ಬಳ್ಳಾರಿ, ಸೆ.03: ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿಯವರು ಬುಧವಾರ ನಗರದ ವಿವಿಧ ವಾರ್ಡಗಳಲ್ಲಿ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಅಂದಾಜು 20 ಲಕ್ಷ ರೂ.ಗಳ ವೆಚ್ಚದ ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗೆ 20ನೇ ವಾರ್ಡಿನ ಮಾರುತಿ ಕಾಲೋನಿಯಲ್ಲಿ ಚಾಲನೆ ನೀಡಲಾಯಿತು. ವಾರ್ಡಿನ ಪಾಲಿಕೆಯ ಸದಸ್ಯ ಪೇರಂ ವಿವೇಕ್, ಮಾಜಿ ಮೇಯರುಗಳಾದ ಎಂ.ರಾಜೇಶ್ವರಿ, ನಾಗಮ್ಮ, ಕಾಂಗ್ರೆಸ್ ಮುಖಂಡ ಸುಬ್ಬರಾಯುಡು, ರಾಜು, ರಘು ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.
ತದನಂತರ ವಾರ್ಡ್ ಸಂಖ್ಯೆ 09ರ ಡಿ.ಸಿ.ಕಾಲೋನಿಯ ರಸ್ತೆ ನಿರ್ಮಾಣಕ್ಕಾಗಿ (9.52 ಲಕ್ಷ ರೂ.ಗಳು ಮತ್ತು 11.13 ಲಕ್ಷ ರೂ.ಗಳ) 2 ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭ ವಾರ್ಡಿನ ಪಾಲಿಕೆಯ ಸದಸ್ಯ ಜಬ್ಬಾರ್, ಎಪಿಎಂಸಿ ಅಧ್ಯಕ್ಷ ಕಟ್ಟೇಮನೆ ನಾಗೇಂದ್ರ, ಮಾಜಿ ಮೇಯರ್ ಎಂ.ರಾಜೇಶ್ವರಿ, ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ಕಾಂಗ್ರೆಸ್ ಮುಖಂಡ ಹೊನ್ನಪ್ಪ, ಹಗರಿ ಗೋವಿಂದ, ಸುಬ್ಬರಾಯುಡು ಮತ್ತಿತರರು ಹಾಜರಿದ್ದರು.
ಅದೇ ರೀತಿ ವಾರ್ಡ್ ಸಂಖ್ಯೆ 8 ರ ಅಂದ್ರಾಳು ಗ್ರಾಮದ ಮಳೆ ನೀರು ಚರಂಡಿ ನಿರ್ಮಾಣಕ್ಕಾಗಿ 80 ಲಕ್ಷ ರೂ.ಗಳ ಅನುದಾನದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು. ಅದೇ ರೀತಿ ಸರ್ಕಾರಿ ಪ್ರಾಥಮಿಕ ಶಾಲೆಯ 5 ನೂತನ ಕೊಠಡಿಗಳ ನಿರ್ಮಾಣಕ್ಕೆ 98 ಲಕ್ಷ ರೂ.ಗಳ ಅನುದಾನದ ಕಾಮಗಾರಿಗೆ ಶಾಸಕ ನಾರಾ ಭರತ್ ರೆಡ್ಡಿ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಪಾಲಿಕೆಯ ಸದಸ್ಯ ರಾಮಾಂಜನೇಯ ಸೇರಿದಂತೆ ಹಲವರು ಹಾಜರಿದ್ದರು.
ಅಂದ್ರಾಳು ಗ್ರಾಮದ ಮಸೀದಿಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಶಾಸಕ ನಾರಾ ಭರತ್ ರೆಡ್ಡಿ, ಮತ್ತಿತರರನ್ನು ಸನ್ಮಾನಿಸಿದರು.