ಅಥಣಿಯಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ಕದಿಯಲು ಯತ್ನ; ಇಬ್ಬರು ಆರೋಪಿಗಳು ಬಂಧನ

Ravi Talawar
ಅಥಣಿಯಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ಕದಿಯಲು ಯತ್ನ; ಇಬ್ಬರು ಆರೋಪಿಗಳು ಬಂಧನ
WhatsApp Group Join Now
Telegram Group Join Now

ಚಿಕ್ಕೋಡಿ(ಬೆಳಗಾವಿ): ಇಬ್ಬರು ಮುಸುಕುಧಾರಿಗಳು ಕಳೆದ ತಿಂಗಳು ಅಥಣಿ ಪಟ್ಟಣದ ಚಿನ್ನದ ಅಂಗಡಿಯಲ್ಲಿ ಪಿಸ್ತೂಲ್ ತೋರಿಸಿ ಚಿನ್ನ ಕದಿಯಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅಥಣಿ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇನ್ನೊಂದೆಡೆ, ಐಗಳಿ ಪೊಲೀಸರು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದರು.

ಈ ಕುರಿತು ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಗಸ್ಟ್ 26ರಂದು ಅಥಣಿ ಪಟ್ಟಣದ ತ್ರಿಮೂರ್ತಿ ಜ್ಯೂವಲರ್ಸ್​ನಲ್ಲಿ ಇಬ್ಬರು ಆರೋಪಿಗಳು ಅಂಗಡಿಯ ಮಾಲೀಕನಿಗೆ ಪಿಸ್ತೂಲ್ ತೋರಿಸಿ ಬಂಗಾರ ದೋಚಲು ಪ್ರಯತ್ನಿಸಿದ್ದರು. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 335/2025 ಕಲಂ 309(5) ಬಿಎನ್‌ಎಸ್ -2023, 25(1A), 25(1B), 27(2) AR MS ACT 1959 ಅಡಿಯಲ್ಲಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.

WhatsApp Group Join Now
Telegram Group Join Now
Share This Article