭಾಶಯಗಳನ್ನು ಕೋರಿದರು. ಈ ಸಂದರ್ಭದಲ್ಲಿ ಪ್ರಧಾನ ಆಚಾರ್ಯ ಶ್ರೀರಾಮಕೃಷ್ಣ ಆರ್ ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.