ಅಥಣಿ: ಶಿಕ್ಷಕರು ಸಮಾಜದ ದೀಪಸ್ತಂಭ ಇದ್ದಂತೆ, ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ಬೆಳಕಿನಿಂದ ತುಂಬುವ ಮಾರ್ಗದರ್ಶಕರು. ಶಿಕ್ಷಕರು ಕೇವಲ ಪಾಠಗಳನ್ನು ಕಲಿಸುವವರಲ್ಲ, ಬದಲಿಗೆ ಒಳ್ಳೆಯ ಮಾನವೀಯ ಗುಣಗಳನ್ನು ಬೆಳೆಸುವವರು. ಅವರ ಮಾರ್ಗದರ್ಶನವಿಲ್ಲದೆ ಜ್ಞಾನ ಸಂಪೂರ್ಣವಾಗದು, ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸುವದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಪಟ್ಟಣದ ಗಚ್ಚಿನ ಮಠದ ಸಭಾ ಭವನದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ, ತಾಲೂಕು ಆಡಳಿತ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಥಣಿ ಇವರ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭವನ್ನು ಶಾಸಕ ಲಕ್ಷö್ಮಣ ಸವದಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಶಾಸಕ ಲಕ್ಷ÷್ಣ ಸವದಿ ಅವರು ಸರಕಾರದಿಂದ ಅಥಣಿ ತಾಲುಕು ಶಿಕ್ಷಕರ ಬಹು ದಿನಗಳ ಬೇಡಿಕೆ “ಗುರುಭವನ” ನಿರ್ಮಾಣ ಕಾಮಗಾರಿಗೆ ಸರಕಾರದಿಂದ 50 ಲಕ್ಷ ರೂ.ಗಳ ಮಂಜೂರಾತಿ ನೀಡಲಾಗಿದ್ದು ತಕ್ಷಣವೇ ಕಾಮಗಾರಿ ಪ್ರಾರಂಭಿಸುವAತೆ ಸೂಚಿಸಿದರು. ಅಲ್ಲದೆ ಶಿಕ್ಷಕರನ್ನು ಗೌರವಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಗತ್ತಿನಲ್ಲಿ ಶಿಕ್ಷಕರಿಗೆ ಸಿಗುವ ಗೌರವ ಯಾರಿಗೂ ಸಿಗುವದಿಲ್ಲ, ಸ್ವಾಸ್ತö್ಯ ಸಮಾಜ ನಿರ್ಮಾಣ ಮಾಡುವ ಶಿಲ್ಪಕಾರರು ಶಿಕ್ಷಕರು. ಇಂದಿನ ಕಾಲಕ್ಕೆ ತಕ್ಕಂತೆ ಅಪ್ಡೇಟ್ ಆಗುವ ಮೂಲಕ ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಸಂಸ್ಕಾರಗಳನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯಪ್ರವರ್ತಕರಾಗಬೇಕು ಎಂದು ಮನವಿ ಮಾಡಿದರು
ಈ ವೇಳೆ ಉಪನ್ಯಾಸಕರಾಗಿ ಆಗಮಿಸಿದ ಡಾ|| ವಿರೇಶ ಪಾಟೀಲ ಸಮಾರಂಭದಲ್ಲಿ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಿದೆ. ಶಿಕ್ಷಕರು ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಬೆಳೆಸಬೇಕಿದೆ. ಅಲ್ಲದೆ ಮಕ್ಕಳೊಂದಿಗೆ ಮಕ್ಕಳಾಗಿ, ಸ್ನೇಹಿತನಾಗಿ, ತಂದೆಯಾಗಿ ಅವರೊಂದಿಗೆ ಬೆರೆತು ಅವರಲ್ಲಿನ ಪ್ರತಿಭೆಗಳಿಗೆ ಅನುಗುಣವಾಗಿ ಭೋಧನೆ ಮಾಡಿದ್ದೇ ಆದಲ್ಲಿ ಅವರನ್ನು ಭವ್ಯ ಭಾರತದ ಉತ್ತಮ ಪ್ರಜೆಯನ್ನಾಗಿ ಸೃಷ್ಠಿ ಮಾಡಬಹುದಾಗಿದೆ. ಶಿಕ್ಷಕರು ನೀಡುವ ಬೋಧನೆ ನಮ್ಮ ಭವಿಷ್ಯವನ್ನು ನಿರ್ಮಿಸುವ ಬುನಾದಿ. ಆದ್ದರಿಂದಲೇ ಗುರುಗಳ ಗೌರವ ನಮ್ಮೆಲ್ಲರ ಕರ್ತವ್ಯ. ಸಮಾಜದ ಪ್ರಗತಿ ಶಿಕ್ಷಕರ ಶ್ರಮದಿಂದಲೇ ಸಾಧ್ಯವಾಗುತ್ತದೆ ಎಂದು ಹೇಳಿದರು
ಸಾನಿದ್ಯ ವಹಿಸಿದ್ದ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಕತ್ತಲು ಬದುಕಿನಿಂದ ಬೆಳಕಿನೇಡೆಗೆ ಸಾಗಲು ಶಿಕ್ಷಕರ ಮಾರ್ಗದರ್ಶನ ಅತ್ಯಾವಶ್ಯವಾಗಿದೆ. ಶಿಕ್ಷಕರ ದಿನಾಚರಣೆ ನಮ್ಮೆಲ್ಲರಿಗೂ ಶಿಕ್ಷಕರ ತ್ಯಾಗ, ಪರಿಶ್ರಮ ಹಾಗೂ ಪ್ರೇರಣೆಯನ್ನು ಸ್ಮರಿಸುವ ದಿನವಾಗಿದೆ. ಸಮಾಜದಲ್ಲಿ ಒಳ್ಳೆಯ ನಾಗರಿಕರನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅನನ್ಯ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯ ಶಿಕ್ಷಕರನ್ನು ಸದಾ ಗೌರವಿಸುವುದಾಗಿದೆ ಎಂದು ಹೇಳಿದರು
50ಕ್ಕೂ ಹೆಚ್ಚು ನಿವೃತ್ತಿ ಹೊಂದಿದ ಶಿಕ್ಷಕರನ್ನು ಸತ್ಕರಿಸಿ ಗೌರವಸಿದರು
ಈ ವೇಳೆ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ,ಉಪನ್ಯಾಸಕ ಡಾ|| ವಿರೇಶ ಪಾಟೀಳ, ತಹಶೀಲ್ದಾರ ಸಿದ್ರಾಯ ಭೋಸಗಿ, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪೂರ, ಕ್ಷೇತ್ರಶಿಕ್ಷಣಾಧಿಕಾರಿ ಎಮ್ ಆರ್ ಮುಂಜೆ, ಶಿಕ್ಷಕರಾದ ಜಿ ಎ ಖೋತ, ಜಿ ಎಮ್ ಹಿರೇಮಠ, ವಿಶ್ವನಾಥ ಸೂರ್ಯವಂಶಿ, ಪಿ ಜಿ ಮಾಳಿ, ಎಮ್ ಬಿ ಅಸ್ಕಿ, ವಿಶ್ವಕುಮಾರ ಮಾಳಿ, ಬಿ ಎಲ್ ಪೂಜಾರಿ, ಎಮ್ ಎನ್ ಹಿರೇಮಠ, ಎಮ್ ಹೆಚ್ ಸವನೂರ, ಜಿ ಎ ಕೋಷ್ಟಿ, ಶೋಭಾ ಕುಲಕರ್ಣಿ, ಅರ್ಚನಾ ಅಥಣಿ, ರೇಣುಕಾ ಬಡಕಂಬಿ, ಕೆ ಟಿ ಮಾಳಿ,ಶ್ರೀಶೈಲ ಜಂಬಗಿ,ಸಂಗಮೇಶ ಹಚ್ಚಡದ, ಸೇರಿದಂತೆ 5 ನೂರಕ್ಕೂ ಹೆಚ್ಚು ಶಿಕ್ಷಕ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಶಿಕ್ಷಕರು ವಿದ್ಯಾರ್ಥಿಗಳ ಜೀವನವನ್ನು ಬೆಳಕಿನಿಂದ ತುಂಬುವ ಮಾರ್ಗದರ್ಶಕರು: ಶಾಸಕ ಲಕ್ಷö್ಮಣ ಸವದಿ
