ಹುಬ್ಬಳ್ಳಿ : ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ‘ಭಾರತ್ ಗೌರವ್’ ರೈಲು ಸಂಚಾರವನ್ನು ಮೊತ್ತಮೊದಲಿಗೆ ಆರಂಭಿಸಿದ ‘ಸೌತ್ ಸ್ಟಾರ್ ರೈಲು’ ಕಂಪನಿಯು ನವ ಬೃಂದಾವನ ಹಾಗೂ ಶ್ರೀಶೈಲ ಸೇರಿದಂತೆ 8 ಧರ್ಮಕ್ಷೇತ್ರಗಳಿಗೆ ‘ಶಿವ ಸಾಯಿ ಯಾತ್ರೆ’ ಎಂಬ ಹೊಸ ಪ್ರವಾಸ ಕಾರ್ಯಕ್ರಮ ರೂಪಿಸಿದ್ದು, ಅಕ್ಟೋಬರ್ 2ರಿಂದ ಈ ರೈಲು ಸಂಚಾರ ಆರಂಭಿಸಿದೆ.
ಪ್ರವಾಸಿಗರು ರೈಲಿನಲ್ಲಿ ತೆರಳಿ ನವ ಬೃಂದಾವನ, ಮಂತ್ರಾಲಯ, ಪಂಡರಿಪುರ, ಶಿರಡಿ, ತ್ರಯಂಬಕೇಶ್ವರ, ಭೀಮಾಶಂಕರ, ಗುಷ್ನೇಶ್ವರ ಹಾಗೂ ಶ್ರೀಶೈಲಂ ಧರ್ಮಕ್ಷೇತ್ರಗಳ ದರ್ಶನ ಮಾಡಬಹುದು. ಒಟ್ಟು 11 ದಿನಗಳ ಈ ಪ್ರವಾಸವು ಎಲ್ಲೋರಾ ಗುಹೆಗಳ ಭೇಟಿಯನ್ನೂ ಒಳಗೊಂಡಿದೆ.
ರೈಲು ಬಂಗಾರಪೇಟೆಯಿಂದ ಹೊರಡಲಿದ್ದು, ಪ್ರವಾಸಿಗರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಬೆಂಗಳೂರಿನ ವೈಟ್ ಫೀಲ್ಡ್, ಯಲಹಂಕ, ಧರ್ಮಾವರಂ, ಅನಂತಪುರ, ಬಳ್ಳಾರಿ, ಹೊಸಪೇಟೆಯಲ್ಲೂ ರೈಲು ಹತ್ತಬಹುದು. ಆನ್ ಬೋರ್ಡ್ ಘೋಷಣಾ ವ್ಯವಸ್ಥೆ, ನಿಯೋಜಿತ ಕೋಚ್ ಭದ್ರತಾ ಸಿಬ್ಬಂದಿ, ಟೂರ್ ಮ್ಯಾನೇಜರ್ ಗಳು, ಪ್ರಯಾಣ ವಿಮೆ, ಹೋಟೆಲ್ ವ್ಯವಸ್ಥೆ, ಸೈಟ್ ಸೀಯಿಂಗ್, ಅನಿಯಮಿತ ದಕ್ಷಿಣ ಭಾರತದ ಊಟ ಇತ್ಯಾದಿ ಸೌಲಭ್ಯಗಳನ್ನು ಇದು ಒಳಗೊಂಡಿರುತ್ತದೆ. ಈ ಪ್ರವಾಸಕ್ಕೆ ಎಲ್ ಟಿ ಸಿ/ಎಲ್ ಎಫ್ ಸಿ ಅನ್ವಯವಾಗಲಿದ್ದು, ಭಾರತೀಯ ರೈಲ್ವೆಯ ಶೇಕಡಾ 33ರಷ್ಟು ಸಹಾಯಧನ ಲಭ್ಯವಾಗಲಿದೆ ಎಂದು ವಿಘ್ನೇಶ್ ಅವರು ವಿವರಿಸಿದ್ದಾರೆ.
ದರಗಳು ಇಂತಿವೆ: ಸ್ಲೀಪರ್ (ರೂ 27,700), 3ಎಸಿ (ರೂ 37,000), 2ಎಸಿ ಡೀಲಕ್ಸ್ (ರೂ 43,000), ಎಸಿ ಲಕ್ಷುರಿ (ರೂ 47,900). ಆಸಕ್ತರು 93550 21516 ಸಂಪರ್ಕಿಸಿ ಅಥವಾ ಆನ್ ಲೈನ್ ನಲ್ಲಿ www.tourtimes.in ಮೂಲಕ ಬುಕಿಂಗ್ ಮಾಡಬಹುದಾಗಿದೆ.
ದೇಶದ ಮುಂಚೂಣಿ ಪ್ರವಾಸಿ ರೈಲು ನಿರ್ವಾಹಕ ಸಂಸ್ಥೆಯಾದ ಟೂರ್ ಟೈಮ್ಸ್ ಸಹಭಾಗಿತ್ವದಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ‘ಸೌತ್ ಸ್ಟಾರ್’ ನ ಪ್ರಾಡಕ್ಟ್ ಡೈರೆಕ್ಟರ್ ವಿಘ್ನೇಶ್ ಜಿ. (M: 9500078284 ) ತಿಳಿಸಿದ್ದಾರೆ.