ವಿಜಯಪುರ: ಅನಾಫೀಲಿಸ್ ಎಂಬ ಹೆಣ್ಣು ಸೊಳ್ಳೆ ಮನುಷ್ಯನ ಕಚ್ಚಿದಾಗ ಮಲೇರಿಯಾ ರೋಗ ಬರುತ್ತದೆ ಎಂದು ಡಾ. ರೋನಾಲ್ಡ್ ರಾಸ್ ಅವರು ಕಂಡುಹಿಡಿದ ನೆನಪಿಗಾಗಿ ಪ್ರತಿ ವರ್ಷ ಆಗಸ್ಟ್ 20 ರಂದು ವಿಶ್ವ ಸೊಳ್ಳೆ ದಿನವನ್ನು ಆಚರಿಸುತ್ತಿದ್ದೇವೆ ಎಂದು ಮುಖ್ಯ ಗುರುಗಳಾದ ಟಿ ವಿ ನರಳೆ ತಿಳಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಶಿವಣಗಿ ಸಹಯೋಗದಲ್ಲಿ, ಹಡಗಲಿ ತಾಂಡಾ ನಂಬರ್ ಎರಡರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವ ಸೊಳ್ಳೆ ದಿನವನ್ನು ಉದ್ದೇಶಿಸಿ ಮಾತನಾಡಿದವರು ಸೊಳ್ಳೆಗಳು ಸರ್ವಂತಯಾಮಿ, ಮನೆ ಮತ್ತು ಕಟ್ಟಡಗಳ ಸುತ್ತಮುತ್ತ ನಿಂತ ನೀರಿನಲ್ಲಿ ಮೊಟ್ಟೆಗಳ ನಿಟ್ಟು ವಂಶಾಭಿವೃದ್ಧಿಯಾಗಿ ಸೊಳ್ಳೆಗಳು ಸಮೃದ್ಧಿ ಆಗುತ್ತವೆ, ಆದಕಾರಣ ಸೊಳ್ಳೆಗಳ ನಿಯಂತ್ರಣ ಬಹು ಮುಖ್ಯ ಎಂದರು. ನಂತರ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ಆರ್ ಎಸ್ ಪಾಟೀಲ್ ವಿಶ್ವ ಸೊಳ್ಳೆ ದಿನದಂದು ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ, ಸೊಳ್ಳೆ ಕಚ್ಚುವಿಕೆಯಿಂದ ಸ್ವಯಂರಕ್ಷಣೆಯ ಉಪಾಯಗಳು, ಸೊಳ್ಳೆಗಳಿಂದ ಬರುವ ಕಾಯಿಲೆಗಳು ಮತ್ತು ಅವುಗಳ ಲಕ್ಷಣಗಳ ಬಗ್ಗೆ ವಿವರವಾಗಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿಸಿದರು. ನಂತರ ಮಾತನಾಡಿದ ಸಹ ಶಿಕ್ಷಕರಾದ ಎ ಸಿ ಮೂಲಿಮನಿ ಮಳೆಗಾಲದಲ್ಲಿ ಸೊಳ್ಳೆಗಳ ಉತ್ಪತ್ತಿ ಅಧಿಕವಾಗುವ ಸಮಯ, ಎಲ್ಲ ವಿದ್ಯಾರ್ಥಿ /ವಿದ್ಯಾರ್ಥಿನಿಯರು ತಮ್ಮ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನಿಗಾ ವಹಿಸಬೇಕು, ನೀರು ಸಂಗ್ರಹ ವಸ್ತುಗಳನ್ನು ನಾಲ್ಕರಿಂದ ಐದು ದಿನಗಳಿಗೊಮ್ಮೆ ತೊಳೆದು ಮತ್ತೆ ನೀರನ್ನು ಸಂಗ್ರಹ ಮಾಡಿ ಮೇಲೆ ಭದ್ರವಾಗಿ ಮುಚ್ಚಬೇಕು ಹಾಗೆ ನಿರೂಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದ ಹಾಗೆ ನೋಡಿಕೊಂಡು ಅವುಗಳನ್ನು ವಿಲೇವಾರಿ ಮಾಡಿ, ಸೊಳ್ಳೆಗಳಿಂದ ಬರುವ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ, ಮೆದಳು ಜ್ವರದಂತ ಕಾಯಿಲೆಗಳು ಬರದಂತೆ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಶಾಲೆಯ ಸಹ ಶಿಕ್ಷಕರಾದ ಎಂ ಬಿ ನದಾಫ್, ಆರ್ ಎಸ್ ಹಜೇರಿ, ಕೆ ಎ ಮುಜಾವರ್, ಪಿ ಬಿ ಕುಮಾನಿ ಮತ್ತು ಶಾಲೆಯ ಎಲ್ಲ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.