ಪೇವರ್ಸ್ ಅಳವಡಿಕೆ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

Ravi Talawar
ಪೇವರ್ಸ್ ಅಳವಡಿಕೆ ಕಾಮಗಾರಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ
WhatsApp Group Join Now
Telegram Group Join Now
ಖಾನಾಪುರ: ಖಾನಾಪುರ ತಾಲೂಕಿನ ಬಿಜಗರ್ಣಿ ಗ್ರಾಮದ ರಾಜಾರಾಮ ಶಿಂದೆ ಇವರ ಮನೆಯಿಂದ ಶಿವಾಜಿ ಮೂರ್ತಿಯವರೆಗೆ ಫೇವರ್ಸ್ ಅಳವಡಿಕೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಚಾಲನೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ 2025-26 ನೇ ಸಾಲಿನ ಬಂಡವಾಳ ವೆಚ್ಚ ಲೆಕ್ಕ ಶೀರ್ಷಿಕೆ ಯೋಜನೆಯಡಿ ಸುಮಾರು 10 ಲಕ್ಷ ರೂ,ಗಳ ವೆಚ್ಚದಲ್ಲಿ ಫೇವರ್ಸ್ ಅಳವಡಿಕೆಯ ಕಾಮಗಾರಿ ನಡೆಯಲಿದೆ.
ಈ ವೇಳೆ ಯಶವಂತ ಬಿರ್ಜೆ, ಮಹಾದೇವ ಗಾಡಿ, ಜ್ಯೋತಿಬಾ ಗುರವ, ಸಾತೇರಿ ಬೆಳವಟ್ಕರ್, ಇರ್ಫಾನ್ ತಾಳಿಕೋಟಿ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ದುರ್ವಾ ಸುತಾರ್, ಉಪಾಧ್ಯಕ್ಷರಾದ ಗುಂಜಪ್ಪ ಮಿರಾಸಿ ಸೇರಿದಂತೆ ಸರ್ವ ಸದಸ್ಯರು, ಗ್ರಾಮಸ್ಥರು ಇದ್ದರು.
WhatsApp Group Join Now
Telegram Group Join Now
Share This Article