ನಾಯಕನಹಟ್ಟಿಯಲ್ಲಿ ಶಕ್ತಿ ಗಣಪತಿ ಮಹೋತ್ಸವದ ಹಾಸ್ಯ ನಾಟಕ ಜನಮನ ಸೆಳೆಯಿತು

Ravi Talawar
ನಾಯಕನಹಟ್ಟಿಯಲ್ಲಿ ಶಕ್ತಿ ಗಣಪತಿ ಮಹೋತ್ಸವದ ಹಾಸ್ಯ ನಾಟಕ ಜನಮನ ಸೆಳೆಯಿತು
WhatsApp Group Join Now
Telegram Group Join Now
ಚಿತ್ರದುರ್ಗ,5.  ಜಿಲ್ಲೆಯ ಚಳ್ಳಕೆರೆ ತಾಲೂಕಿನ    ಸೂಫಿ ಸಂತರ ಭಾವೈಕ್ಯತೆಯ ನಾಡು ನಾಯಕನಹಟ್ಟಿ ಗ್ರಾಮದ ಬಿಳೆಕಲ್ಲು ಗೆಳೆಯರ ಬಳಗದ ವತಿಯಿಂದ 33ನೇ ವರ್ಷದ ಶಕ್ತಿ ಗಣಪತಿ ಮಹೋತ್ಸವ ಭವ್ಯವಾಗಿ ಜರುಗಿತು. ಈ ಸಂದರ್ಭದಲ್ಲಿ ಬಳ್ಳಾರಿಯ ಮಹಾ ದೇವಾ ತಾತ ಕಲಾ ಸಂಘ (ರಿ)ಹಂದ್ಯಾಳು  ಕಲಾವಿದರು. ದಿವಂಗತ ಶಂಕರ ನಾಯ್ಡು ಅವರ ಕೃತಿ ‘ಧನ ಕಾಯುವರ ದೊಡ್ಡಟ’ ಹಾಸ್ಯ ನಾಟಕವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದರು.
ಅಕ್ಷರಜ್ಞಾನದ ಮಹತ್ವವನ್ನು ಮನರಂಜನಾತ್ಮಕ ರೀತಿಯಲ್ಲಿ ತಲುಪಿಸಿದ ಈ ನಾಟಕ, ಸಾಕ್ಷರತಾ ಸಂದೇಶವನ್ನು ಜನಮನದಲ್ಲಿ ಬಿತ್ತಿತು. ಪಾತ್ರ ನಿರ್ವಹಣೆ:ಸಾರಥಿಯಾಗಿ  ಪುರುಷೋತ್ತಮ ಹಂದ್ಯಾಳು   ಗಣಪತಿಯಾಗಿ ದಾನಯ್ಯಸ್ವಾಮಿ, ದುರ್ಯೋಧನನಾಗಿ ಅಂಬರೀಶ್ ಹಚ್ಚೊಳ್ಳಿ, ದುಶ್ಯಾಸನನಾಗಿ ಪಾರ್ವತೀಶ ಗೆಣಿಕೆಹಾಳ್, ದ್ರೌಪದಿ ಮತ್ತು ನೃತ್ಯಗಾರ್ತಿಯಾಗಿ ಮೌನೇಶ್ ಕಲ್ಲಳ್ಳಿ, ನಕುಲ-ಸಹದೇವರಾಗಿ ಗುರು ಮೋಕ.ಮತ್ತು ಲಿಂಗಪ್ಪ ಹಂದ್ಯಾಳು, ಕೃಷ್ಣನಾಗಿ ಕುಮಾರಗೌಡ  ಅಮರಪುರ ಹಾಗೂ ಕಥಾಸಂಚಾಲಕನಾಗಿ ಸುಂಕಣ್ಣ ಹೊಸಯರಗುಡಿ .
ರುದ್ರಮುನಿ ಸ್ವಾಮಿ ಪ್ರೇಕ್ಷಕರನ್ನು ರಂಜಿಸಿದರು
ಎರ್ರಿಸ್ವಾಮಿ ಆಚಾರ್ ಹಾರ್ಮೋನಿಯಂನಲ್ಲಿ, ಗಾದಿಲಿಂಗಪ್ಪ ಅಮರಾಪುರ ತಬಲಾದಲ್ಲಿ ಕಲಾವಿದರಿಗೆ ಸಂಗೀತಸಾಥ್ ನೀಡಿದರು.ಜನಸಂದಣಿಯಲ್ಲಿ ನಡೆದ ಈ ನಾಟಕವು ಮನರಂಜನೆ ಮತ್ತು ಸಂದೇಶ ಎರಡನ್ನೂ ಒಟ್ಟಿಗೆ ತಂದುಕೊಂಡು ಯಶಸ್ವಿಯಾಯಿತು.
WhatsApp Group Join Now
Telegram Group Join Now
Share This Article