ನೇಸರಗಿ: ಶ್ರೀ ಗಣೇಶ ಚತುರ್ಥಿ ಪ್ರಯುಕ್ತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಮುಂದೆ ಶ್ರೀ ಬಾಲ ಗಜಾನನ ಯುವಕ ಸಂಘದ ಸದಸ್ಯರ ನೇತೃತ್ವದಲ್ಲಿ ಕಳೆದ 64 ವರ್ಷಗಳಿಂದ ಪ್ರತಿಷ್ಠಾಪನೆ ಮಾಡುತ್ತಿರುವ ಶ್ರೀ ಗಣೇಶ ಹಬ್ಬದ ಪ್ರಯುಕ್ತ ಇಂದು ಶುಕ್ರವಾರ ದಿ. 05-09-2025 ರಂದು 120 ಕೆ ಜಿ ಗೋದಿ ಹುಗ್ಗಿ ಹಾಗೂ 2 ಕ್ವಿಂಟಲ ಅಣ್ಣಾ , ಮದನೇಕಾಯಿ, ಸಾಂಬಾರ ಮಹಾಪ್ರಸಾದ ತಯಾರಿಕೆಯು ಊರಿನ ಹಿರಿಯರಿಂದ, ಬಾಲ ಗಜಾನನ ಕಮಿಟಿ ಸದಸ್ಯರಿಂದ, ಅನೇಕ ಉತ್ಸಾಹಿ ಯುವಕರಿಂದ ಭರ್ಜರಿಯಾಗಿ ತಯಾರಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಸಂಜೆ 6-00 ಘಂಟೆಗೆ ಮಹಾಪ್ರಸಾದ ಪ್ರಾರಂಭ ಅಗಲಿದ್ದು ನೇಸರಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಳ್ಳುತ್ತಾರೆ.