ಬಳ್ಳಾರಿ 05.: ಸಕಾಲದಲ್ಲಿ ಫಿಜಿಯೋಥೆರಪಿ ಚಿಕಿತ್ಸೆಯನ್ನು ಪಡೆಯುವುದರಿಂದ ದೇಹಕ್ಕೆ ಮಾರಕವಾದ ಕಾಯಿಲೆಗಳಿಂದ ಮತ್ತು ಶಸ್ತ್ರ ಚಿಕಿತ್ಸೆಯಿಂದ ಪಾರಾಗಬಹುದು ಎಂದು ಡಾ. ಹರೀಶ್ ತಿಳಿಸಿದರು.
ಅವರು ಇಂದು ನಗರದ ಡಾ. ರಾಜಕುಮಾರ್ ರಸ್ತೆಯ ಅನಂತ ವಾಸುದೇವ ಹಾಸ್ಪಿಟಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿ, ಸೆಪ್ಟಂಬರ್ 8 ವಿಶ್ವ ಫಿಜಿಯೋಥೆರಪಿ ದಿನ ವಾಗಿದ್ದು ಪ್ರಯುಕ್ತ ವಾಸುದೇವ ಆಸ್ಪತ್ರೆಯಲ್ಲಿ ಉಚಿತ ಫಿಜಿಯೋಥೆರಪಿ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಇದರ ಸದುಪಯೋಗವನ್ನು ನಗರದ ಜನತೆ ಪಡೆದುಕೊಳ್ಳಬೇಕೆಂದರು.
ಫಿಜಿಯೋಥೆರಪಿಸ್ಟ್ ಡಾಕ್ಟರ್ ಪ್ರಣತಿ ಮಾತನಾಡಿ, ಒಂದೇ ಸೂರಿನ ಅಡಿಯಲ್ಲಿ ಎಲ್ಲಾ ಚಿಕಿತ್ಸೆ ಎಂಬ ಧ್ಯೇಯ ವಾಕ್ಯದೊಂದಿಗೆ ನಮ್ಮ ಆಸ್ಪತ್ರೆಯಲ್ಲಿ, ಕ್ಯಾನ್ಸರ್, ಇಎನ್ಟಿ, ಜಾಯಿಂಟ್ ಪೇನ್ಸ್ ನರರೋಗ, ತಿರುವಿದ ಎಲುಬು, ಮಕ್ಕಳಲ್ಲಿನ ಮಾತನಾಡುವ ತೊಂದರೆ, ನಡೆದಾಡುವ ತೊಂದರೆ ಸೇರಿದಂತೆ ಎಲ್ಲಾ ರೋಗಕ್ಕೂ ಕೋಲ್ಡ್ ಲೇಸರ್ ಮೂಲಕ ಫಿಜಿಯೋಥೆರಪಿಯ ಸೂಕ್ತ ಚಿಕಿತ್ಸೆಯನ್ನು ನೀಡಿ ಶಸ್ತ್ರ ಚಿಕಿತ್ಸೆ ಇಲ್ಲದೆ ಗುಣಪಡಿಸಲಾಗುವುದು ಎಂದರು.
ಈ ಪತ್ರಿಕಾಗೋಷ್ಠಿಯಲ್ಲಿ ಡಾಕ್ಟರ್ ಅಕಿಲ್ ರಾವ್ ಡಾಕ್ಟರ್ ಜಯಲಕ್ಷ್ಮಿ ನೇಕಾರ್ ಡಾಕ್ಟರ್ ರಾಕೇಶ್ ಮಾಣಿಕ್ ರಾವ್ ಡಾಕ್ಟರ್ ಅಖಿಲ್ ರಾವ್ ಸೇರಿದಂತೆ ಕಿರಿಯ ವೈದ್ಯರು ಮತ್ತು ವೈದ್ಯಕೀಯೇತರ ಸಿಬ್ಬಂದಿಗಳು ಇದ್ದರು