ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್; ಗಣೇಶ ವಿಸರ್ಜನೆ ಹೊತ್ತಿಗೆ ಎಚ್ಚರಿಕೆ ಸಂದೇಶ

Ravi Talawar
 ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್; ಗಣೇಶ ವಿಸರ್ಜನೆ ಹೊತ್ತಿಗೆ ಎಚ್ಚರಿಕೆ ಸಂದೇಶ
WhatsApp Group Join Now
Telegram Group Join Now

ಮುಂಬೈಸೆಪ್ಟೆಂಬರ್ 05: ನಾಳೆ ಅನಂತ ಚತುರ್ದಶಿ ಹಾಗೂ ಗಣೇಶನ ವಿಸರ್ಜನೆ ಮಾಡುವ ದಿನ. ಮುಂಬೈನಲ್ಲಿ 34 ವಾಹನಗಳಲ್ಲಿ ಮಾನವ ಬಾಂಬ್​​ಗಳನ್ನು ಇರಿಸಲಾಗಿದೆ ಎಂದು ಪೊಲೀಸರಿಗೆ ಎಚ್ಚರಿಕೆಯ ಸಂದೇಶ ಬಂದಿದ್ದು, ಪೊಲೀಸರಿಗೆ ತಲೆ ಬಿಸಿ ಶುರುವಾಗಿದೆ.  ಲಷ್ಕರ್-ಎ-ಜಿಹಾದಿ ಎಂಬ ಸಂಘಟನೆಯಿಂದ ಬಾಂಬ್ ಬೆದರಿಕೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆಮುಂಬೈಯನ್ನು ಬೆಚ್ಚಿಬೀಳಿಸುವ ಸಂದೇಶವೊಂದು ಪೊಲೀಸರಿಗೆ ಬಂದಿದೆ.  ಸಂಚಾರ ಪೊಲೀಸರ ಅಧಿಕೃತ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ನಗರದಲ್ಲಿ 34 ವಾಹನಗಳಲ್ಲಿ ಬಾಂಬ್ ಇಡಲಾಗಿದೆ ಎನ್ನುವ ಎಚ್ಚರಿಕೆ ಸಂದೇಶ ಬಂದಿದೆ.

ಲಷ್ಕರ್-ಎ-ಜಿಹಾದಿ ಎಂದು ಕರೆದುಕೊಳ್ಳುವ ಸಂಘಟನೆಯು 14 ಪಾಕಿಸ್ತಾನಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಿದ್ದಾರೆ ಮತ್ತು ಸ್ಫೋಟಗಳಿಗೆ 400 ಕೆಜಿ ಆರ್‌ಡಿಎಕ್ಸ್ ಬಳಸಲಾಗುವುದು ಎಂದು ಹೇಳಿದೆ. ಮುಂಬೈ ಪೊಲೀಸರು ಜಾಗರೂಕರಾಗಿದ್ದಾರೆ ಮತ್ತು ಇಡೀ ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬೆದರಿಕೆಯ ಪ್ರತಿಯೊಂದು ಸಾಧ್ಯತೆ ಮತ್ತು ಮೂಲವನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article