ವ್ಯಸನ ಮುಕ್ತ ಸಮಾಜ ನಿರ್ಮಾಣದ ಅವಶ್ಯಕತೆ ಇದೆ : ಡಾ. ಸ್ಪೂರ್ತಿ ಮಾಸ್ತಿಹೊಳಿ.

Pratibha Boi
ವ್ಯಸನ ಮುಕ್ತ ಸಮಾಜ ನಿರ್ಮಾಣದ ಅವಶ್ಯಕತೆ ಇದೆ : ಡಾ. ಸ್ಪೂರ್ತಿ ಮಾಸ್ತಿಹೊಳಿ.
WhatsApp Group Join Now
Telegram Group Join Now

ಬೆಳಗಾವಿ: ವಿದ್ಯಾರ್ಥಿಗಳು ಡ್ರಗ್‌ ವ್ಯಸನಿಗಳಾಗುತ್ತಿರುವದು ವಿಷಾದದ ಸಂಗತಿ. ಇತ್ತಿಚಿನ ಸರ್ವೇ ಪ್ರಕಾರ ಜಾಗತಿಕ ಮಟ್ಟದಲ್ಲಿ  ೧.೯ ಬಿಲಿಯನ್ ಡ್ರಗ್ ವ್ಯಸನಿಗಳಿದ್ದಾರೆ. ಅವರಲ್ಲಿ ೫೩ಮಿಲಿಯನ್ ಡ್ರಗ್ ವ್ಯಸನಿಗಳು ಔಷಧೀಯ ಗುಳಿಗೆಗಳ ದುರಪಯೋಗ ಮಾಡಿಕೊಳ್ಳುತ್ತಿದ್ದರೆ,ಅದರಲ್ಲಿ ೧೦ ಮಿಲಿಯನ್ ವ್ಯಸನಿಗಳು ವ್ಯಸನ ಮುಕ್ತ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಯುವಕರನ್ನು ಡ್ರಗ್  ವ್ಯಸನದಿಂದ ಮುಕ್ತಗೊಳಿಸಬೇಕಾದ ಅವಶ್ಯಕತೆ ಇದೆ ಎಂದು ಡಾ. ಸ್ಫೂರ್ತಿ ಮಾಸ್ತಿಹೊಳಿ ಹೇಳಿದರು.

ರಾಜಾ ಲಖನಗೌಡ ವಿಜ್ಞಾನ ಮಹಾವಿದ್ಯಾಲಯದ ಸಿ.ವಿ.ರಾಮನ್ ಸಭಾಂಗಣದಲ್ಲಿ  ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ಅವರು ಆಯೋಜಿಸಿದ  “ವ್ಯಸನಮುಕ್ತ ಜಾಗೃತಿ ಅಭಿಯಾನ” ಕಾರ್ಯಕ್ರಮದಲ್ಲಿ “ಡ್ರಗ್ ವ್ಯಸನ ಮಾರಕ” ಎಂಬ ವಿಷಯದ ಕುರಿತು ಡಾ. ಸ್ಪೂರ್ತಿ ಮಾಸ್ತಿಹೊಳಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇದರಲ್ಲಿ ಪಾಲಕರ ಪಾತ್ರ ಮುಖ್ಯ. ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಸಮಾಜಪರ ಚಿಂತನೆಗಳ ಸೇವಾ ಸಂಸ್ಥೆಗಳು ಮೆಲಿಂದ ಮೇಲೆ ಕಾರ್ಯಾಗಾರವನ್ನು ಆಯೋಜನೆ ಮಾಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮಾಡಿಸಬೇಕು.ನಮ್ಮ ನಾಡಿನ ಮುಂದಿನ ಪ್ರಜೆ ಗಳಾದ ಇಂದಿನ ಯುವ ಪೀಳಿಗೆ ವ್ಯಸನಮುಕ್ತ ಪ್ರಜೆಗಳಾಗಿ ಸದೃಢ ದೇಶದ ನಿರ್ಮಾಣದ ಹೊಣೆ ತಮ್ಮ ಮೇಲಿದೆ ಅಂತ ಹೇಳಿದರು.
      ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ರೊ.ಉದಯಸಿಂಗ ರಜಪೂತ ಅವರು ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಭೋದನೆ ಮಾಡಿದರು.ವೇದಿಕೆಯ ಮೇಲೆ ಇವೆಂಟ್ ಚೇರ್ಮನ್ ರೊ.ಗಿರೀಶ ಕತ್ತಿಶೆಟ್ಟಿ.ರೊ.ನಂದನ ಬಾಗಿ ಇದ್ದರು ವಿದ್ಯಾಲಯ ದಪ್ರಚಾರ್ಯರು ಸ್ವಾಗತಿಸಿದರು ವಿನಯಕುಮಾರವರು ವಂದನಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಡಾ.ವಿಜಯ ಪೂಜಾರ,ರೊ.ಅಶೋಕ ಬದಾಮಿ,ರೊ.ರಾಜೀವ ದೇಶಪಾಂಡೆ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article